ರಾಜ್ಯ ಸರ್ಕಾರ ಇಂಗ್ಲೀಷ್ಮಾಧ್ಯಮ ಶಾಲೆಗಳನ್ನು ತೆರೆಯಲು ಮುಂದಾಗಿರುವುದಕ್ಕೆ ವಿರೊಧ ವ್ಯಕ್ತಪಡಿಸಿದ ಡಾ.ಚಂದ್ರಶೇಖರಕಂಬಾರ ನೇತೃತ್ವದ ಸಭೆ

ಧಾರವಾಡ,ಜ.7-ರಾಜ್ಯ ಸರ್ಕಾರತೆರೆಯಲು ಉದ್ದೇಶಿಸಿರುವ 1 ಸಾವಿರಇಂಗ್ಲಿಷ್ ಮಾಧ್ಯಮ ಶಾಲೆಗಳಿಗೆ ಸಾರಸ್ವತ ದಿಗ್ಗಜರುಒಕ್ಕೊರಲ ವಿರೋಧ ವ್ಯಕ್ತಪಡಿಸಿದ್ದಾರೆ.

84ನೇ ಅಖಿಲ ಭಾರತಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಸಮ್ಮೇಳನಾಧ್ಯಕ್ಷ ಡಾ.ಚಂದ್ರಶೇಖರಕಂಬಾರ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಈ ನಿರ್ಣಯ ಕೈಗೊಳ್ಳಲಾಗಿದೆ.

ರಾಜ್ಯ ಸರ್ಕಾರಇಂಗ್ಲಿಷ್ ಮಾಧ್ಯಮ ಶಾಲೆಗಳನ್ನು ತೆರೆಯಲು ಮುಂದಾಗಿರುವುದು ಸರಿಯಲ್ಲ. ಇದರಿಂದಕನ್ನಡದ ಅಸ್ಮಿತೆಗೆ ಧಕ್ಕೆಯುಂಟಾಗುತ್ತದೆ.
ಇಂಗ್ಲಿಷ್ ಮಾಧ್ಯಮ ಶಾಲೆ ತೆರೆಯುವುದನ್ನು ಬಿಟ್ಟುಕನ್ನಡ ಶಾಲೆಗಳ ಗುಣಮಟ್ಟ ಸುಧಾರಿಸಲುಅಗತ್ಯಕ್ರಮ ಕೈಗೊಳ್ಳಬೇಕು.ಕನ್ನಡ ಶಾಲೆಗಳಿಗೆ ಮೂಲಸೌಕರ್ಯ ಒದಗಿಸಿ, ಮೌಲ್ಯಾಧಾರಿತ ಶಿಕ್ಷಣ ನೀಡಿಕೆಗೆಅಗತ್ಯಕ್ರಮ ಕೈಗೊಳ್ಳಬೇಕು ಎಂದು ನಿರ್ಣಯಿಸಲಾಯಿತು.
ಕರ್ನಾಟಕದಲ್ಲಿಕನ್ನಡಿಗನೇ ಸಾರ್ವಭೌಮ.ಯಾವುದೇಕಾರಣಕ್ಕೂಅಖಂಡಕರ್ನಾಟಕ ವಿಭಜನೆ ಸಲ್ಲ. ಪ್ರತ್ಯೇಕತೆಯ ಕೂಗು ಅಡಗಿಸಿ, ಅಖಂಡತೆಯ ಮಂತ್ರ ಜಪಿಸಬೇಕು.

ಕರ್ನಾಟಕವನ್ನುಇಬ್ಬಾಗ ಮಾಡುವಯಾವುದೇ ಹುನ್ನಾರವನ್ನು ಸರ್ಕಾರ ವಿಫಲಗೊಳಿಸಬೇಕು.ಅಭಿವೃದ್ಧಿಯ ಮೂಲಕ ರಾಜ್ಯದಅಖಂಡತೆಯನ್ನುಎತ್ತಿ ಹಿಡಿಯಬೇಕೆಂದು ಪ್ರಭುತ್ವವನ್ನುಆಗ್ರಹಿಸಲಾಗಿದೆ.

ಶೀಘ್ರ ಪರಿಷ್ಕøತ ಸರೋಜಿನಿ ಮಹಿಷಿ ವರದಿಯನ್ನು ಜಾರಿಗೊಳಿಸಬೇಕು ಎಂದು ಸಭೆಯಲ್ಲಿಒತ್ತಾಯಿಸಲಾಯಿತು.
ಮನಸೋಯಿಚ್ಛೆ ನಾಡಗೀತೆಯನ್ನು ಹಾಡಲಾಗುತ್ತಿದ್ದು, 2ನಿಮಿಷ 30 ಸೆಕೆಂಡ್‍ಗಳಿಗಷ್ಟೇ ನಾಡಗೀತೆಅವಧಿಯನ್ನು ನಿಗದಿಗೊಳಿಸಲಾಗಿದೆ.
ಗಡಿ ಭಾಗದಲ್ಲಿ ದಿನೇ ದಿನೇ ಸಮಸ್ಯೆಗಳು ಉಲ್ಬಣಿಸುತ್ತಿದ್ದು ಇವುಗಳ ಪರಿಹಾರಕ್ಕೆ ಸರ್ಕಾರತ್ವರಿತಗತಿಯಲ್ಲಿ ಮುಂದಾಗಬೇಕೆಂದು ಒತ್ತಾಯಿಸಿ ನಿರ್ಣಯ ಕೈಗೊಳ್ಳಲಾಯಿತು.
ಇದೇ ಸಂದರ್ಭದಲ್ಲಿ ಸಮ್ಮೇಳನದ ಯಶಸ್ಸಿಗೆ ಸಹಕರಿಸಿದ ಎಲ್ಲರಿಗೂಧನ್ಯವಾದಅರ್ಪಿಸಲಾಯಿತು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ