ಕೇರಳದಿಂದ ತ್ಯಾಜ್ಯವನ್ನು ತಂದು ಮೈಸೂರು ತಾಲ್ಲೂಕ್ಕಿನಲ್ಲಿ ಸುರಿದು ಹೋಗುತ್ತಿದ್ದ ಇಬ್ಬರ ವಿರುದ್ಧ ಪ್ರಕರಣ ದಾಖಲಿಸಿಕೊಂಡ ಪೊಲೀಸರು

ಮೈಸೂರು,ಜ.8-ಕೇರಳದಿಂದ ತಂದ ತ್ಯಾಜ್ಯವನ್ನು ಮೈಸೂರು ತಾಲ್ಲೂಕಿನಲ್ಲಿ ಸುರಿದು ಹೋಗುತ್ತಿದ್ದ ಇಬ್ಬರ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಚಿಕ್ಕಬುದ್ದಿ ಮತ್ತು ಮೊಹಮ್ಮದ್ ಹುಸೇನ್ ಎಂಬುವರ ವಿರುದ್ಧ ಜಯಪುರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತ್ಯಾಜ್ಯ ತುಂಬಿದ ಮೂರು ಲಾರಿಗಳನ್ನು ಜಪ್ತಿ ಮಾಡಿದ್ದಾರೆ.

ಡಿಸಾಲುಂಡಿ ಗ್ರಾಮದಚಿಕ್ಕಬುದ್ದ ಅವರು  ತಮ್ಮ ಒಂದು ಎಕರೆ ಜಮೀನನ್ನು ನಗರದ ಮೊಹಮ್ಮದ್ ಹುಸೇನ್ ಎಂಬುವರಿಗೆ ಭೋಗ್ಯಕ್ಕೆ ನೀಡಿದ್ದರು. ಹುಸೇನ್ ಈ ಜಾಗದಲ್ಲಿ ನೆರೆ ರಾಜ್ಯ ಕೇರಳದಿಂದ ತ್ಯಾಜ್ಯವನ್ನು ತರಿಸಿಕೊಂಡು ಜಮೀನಿನಲಿ  ವಿಂಗಡಣೆ ಮಾಡುತ್ತಿದ್ದರು. ಉಳಿದ ತ್ಯಾಜ್ಯವನ್ನು ಅಲ್ಲಿಯೇ ಬಿಟ್ಟು ಹೋಗುತ್ತಿದ್ದರು.

ಈ ಬಗ್ಗೆ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದು,  ಸ್ಥಳಕ್ಕೆ ಮಾಲಿನ್ಯ ನಿಯಂತ್ರಣ ಮಂಡಳಿ ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿದಾಗ  ಆರೋಗ್ಯಕ್ಕೆ ಮಾರಕವಾಗುವಂತಹ ತ್ಯಾಜ್ಯಎಂಬುದು ಕಂಡುಬಂದಿದ್ದು, ಪೊಲೀಸರಿಗೆ ಕ್ರಮ ಕೈಗೊಳ್ಳುವಂತೆ ಸೂಚಿಸಿದರು.

ಈ ಹಿನ್ನೆಲೆಯಲ್ಲಿ ಪೊಲೀಸರು ಚಿಕ್ಕಬುದ್ದಿ ಮತ್ತು  ಮೊಹಮ್ಮದ್ ಹುಸೇನ್ ವಿರುದ್ದ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ