
ಬೆಂಗಳೂರು,ಜ.08-ಆದರೆ ಹುಟ್ಟುಹಬ್ಬದ ಸಂಭ್ರಮವನ್ನು ಆಚರಿಸಿಕೊಳ್ಳದಿರಲು ಯಶ್ ನಿರ್ಧರಿಸಿದ್ದಾರೆ.
ತಮ್ಮ ಕುಟುಂಬದ ಹಿರಿಯರಾದ ರೆಬಲ್ಸ್ಟಾರ್ ಅಂಬರೀಶ್ ಅವರ ನಿಧನದ ಹಿನ್ನೆಲೆಯಲ್ಲಿ ಈ ಬಾರಿಯ ಹುಟ್ಟುಹಬ್ಬ ಆಚರಿಸಿಕೊಳ್ಳದಿರಲು ಮೊದಲೇ ಯಶ್ ನಿರ್ಧರಿಸಿದ್ದರು. ಇದನ್ನು ತಮ್ಮ ಅಭಿಮಾನಿಗಳಿಗೂ ಕೂಡ ತಿಳಿಸಿದ್ದರು.
ಯಶೋ ಮಾರ್ಗದ ಮೂಲಕ ಹಲವು ಸಾಮಾಜಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿರುವ ಯಶ್ ಅವರು, ಸದ್ಯದಲ್ಲೇ ನಾನು ನಿಮ್ಮ ಮುಂದೆ ಬರುತ್ತೇನೆ. ಕೆಜಿಎಫ್ ಚಿತ್ರದ ಯಶಸ್ಸನ್ನು ಹಂಚಿಕೊಳ್ಳೋಣ.ಅಲ್ಲಿಯವರೆಗೆ ತಾಳ್ಮೆಯಿಂದಿರಿ. ಹುಟ್ಟುಹಬ್ಬದ ಖುಷಿ ಬೇಡ.ನಮ್ಮ ಅಂಕಲ್ ನಿಧನದ ದುಃಖದಿಂದ ನಾವಿನ್ನೂ ಹೊರಗೆ ಬಂದಿಲ್ಲ. ನನ್ನ ಭಾವನೆಯನ್ನು ಎಲ್ಲರೂ ಗೌರವಿಸುತ್ತೀರಾ ಎಂದು ನಂಬಿದ್ದೇನೆ. ಎಲ್ಲರಿಗೂ ಹೊಸ ವರ್ಷದ ಶುಭಾಶಯಗಳು ಎಂದು ಸಂದೇಶ ನೀಡಿದ್ದಾರೆ.
ಕೆಜಿಎಫ್ ಚಿತ್ರದ ಯಶಸ್ಸು ಹಾಗೂ ಡಿಸೆಂಬರ್ನಲ್ಲಿ ಜನಿಸಿದ ಮಗಳು ಈ ಎರಡು ಡಬಲ್ ಧಮಾಕಾದ ಖುಷಿ ಹಂಚಿಕೊಳ್ಳಲು ಅಭಿಮಾನಿಗಳು ಉತ್ಸುಕರಾಗಿದ್ದರು. ಹುಟ್ಟುಹಬ್ಬದ ಅಂಗವಾಗಿ ಹಲವು ಕಾರ್ಯಕ್ರಮಗಳನ್ನು ಏರ್ಪಡಿಸಿದ್ದರು. ಯಶ್ ಅವರ ನಿರ್ಧಾರದಿಂದ ಅಭಿಮಾನಿಗಳ ಎಲ್ಲಾ ಸಂಭ್ರಮಕ್ಕೆ ಬ್ರೇಕ್ ಬಿದ್ದಿದೆ.