ಇದುವರೆಗಿನ ಸಾಧನೆಗಳನ ಪೈಕಿ ಆಸಿಸ್ ಸರಣಿಗೆ ಗೆಲುವು ಐತಿಹಾಸಿಕ ಸಾಧೆನೆ

ಸಿಡ್ನಿ:ಆಸಿಸ್ ನೆಲದಲ್ಲಿ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಸರಣಿ ಗೆದ್ದ ಖುಷಿಯಲ್ಲಿ ಸಂತಸವನ್ನ ಹಂಚಿಕೊಂಡಿದ್ದಾರೆ.
ಈ ಹಿಂದೆ ನಾನು ಯಾªತ್ತೂ ತಂಡವನ್ನ ಹೊಗಳಿರಲಿಲ್ಲ, ಕಳೆದ 12 ತಿಂಗಳಿನಿಂದ ತಂಡದಲ್ಲಿ ಬದಲಾವಣೆಯಾಗುತ್ತಿದೆ. ನಾನು ನಾಯಕನಾದ ಮೇಲೆ ಮೊದಲ ಬಾರಿಗೆ ಭಾರೀ ಬದಲಾವಣೆಗಳನ್ನ ಕಂಡಿದ್ದೇವೆ.
ನನಗೆ ಅನಿಸೋದು ಒಂದೇ ಶಬ್ದ ನನಗೆ ಹೆಮ್ಮೆ ಅನಿಸುತ್ತಿದೆ. ಈ ಆಟಗಾರರನ್ನ ಮುನ್ನಡೆಸೋದೇ ಒಂದು ಗೌರವ. ನಾಯಕ ಮಿಂಚಿಬೇಕೆಂದು ಅವರು ಆಡಿದ್ದಾರೆ. ನಿಜವಾಗಿಯೂ ಈ ಕ್ಷಣವನ್ನ ಆನಂದಿಸಲು ನಾವು ಅರ್ಹರಾಗಿದ್ದೇವೆ ಎಂದು ಕೊಹ್ಲಿ ಸಂತಸ ಹಂಚಿಕೊಂಡಿದ್ದಾರೆ.
ಈ ಐತಿಹಾಸಿಕ ಗೆಲುವು ಒಂದು ವಿಶ್ವ ಕ್ರಿಕೆಟ್‍ನಲ್ಲಿ ಒಂದು ಗುರುತನ್ನ ನೀಡಲಿದೆ. ಈ ಸಾಧನೆ ಬಗ್ಗೆ ನಮಗೆ ಹೆಮ್ಮೆ ಇದೆ.

ನಾವೀಗ ಒಂದು ಹೆಜ್ಜೆಯನ್ನ ಮುಂದಿಟ್ಟಿದ್ದೇವೆ ಅಷ್ಟೆ. ತಂಡದಲ್ಲಿರುವ ಎಲ್ಲ ಆಟಗಾರರು ಯುವ ಆಟಗಾರರೇ ಆಗಿದ್ದಾರೆ. ಇಲ್ಲಿ ಪ್ರಮುಖ ವಿಷಯವೆಂದರೆ ನಮ್ಮ ನಂಬಿಕೆ ಮತ್ತು ಉದ್ದೇಶ. ಇದೇ ನಮ್ಮ ತಂಡವನ್ನ ಐತಿಹಾಸಿಕ ಸಾಧನೆ ಮಾಡುವಂತೆ ಮಾಡಿದೆ ಎಂದು ಕ್ಯಾಪ್ಟನ್ ಕೊಹ್ಲಿ ಹೇಳಿದ್ದಾರೆ

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ