ಬೆಂಗಳೂರು, ಜ.6- ಕಲಾವಿದರ ಕಲಾಕೃತಿಗಳು ಅಂತಾರಾಷ್ಟ್ರೀಯ ಮಾರುಕಟ್ಟೆಗೆ ತಲುಪಿಸುವ ಪೂರಕವಾಗಿ ಚಿತ್ರಸಂತೆ ಕಾರ್ಯನಿರ್ವಹಿಸುತ್ತಿದೆ. ಈ ಮೂಲಕ ಕಲಾವಿದರ ಕಲೆಗೆ ವ್ಯಾಪಕ ಪ್ರಚಾರ ಹಾಗೂ ಮಾರುಕಟ್ಟೆ ಒದಗುತ್ತಿರುವುದು ಸಂತೋಷದ ವಿಚಾರ ಎಂದು ಸಚಿವ ಜಿ.ಟಿ.ದೇವೇಗೌಡ ತಿಳಿಸಿದರು.
ಇಂದು ಚಿತ್ರಕಲಾ ಪರಿಷತ್ನಲ್ಲಿ ಆರಂಭಗೊಂಡ 16ನೇ ಚಿತ್ರಸಂತೆ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಇಂತಹ ಪೆÇ್ರೀ ಹಾಗೂ ಕಲಾವಿದರಿಗೆ ಉಪಯುಕ್ತವಾದ ಕಾರ್ಯಕ್ರಮಗಳಿಗೆ ಸರ್ಕಾರದ ಬೆಂಬಲ ಸದಾ ಇರುತ್ತದೆ. ಯಾವುದೇ ಕಾರ್ಯಕ್ರಮ ಆಯೋಜಿಸಿದರೂ ನಾವು ಉತ್ತೇಜನ ನೀಡುತ್ತೇವೆ ಎಂದು ಹೇಳಿದರು.
ವರ್ಷದಿಂದ ವರ್ಷಕ್ಕೆ ಚಿತ್ರಸಂತೆ ಜನಪ್ರಿಯತೆಗೆ ಪಾತ್ರವಾಗುತ್ತಿರುವುದು ಸಂತೋಷದ ವಿಷಯ. ಚಿತ್ರಕಲಾ ಪರಿಷತ್ನ ಅಭಿವೃದ್ಧಿ ಚಟುವಟಿಕೆಗಳಿಗೆ ನೆರವು ಸಿಗುತ್ತಿರುವುದು ಸ್ವಾಗತಾರ್ಹ ಎಂದು ಚಿತ್ರಕಲಾ ಪರಿಷತ್ ಅಧ್ಯಕ್ಷ ಬಿ.ಎಲ್.ಶಂಕರ್ ತಿಳಿಸಿದರು.
16ರಾಜ್ಯಗಳಿಂದ ಆಗಮಿಸಿರುವ 1500ಕ್ಕೂ ಹೆಚ್ಚು ಕಲಾವಿದರು ಮಳಿಗೆಗಳನ್ನು ತೆರೆದಿದ್ದಾರೆ. ವರ್ಷದಿಂದ ವರ್ಷಕ್ಕೆ ಚಿತ್ರಸಂತೆ ಹೆಚ್ಚು ಹೆಚ್ಚು ಗಮನ ಸೆಳೆಯುತ್ತಿದೆ. ಪರಿಷತ್ತಿನ ಅಭಿವೃದ್ಧಿಗಾಗಿ ಸಂಸದ ಪಿ.ಸಿ.ಮೋಹನ್ 25 ಲಕ್ಷ ನೀಡಿರುವುದಲ್ಲದೆ, ಉಪರಾಷ್ಟ್ರಪತಿ ವೆಂಕಯ್ಯನಾಯ್ಡು ಅವರಿಂದ 25 ಲಕ್ಷ ರೂ.ಗಳನ್ನು ಕೊಡಿಸಿದ್ದಾರೆ. ಬಿಬಿಎಂಪಿ ಒಂದು ಕೋಟಿ ರೂ. ಅನುದಾನವನ್ನು ಮೀಸಲಿಟ್ಟಿದೆ. ಇದಕ್ಕಾಗಿ ಚಿತ್ರಕಲಾ ಪರಿಷತ್ ಇವರೆಲ್ಲರಿಗೂ ಅಭಿನಂದನೆ ಸಲ್ಲಿಸುತ್ತದೆ ಎಂದು ಹೇಳಿದರು.
ಮೇಯರ್ ಗಂಗಾಂಬಿಕೆ ಮಾತನಾಡಿ, ಇಂದು ಇಲ್ಲಿ ಪ್ರದರ್ಶನಗೊಂಡಿರುವ ಚಿತ್ರಕಲಾ ಕೃತಿಗಳ ಮೂಲಕ ನೆರೆ ರಾಜ್ಯಗಳ ಕಲೆ, ಸಂಸ್ಕøತಿ, ಐತಿಹಾಸಿಕ ಮಹತ್ವಗಳನ್ನು ಅರಿಯಲು ಇದೊಂದು ಉತ್ತಮ ವೇದಿಕೆ. ಇದೇ ಮೊದಲ ಬಾರಿಗೆ ನಾನು ಚಿತ್ರಸಂತೆಯಲ್ಲಿ ಪಾಲ್ಗೊಳ್ಳುತ್ತಿದ್ದೇನೆ ಎಂದು ಹರ್ಷ ವ್ಯಕ್ತಪಡಿಸಿದರು.
ಇಸ್ರೋದ ಮಾಜಿ ಅಧ್ಯಕ್ಷ ಕಿರಣ್ಕುಮಾರ್ ಮಾತನಾಡಿ, ಬೆಂಗಳೂರು ದೇಶದಲ್ಲೇ ಗಮನ ಸೆಳೆಯಲು ಇಂತಹ ಚಿತ್ರಸಂತೆಗಳು ಕಾರಣವಾಗುವ ಮೂಲಕ ಬೆಂಗಳೂರು ಸಾಂಸ್ಕøತಿಕ ನಗರಿ ಎಂಬುದನ್ನು ಮತ್ತೊಮ್ಮೆ ಸಾಬೀತು ಮಾಡಿದೆ. ಒಂದೇ ದಿನಕ್ಕೆ ನಾಲ್ಕು ಲಕ್ಷ ಜನ ಇದರಲ್ಲಿ ಪಾಲ್ಗೊಳ್ಳುತ್ತಿರುವುದೇ ಇದರ ಪ್ರಖ್ಯಾತಿಗೆ ಸಾಕ್ಷಿ ಎಂದರು.
ಸಂಸದ ಪಿ.ಸಿ.ಮೋಹನ್ ಮಾತನಾಡಿ, ರಾಜ, ಮಹಾರಾಜರ ಕಾಲದಲ್ಲಿ ಕಲೆಗೆ ಸಿಗುತ್ತಿದ್ದ ಪೆÇ್ರೀ ರೀತಿಯಲ್ಲಿ ಇಂದು ಚಿತ್ರಕಲಾ ಪರಿಷತ್ ಕಲೆಗೆ ಹೆಚ್ಚಿನ ಒತ್ತು ನೀಡುತ್ತಿದೆ. ಇಂತಹ ಚಿತ್ರಸಂತೆಗಳು ಅದಕ್ಕೆ ಪೂರಕ ಎಂದು ಹೇಳಿದರು.
ಮಾಜಿ ಸಚಿವೆ ರಾಣಿ ಸತೀಶ್, ಸಾಹಿತಿ ಎಂ.ಎಚ್.ಕೃಷ್ಣಯ್ಯ, ಬಿಬಿಎಂಪಿ ಸದಸ್ಯ ಸಂಪತ್ ಮತ್ತಿತರರು ಸಮಾರಂಭದಲ್ಲಿ ಉಪಸ್ಥಿತರಿದ್ದರು. ವೇಮಗಲ್ ಸೋಮಶೇಖರ್ ಎಂಬುವರು ಗಾಂಧಿ ವೇಷಧಾರಿಯಾಗಿ ಕಾಣಿಸಿಕೊಂಡರು.