
12ನೇ ಆವೃತ್ತಿಯ ಶ್ರೀಮಂತರ ಕ್ರಿಕೆಟ್ ಟೂರ್ನಿ ಐಪಿಎಲ್ ಟೂರ್ನಿ ಮಾರ್ಚ್ 23 ರಿಂದ ಅದ್ದೂರಿಯಾಗಿ ಆರಂಭವಾಗಲಿದೆ. ಈ ಬಾರಿಯೂ ಭಾರತದಲ್ಲಿಯೇ ನಡೆಯಲಿದೆ ಅನ್ನೋದು ಮತ್ತೊಂದು ವಿಶೇಷ.
ಈ ಬಾರಿ ಸಾರ್ವತ್ರಿಕ ಲೋಕಸಭೆ ಚುನಾವಣೆ ನಡೆಯಲಿರುವ ಹಿನ್ನೆಲೆಯಲ್ಲಿ ಈ ಬಾರಿಯ ಐಪಿಎಲ್ ಟೂರ್ನಿ ದುಬೈ ಅಥವಾ ದಕ್ಷಿಣ ಆಫ್ರಿಕಾದಲ್ಲಿ ನಡೆಯಲಿದೆ ಎಂದು ಹೇಳಲಾಗುತ್ತಿತ್ತು. ಆದರೆ ಭಾರತದಲ್ಲೆ ಐಪಿಎಲ್ ನಡೆಯಲಿದೆ ಅನ್ನೋದನ್ನ ಐಪಿಎಲ್ ಮಂಡಳಿ ತನ್ನ ಅದಿಕೃತ ಟ್ವಿಟರ್ನಲ್ಲಿ ಹೇಳಿಕೊಂಡಿದೆ. ಆದರೆ ಟೂರ್ನಿಯ ವೇಳಾಪಟ್ಟಿ ಇನ್ನು ಪ್ರಕಟಗೊಂಡಿಲ್ಲ