ಧಾರವಾಡ,ಜ.6- ವಿದ್ಯಾನಗರಿಯಲ್ಲಿ ಕಳೆದ ಮೂರು ದಿನಗಳಿಂದ ನಡೆದ 84ನೇ ಅಖಿಲ ಭಾರತಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಇಂದು ವೈಭವದತೆರೆ ಬಿದ್ದಿತು.
ಸಮ್ಮೇಳನದ ಮೊದಲ ದಿನ ಸಮ್ಮೇಳನಾಧ್ಯಕ್ಷರ ಭ್ಯವ ಮೆರವಣಿಗೆಯಲ್ಲಿರಾಜ್ಯದ ಸಾಂಸ್ಕøತಿಕ ಸಿರಿ ಅನಾವರಣಗೊಂಡಿತು.
ಮೂರು ದಿನಗಳ ಕಾಲ ಪ್ರಧಾನ ವೇದಿಕೆ ಹಾಗೂ ಸಮಾನಾಂತರ ವೇದಿಕೆಗಳಲ್ಲಿ ನಡೆದ ಗೋಷ್ಠಿಗಳು ಸಾಹಿತ್ಯದ ಸವಿಯನ್ನು ಉಣಿಸಿದವು.
ಕನ್ನಡ ಭಾಷೆ, ನೆಲ, ಜಲ, ಸಂಸ್ಕøತಿ ಸೇರಿದಂತೆ ಹತ್ತು ಹಲವು ಆಯಾಮಗಳ ಕುರಿತು ಸಂವಾದಗಳು, ಚರ್ಚೆಗಳು ಹೊಸದೊಂದು ಹೊಳಹುಗಳನ್ನೇ ಹುಟ್ಟುಹಾಕಿದವು.
ಸಾಹಿತಗಳು ಹಾಗೂ ಪ್ರಭುತ್ವದ ನಡುವೆಇಂಗ್ಲಿಷ್ ಮಾಧ್ಯಮಕುರಿತಾದಕಿಡಿ ಹೊತ್ತಿಚರ್ಚೆಗೆಗ್ರಾಸವಾದುದು ವಿಶೇಷ.
ಎಲ್ಲೆಲ್ಲೂಕನ್ನಡಧ್ವಜ, ತಳಿರು ತೋರಣ, ಇಡೀ ವಿದ್ಯಾನಗರಿಯೇ ಅರಿಶಿನ, ಕುಂಕುಮ ಬಣ್ಣದಲ್ಲಿ ಮಿಂದೆದ್ದಿತ್ತು.
ರಾಜ್ಯದ ನಾನಾ ಭಾಗಗಳಿಂದ ಲಕ್ಷೋಪ ಲಕ್ಷಜನ ಸಮ್ಮೇಳನದಲ್ಲಿ ಸಾಹಿತ್ಯದ ಸಿರಿಯನ್ನು ಕಣ್ತುಂಬಿಕೊಂಡರು.
ವಿದ್ಯಾರ್ಥಿಗಳು ಸಮ್ಮೇಳನದಲ್ಲಿ ಪಾಲ್ಗೊಂಡುತಮ್ಮಲ್ಲಿನ ಸಾಹಿತ್ಯಾಸಕ್ತಿಯನ್ನು ಮೆರೆದರು.
ನಾಡಿನ ಹೆಸರಾಂತ ಸಾಹಿತಿಗಳು, ಕವಿಗಳು, ಉದಯೋನ್ಮುಖ ಬರಹಗಾರರು, ಚಿಂತಕರು ಮೇಳೈಸಿದ್ದ ಸಾಹಿತ್ಯ ಸಮ್ಮೇಳನದಲ್ಲಿ ಅರ್ಥಪೂರ್ಣ ಚರ್ಚೆಗಳು ನಡೆದವು.
ಸಮ್ಮೇಳನ ಆರಂಭಕ್ಕೂ ಮುನ್ನವೇ ಸುಮಂಗಲಿ ಶಬ್ಧದಕುರಿತುಎದ್ದಚರ್ಚೆ ನಿಧಾನವಾಗಿಕರಗಿತು.ಇಂಗ್ಲಿಷ್ ಮಾಧ್ಯಮಕುರಿತಾಗಿಚಂದ್ರಶೇಖರ ಪಾಟೀಲರ ಮಾತುಗಳು ಪ್ರಭುತ್ವವನ್ನೇ ಕೆರಳಿಸಿ, ವಾದಪ್ರತಿವಾದಕ್ಕೆಎಡೆ ಮಾಡಿಕೊಟ್ಟಿತು.
ಅಲ್ಲಲ್ಲಿ ಸಣ್ಣ ಪುಟ್ಟ ದೋಷಗಳು ಇಣುಕಿದರೂ, ಸಾಹಿತ್ಯಾಸಕ್ತರು ಸಹಿಸಿಕೊಂಡರು.
ಈ ಬಾರಿ ನವ ಕರ್ನಾಟಕ, ಅಂಕಿತ, ಅಕ್ಷರ ಸೇರಿಂತೆ ನೂರಾರು ಪ್ರಕಾಶನಗಳು ಸಮ್ಮೇಳನದಲ್ಲಿ ಮಳಿಗೆಗಳನ್ನು ತೆರೆದಿದ್ದವು.ಕಳೆದ ಮೂರು ದಿನಗಳಲ್ಲೂ ಪುಸ್ತಕ ವ್ಯಾಪಾರ ಭರ್ಜರಿಯಾಗಿಯೇ ನಡೆಯಿತು.
ಕೆಲವರುರಿಯಾಯಿತಿದರದಲ್ಲಿ ಪುಸ್ತಕ ಮಾರಾಟ ಮಾಡುತ್ತಿದ್ದುದರಿಂದ ಪುಸ್ತಕ ಪ್ರೇಮಿಗಳು ಮುಗಿಬಿದ್ದು ಪುಸ್ತಕಗಳನ್ನು ಕೊಂಡುಕೊಂಡರು.ಅಂದಾಜಿನ ಪ್ರಕಾರ 2ಕೋಟಿ ರೂ.ಗೂ ಹೆಚ್ಚಿನ ವಹಿವಾಟು ನಡೆದಿದೆಎನ್ನಲಾಗಿದೆ.
ಇನ್ನು ಬೀದಿ ಬದಿ ವ್ಯಾಪಾರಿಗಳಿಗಂತೂ ಸುಗ್ಗಿಯೋ ಸುಗ್ಗಿ.
ಇಂದುಕೂಡ ಸಮ್ಮೇಳನಕ್ಕೆ ಜನಸಾಗರವೇ ಹರಿದು ಬಂದಿತು.
ಕನ್ನಡದ ಬಗೆಗಿನ ಚಿಂತನೆ, ಚರ್ಚೆ, ಸಂವಾದಗಳಿಂದ ಕನ್ನಡಕ್ಕೆ ಹೊಸದೊಂದು ಮೆರಗು ನೀಡುವ ನಿಟ್ಟಿನಲ್ಲಿ ಕನ್ನಡಾಭಿಮಾನಿಗಳು ಉತ್ಸುಕತೆಯಿಂದ ಮುಂದಾಗಿದ್ದು ವಿಶೇಷ.ಒಟ್ಟಿನಲ್ಲಿ ಮೂರುದಿನಗಳ ಸಮ್ಮೇಳನಕ್ಕೆ ಇಂದು ವೈಭವದತೆರೆ ಬಿದ್ದಿದೆ.