ಪದವಿ ಕಾಲೇಜುಗಳಲ್ಲಿ ಖಾಲಿಯಿರುವ ಉಪನ್ಯಾಸಕರ ಹುದ್ದೆಯಲ್ಲಿ ಶೇ 50ರಷ್ಟು ಹುದ್ದೆ ಅಥಿತಿ ಉಪನ್ಯಾಸಕರಿಗೆ ಮೀಸಲು:, ಸಚಿವ ಜಿ.ಟಿ.ದೇವೆಗೌಡ

ಬೆಂಗಳೂರು, ಜ.6- ರಾಜ್ಯದ ಪದವಿ ಕಾಲೇಜುಗಳಲ್ಲಿ ಉಪನ್ಯಾಸಕರ ಹುದ್ದೆ ಭರ್ತಿ ಮಾಡಲು ಆದ್ಯತೆ ನೀಡಲಾಗಿದ್ದು, ಅತಿಥಿ ಉಪನ್ಯಾಸಕರಿಗೆ ಶೇ.50ರಷ್ಟು ಹುದ್ದೆಗಳನ್ನು ಮೀಸಲಿಡುವುದಾಗಿ ಉನ್ನತ ಶಿಕ್ಷಣ ಸಚಿವ ಜಿ.ಟಿ.ದೇವೇಗೌಡ ತಿಳಿಸಿದರು.

ನಗರದ  ಶಿಕ್ಷಕರ ಸದನದಲ್ಲಿ ಕರ್ನಾಟಕ ರಾಜ್ಯ ಐಸಿಎಸ್‍ಇ ಶಾಲಾ ಕನ್ನಡ ಶಿಕ್ಷಕರ ಸಂಘದ ಉದ್ಘಾಟನೆ ಹಾಗೂ ಪ್ರತಿಭಾ ಪುರಸ್ಕಾರ ಸಮಾರಂಭದಲ್ಲಿ ಮಾತನಾಡಿದ ಅವರು,  ಒಟ್ಟು ರಾಜ್ಯದಲ್ಲಿ 11,500 ಗುತ್ತಿಗೆ ಉಪನ್ಯಾಸಕರು ಇದ್ದು, ಇವರಲ್ಲಿ 10 ವರ್ಷ ಸೇವೆ ಸಲ್ಲಿಸಿದವರಿಗೆ ಸ್ಪರ್ಧಾತ್ಮಕ ಪರೀಕ್ಷೆ ನಡೆಸಿ ಅತಿ ಹೆಚ್ಚು ಅಂಕ ಪಡೆದ ಶಿಕ್ಷಕರನ್ನು ನೇಮಕ ಮಾಡುವುದಾಗಿ ಹೇಳಿದರು.
3800 ಉಪನ್ಯಾಸಕರು,  395 ಪ್ರಾಂಶುಪಾಲರ ಹುದ್ದೆ ಖಾಲಿ ಇದ್ದು, ಚರ್ಚೆ ನಡೆಸಿ ಭರ್ತಿ ಮಾಡಲಾಗುವುದು ಎಂದರು.

ಪ್ರತಿಭಾ ಪುರಸ್ಕಾರ ಪಡೆದ 10 ಜನ ಮಕ್ಕಳು ಅಂತಾರಾಷ್ಟ್ರೀಯ ಮಟ್ಟದಲ್ಲಿ ಪ್ರಖ್ಯಾತಿ ಪಡೆದು ನಮ್ಮ ನಾಡಿಗೆ, ಪೆÇೀಷಕರಿಗೆ ಕೀರ್ತಿ ತರಲೆಂದು ಮಕ್ಕಳಿಗೆ ಆಶೀರ್ವಾದಿಸಿದರು.
ಪ್ರಶಸ್ತಿ ಪಡೆಯಲು ಕಾರಣರಾದ ಬೋಧನೆ ಮಾಡಿದ ಶಿಕ್ಷರಿಗೆ ಮತ್ತು ಅವರಿಗೆ ಸ್ಫೂರ್ತಿ ತುಂಬಿದ ತಂದೆ-ತಾಯಿಗಳಿಗೆ ನನ್ನ ತುಂಬು ಹೃದಯದ ಅಭಿನಂದನೆ ಸಲ್ಲಿಸುತ್ತೇನೆ ಎಂದರು.

ಸರ್ಕಾರಿ ನೌಕರರಿಗೂ, ಶಿಕ್ಷಕರಿಗೂ ತಾಳೆ ಹಾಕಿ ನೋಡುವುದು ಸರಿಯಲ್ಲ. ಶಿಕ್ಷಕರ ಸ್ಥಾನವೇ ಬೇರೆ, ಅವರು ಕತ್ತಲಿನಿಂದ ಬೆಳಕಿಗೆ ಕೊಂಡೊಯ್ಯುವ ಕೆಲಸ ಮಾಡುತ್ತಾರೆ. ಶಿಕ್ಷಕರು ಎಂದೂ ವೇತನಕ್ಕಾಗಿ ಕೆಲಸ ಮಾಡಿದವರಲ್ಲ, ಮಕ್ಕಳಿಗೆ ಶಿಕ್ಷಣ ನೀಡಲಿಕ್ಕಾಗಿಯೇ ತಮ್ಮ ಸಮಯವನ್ನು ಅರ್ಪಿಸಿಕೊಂಡಿದ್ದಾರೆ. ಹಿಂದಿನಿಂದಲೂ ಶಿಕ್ಷಕರ ಕೊಡುಗೆ ಅಪಾರವಾದದ್ದು, ಅವರು ನೀಡುವ ಗುಣಮಟ್ಟದ ಶಿಕ್ಷಣದಿಂದ ಜಾತಿ, ಬಡತನ ತಾರತಮ್ಯವನ್ನು ನಿರ್ಮೂಲನೆ ಮಾಡಬಹುದು. ಮಕ್ಕಳು ಸಾಮಾಜಿಕ ಜಾಲತಾಣಗಳ ಮೊರೆ ಹೋಗದೆ ಓದಿನ ಕಡೆ ಹೆಚ್ಚು ಗಮನ ಹರಿಸಬೇಕೆಂದು ಸಲಹೆ ನೀಡಿದರು.

ಇದೇ ಸಂದರ್ಭದಲ್ಲಿ 2018ನೇ ಸಾಲಿನ ಎಸ್ಸೆಸ್ಸೆಲ್ಸಿಯಲ್ಲಿ ರಾಜ್ಯಕ್ಕೆ 10ನೇ ಸ್ಥಾನ ಪಡೆದ ಐಸಿಎಸ್‍ಇ ವಿದ್ಯಾರ್ಥಿಗಳಿಗೆ ಪ್ರತಿಭಾಪುರಸ್ಕಾರ ನೀಡಿ ಗೌರವಿಸಲಾಯಿತು.
ಕಾರ್ಯಕ್ರಮದಲ್ಲಿ ಸಂಸ್ಕøತ ವಿವಿ ವಿಶ್ರಾಂತ ಕುಲಪತಿ ಪೆÇ್ರ.ಮಲ್ಲೇಪುರಂ ಜಿ.ವೆಂಕಟೇಶ್, ಸಾಹಿತಿ ಡಾ.ಎಚ್.ಎಸ್.ವೆಂಕಟೇಶಮೂರ್ತಿ, ವಿಧಾನಪರಿಷತ್ ಸದಸ್ಯ ಪುಟ್ಟಣ್ಣ, ಅ.ದೇವೇಗೌಡ,  ಸಂಘದ ಅಧ್ಯಕ್ಷ ಮಲ್ಲಿಕಾರ್ಜುನ ವಿ.ಬಟ್ಟೂರ, ಯಲ್ಲಪ್ಪಗೌಡ, ಪೆÇ್ರ.ಸಿದ್ದರಾಜು, ಸ್ವದೇಶ್‍ಕುಮಾರ್ ಸೇರಿದಂತೆ ಹಲವು ಮುಖಂಡರು ಪಾಲ್ಗೊಂಡಿದ್ದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ