ಧಾರವಾಡ, ಜ.7- ಉತ್ತರಕರ್ನಾಟಕಅಭಿವೃದ್ಧಿಯಲ್ಲಿ ಹಿಂದುಳಿದಿರುವುದು ನಿಜ. ಆದರೆ ಪ್ರತ್ಯೇಕತೆಯ ಕೂಗು ಎತ್ತಬಾರದು. ಅಖಂಡತೆಯೇ ನಮ್ಮ ಮೂಲ ಮಂತ್ರಎಂದು ಮಾಜಿ ಮುಖ್ಯಮಂತ್ರಿ, ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಇಂದಿಲ್ಲಿ ಹೇಳಿದ್ದಾರೆ.
ಇಲ್ಲಿ ನಡೆಯುತ್ತಿರುವ 84ನೇ ಅಖಿಲ ಭಾರತಕನ್ನಡ ಸಾಹಿತ್ಯ ಸಮ್ಮೇಳನದ ಮೂರನೇ ದಿನವಾದಇಂದು ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಸಾಧಕರನ್ನು ಸನ್ಮಾನಿಸಿ ಮಾತನಾಡಿದಅವರು, ಇತ್ತೀಚೆಗೆಉತ್ತರಕರ್ನಾಟಕ ಪ್ರತ್ಯೇಕತೆಯಧ್ವನಿ ಕೇಳಿ ಬರುತ್ತಿದೆ. ಇದನ್ನುಯಾವುದೇಕಾರಣಕ್ಕೂಒಪ್ಪುವುದಿಲ್ಲ. ಅಖಂಡಕರ್ನಾಟಕವೇ ನಮ್ಮಗಟ್ಟಿಧ್ವನಿಯಾಗಬೇಕುಎಂದು ಪ್ರತಿಪಾದಿಸಿದರು.
ಉತ್ತರಕರ್ನಾಟಕದಅಭಿವೃದ್ಧಿಗೆ ಪೂರಕವಾದ ಈ ಭಾಗದ ನೀರಾವರಿ ಯೋಜನೆಗಳನ್ನು ಪೂರ್ಣಗೊಳಿಸಬೇಕು. 156 ತಾಲೂಕುಗಳಲ್ಲಿ ಬರ ಪರಿಸ್ಥಿತಿಯಿದ್ದು, ಎಲ್ಲೆಲ್ಲಿ ನದಿಗಳಿವೆ ಅಲ್ಲಿಂದ ನೀರುತಂದುಕೆರೆ ಕಟ್ಟೆಗಳನ್ನು ತುಂಬಿಸಿ, ರೈತರಿಗೆ ಅನುಕೂಲ ಮಾಡಿಕೊಡಬೇಕುಎಂದು ಹೇಳಿದರು.
ಮಹದಾಯಿಅಂತಿಮ ಕಳಸಾ ಬಂಡೂರಿಯೋಜನೆ ಪೂರ್ಣಗೊಳ್ಳಬೇಕು ಎಂದುಯಡಿಯೂರಪ್ಪ ಪ್ರತಿಪಾದಿಸಿದರು.ಇದರಿಂದಉತ್ತರಕರ್ನಾಟಕ ಭಾಗದ ಹಲವು ಭಾಗಗಳಿಗೆ ಕುಡಿಯುವ ನೀರಿನ ಸಮಸ್ಯೆ ನಿವಾರಣೆಯಾಗುತ್ತದೆಎಂದು ಹೇಳಿದರು.
ಪ್ರಾಥಮಿಕ ಶಿಕ್ಷಣದಲ್ಲಿ ಮಾಧ್ಯಮಕುರಿತು ಸಾಕಷ್ಟು ಚರ್ಚೆ ನಡೆಯುತ್ತಿವೆ, ಮಾತೃ ಭಾಷೆಯಲ್ಲಿ ಶಿಕ್ಷಣ ಮಾಧ್ಯಮಇರಬೇಕುಎಂಬುದನ್ನುಎಲ್ಲರಒತ್ತಾಸೆಯಾಗಿದೆ.ಇಂಗ್ಲಿಷ್ ಭಾಷೆಅಂತಾರಾಷ್ಟ್ರೀಯವಾಗಿ ಬೆಳೆದಿದೆ. ವ್ಯಾವಹಾರಿಕಉದ್ದೇಶದಿಂದಇಂಗ್ಲಿಷ್ ಭಾಷೆಕಲಿಯಬೇಕು. ಹಾಗೆಂದು ನಮ್ಮ ಭಾಷೆ ಅಳಿಯಬಾರದು. ಇಂಗ್ಲಿಷ್ ನಗರ ಮತ್ತು ಶ್ರೀಮಂತರ ಸೊತ್ತಾಗಬಾರದುಎಂದು ಹೇಳುವ ಮೂಲಕ ಇಂಗ್ಲಿಷ್ ಭಾಷೆಕಲಿಯಬೇಕುಎಂಬುದನ್ನು ಪರೋಕ್ಷವಾಗಿ ಪ್ರತಿಪಾದಿಸಿದರು.
ವರ ಕವಿ ಡಾ.ದಾ.ರಾ.ಬೇಂದ್ರಅವರ ನಿವಾಸವನ್ನುರಾಷ್ಟ್ರೀಯ ಸ್ಮಾರಕವನ್ನಾಗಿ ಮಾಡುವ ಮೂಲಕ ಅವರ ನೆನಪು ಅಚ್ಚಳಿಯದೆ ಉಳಿಯುವಂತೆ ಮಾಡಬೇಕುಎಂದು ಒತ್ತಾಯಿಸಿದರು.
ಭಾಷೆಯ ಸಮೃದ್ಧಿ ಆ ನಾಡಿನಅಭಿವೃದ್ಧಿಯ ಸಂಕೇತವಾಗಿದೆ.ಸರ್ಕಾರಗಳು ಭಾಷೆಯಅಭಿವೃದ್ಧಿಗೆ ಪೂರಕವಾಗಿ ಸ್ಪಂದಿಸಬೇಕು.ರಾಜಕಾರಣಿಗಳು ಭಾಷೆಯ ಬೆಳವಣಿಗೆಗೆ ಸಹಕಾರ ನೀಡಬೇಕು. ಶಿವಮೊಗ್ಗದಲ್ಲಿ ನಡೆದಕನ್ನಡ ಸಾಹಿತ್ಯ ಸಮ್ಮೇಳನವನ್ನು ಅಚ್ಚುಕಟ್ಟಾಗಿ ನೆರವೇರಿಸಿದ್ದೆವು. ಅದೇರೀತಿ ಬೆಳವಾಗಿಯಲ್ಲಿ ನಡೆದ ವಿಶ್ವಕನ್ನಡ ಸಮ್ಮೇಳನವನ್ನು ವಿಜೃಂಭಣೆಯಿಂದ ನಡೆಸಲಾಗಿತ್ತು. ಈ ಎರಡೂ ಸಮ್ಮೇಳನದಲ್ಲಿ ಸರ್ಕಾರದ ಭಾಗವಾಗಿ ಭಾಗವಹಿಸಿ, ಸಂಪೂರ್ಣ ಸಹಕಾರ ನೀಡಿದ್ದೆಎಂದು ಸ್ಮರಿಸಿದರು.
ಇದಕ್ಕೂ ಮುನ್ನ ಸನ್ಮಾನ ಸ್ವೀಕರಿಸಿ ಮಾತನಾಡಿದ ಮಾಜಿ ಸಚಿವ ಎಚ್.ಸಿ.ಮಹದೇವಪ್ಪ, ಒಡಕಿನಧ್ವನಿ ಇಲ್ಲದೆಕನ್ನಡ ಸಮ್ಮೇಳನವನ್ನು ಅತ್ಯಂತ ಯಶಸ್ವಿಯಾಗಿ ಧಾರವಾಡದಲ್ಲಿ ನಡೆಸಲಾಗಿದೆ. ಇದಕ್ಕಾಗಿಕನ್ನಡ ಸಾಹಿತ್ಯ ಪರಿಷತ್ ಹಾಗೂ ಈ ಭಾಗದಜನರಿಗೆಅಭಿನಂದನೆ ಸಲ್ಲಿಸುತ್ತೇನೆ. ಸಮ್ಮೇಳನದಲ್ಲಿ ತೆಗೆದುಕೊಳ್ಳುವ ನಿರ್ಣಯಗಳನ್ನು ಸರ್ಕಾರ ಮತ್ತು ಪರಿಷತ್ಗಂಭೀರವಾಗಿ ಪರಿಗಣಿಸುವ ಅವುಗಳನ್ನು ಜಾರಿಗೊಳಿಸಲು ಮುಂದಾಗಬೇಕುಎಂದು ಹೇಳಿದರು.
ಐ.ಎಂ.ವಿಠಲಮೂರ್ತಿ, ಎಂ.ಎ.ಪೆÇನ್ನಪ್ಪ, ಐ.ಜಿ.ಸನದಿ, ಮಲ್ಲಿಕಾರ್ಜುನ್ ಹಿರೇಮಠ್, ಬಸಂತ್ಕುಮಾರ್ ಪಾಟೀಲ್, ಎಂ.ಕೆ.ಭಾಸ್ಕರ್ರಾವ್ ಸೇರಿದಂತೆ ಹಲವು ಗಣ್ಯರನ್ನು ಸನ್ಮಾನಿಸಲಾಯಿತು.
ವೇದಿಕೆಯಲ್ಲಿ ಸಮ್ಮೇಳನಾಧ್ಯಕ್ಷ ಡಾ.ಚಂದ್ರಶೇಖರ್ಕಂಬಾರ, ಕಸಾಪ ಅಧ್ಯಕ್ಷ ಮನು ಬಳಿಗಾರ್, ಜಿಲ್ಲಾಧ್ಯಕ್ ಲಿಂಗರಾಜುಅಂಗಡಿ, ಶಾಸಕರಾದಅರವಿಂದ್ ಬೆಲ್ಲದ್, ಅಮೃತದೇಸಾಯಿ, ಪ್ರಸಾದ್ಅಬ್ಬಯ್ಯ, ರಾಜ್ಯಸಭಾ ಸದಸ್ಯಎಲ್. ಹನುಮಂತಯ್ಯ ಮತ್ತಿತರರು ಉಪಸ್ಥಿತರಿದ್ದರು.