ಕೇಂದ್ರ ಕಾರ್ಮಿಕ ಒಕ್ಕೂಟಗಳ ಭಾರತ್ ಬಂದ್ – ಅಸಮಾಧಾನ ವ್ಯಕ್ತಪಡಿಸಿದ ಕಾಸಿಯಾ

ಬೆಂಗಳೂರು, ಜ.9- ತಮ್ಮ ಅನೇಕ ಕುಂದುಕೊರತೆಗಳು ಮತ್ತು ಬೇಡಿಕೆಗಳ ಈಡೇರಿಕೆಗಾಗಿ ಆಗ್ರಹಿಸಿ ಕೇಂದ್ರ ಕಾರ್ಮಿಕ ಒಕ್ಕೂಟಗಳು ನಿನ್ನೆಯಿಂದ ಎರಡು ದಿನಗಳ ಭಾರತ್ ಬಂದ್ ಹಾದಿ ತುಳಿದಿರುವುದಕ್ಕೆ ಕರ್ನಾಟಕ ಸಣ್ಣ ಕೈಗಾರಿಕೆಗಳ ಸಂಘ( ಕಾಸಿಯಾ) ವಿಷಾದ ಮತ್ತು ಅಸಮಾಧಾನ ವ್ಯಕ್ತಪಡಿಸಿದೆ.

ಈ ಬಂದ್‍ನಿಂದಾಗಿ ಸಮಸ್ಯೆಗಳು ಬಗೆಹರಿಸುವುದಿಲ್ಲ ಎಂಬುದು ನಮ್ಮ ಬಲವಾದ ನಂಬಿಕೆ. ಬದಲಿಗೆ ಇದರಿಂದ ಸಾಮಾನ್ಯ ಜನಜೀವನಕ್ಕೆ ಅಡ್ಡಿ, ತೊಂದರೆ ಮತ್ತು ನಷ್ಟಕ್ಕೆ ಕಾರಣವಾಗುತ್ತದೆ. ಸಣ್ಣ ಕೈಗಾರಿಕೆಗಳು ಈಗಾಗಲೇ ತೀವ್ರ ಸಂಕಷ್ಟಕ್ಕೆ ಸಿಲುಕಿದ್ದು, ಬಂದ್‍ನಿಂದ ಅದು ಮತ್ತಷ್ಟು ಹೆಚ್ಚಾಗುತ್ತದೆ ಎಂದು ಕಾಸಿಯಾ ಅಧ್ಯಕ್ಷ ಎಸ್.ಬಸವರಾಜ್ ಎಸ್.ಜವಳಿ ಮತ್ತು ಮಹಾ ಪ್ರಧಾನ ಕಾರ್ಯದರ್ಶಿ ಗುರುಕಿರಣ್ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ಧಾರೆ.

ಉದ್ಯಮದ ಮೇಲೆ ಅದರಲ್ಲೂ ಸಣ್ಣ ಮತ್ತು ಮಧ್ಯಮ ಪ್ರಮಾಣದ ಕೈಗಾರಿಕೆಗಳು ಹಾಗೂ ಆರ್ಥಿಕತೆ ಮೇಲೆ ಬಂದ್ ದುಷ್ಪರಿಣಾಮ ಬೀರುವುದರಿಂದ ಇದಕ್ಕೆ ಬೆಂಬಲ ನೀಡುವುದರಲ್ಲಿ ಅರ್ಥವಿಲ್ಲ. . ಬಂದ್ ಅದೂ ಎರಡು ದಿನಗಳ ಕಾಲ ನಡೆದಿರುವುದರಿಂದ ಜನರಿಗೆ ಗಣನೀಯವಾಗಿ ಸಂಕಷ್ಟಕ್ಕೆ ಕಾರಣವಾಗುತ್ತದೆ ಹಾಗೂ ಕೈಗಾರಿಕೆ ಮತ್ತು ವಾಣಿಜ್ಯ ಚಟುಟಿಕೆಗಳಿಗೆ ಇದರಿಂದ ಅಡ್ಡಿಯಾಗುವುದರಿಂದ ಆರ್ಥಿಕತೆಗೆ ನಷ್ಟವಾಗುತ್ತದೆ ಎಂದು ಅವರು ಬೇಸರ ವ್ಯಕ್ತಪಡಿಸಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ