ಬೆಂಗಳೂರು, ಜ.6-ಕ್ಯಾನ್ಸರ್ ಗೆದ್ದವರು ಸಮಾಜಕ್ಕೆ ಸಂದೇಶ ಸಾರುವ ನಿಟ್ಟಿನಲ್ಲಿ ಭೂಮಿಕಾ ಪಟೇಲ್ ನೇತೃತ್ವದಲ್ಲಿ ಇಂದು 200ಕ್ಕೂ ಹೆಚ್ಚು ಜನರು ಅಪೆÇೀಲೋ ಹಾಸ್ಪಿಟಲ್ ಕಬ್ಬನ್ಪಾರ್ಕ್ನಲ್ಲಿ ನಡೆದ ಪಿಂಕಾಥಾನ್ಗೆ ಬೆಂಬಲ ಸೂಚಿಸಿದರು.
ವಿನೂತನ ಬಗೆಯ ಶಿರೋ 10ಕೆ ಪಿಂಕಥಾನ್ ಆಯೋಜಿಸಿದ್ದು ಅಪೆÇೀಲೋ ಹಾಸ್ಪಿಟಲ್ಸ್ನ 200ಕ್ಕೂ ಹೆಚ್ಚು ಕ್ಯಾನ್ಸರ್ ಗೆದ್ದವರು ಅವರಆರೈಕೆ ಮಾಡುವವರೊಂದಿಗೆ ಈ ಓಟದಲ್ಲಿ ಭಾಗವಹಿಸಿದ್ದು ವಿಶೇಷ.
ಪಿಂಕಥಾನ್ ಟ್ರೈನಿಂಗ್ ಎಲ್ಲ ಮಹಿಳೆಯರಿಗೂ ಆರೋಗ್ಯ ಮತ್ತು ಫಿಟ್ನೆಸ್ನ ಸಂದೇಶವನ್ನು ಉತ್ತೇಜಿಸುವ ಜೊತೆಗೆ ಈ ಗುಂಪು ಕ್ಯಾನ್ಸರ್ ಗೆದ್ದವರ ಜೀವನ ಬದಲಾಯಿಸಿದೆ ಮತ್ತು ಅವರನ್ನು ನಿಜವಾದ ಅರ್ಥದಲ್ಲಿ ವಿಜೇತರನ್ನಾಗಿಸಿದೆ.
ಪ್ರತಿ ವಾರಾಂತ್ಯವೂ ಯೋಗಥೆರಪಿ, ಆಂಕಾಲಜಿಸ್ಟರು, ಮೂಳೆ ತಜ್ಞರೊಂದಿಗೆ ಮಾತುಕತೆ ಮತ್ತು ಫಿಸಿಯೋಥೆರಪಿ ಸೆಷನ್ಗಳನ್ನು ನಡೆಸುತ್ತ ಅವರಲ್ಲಿ ಜೀವನೋತ್ಸಾಹ ತುಂಬುವ ಜೊತೆಗೆ ಇಂತಹ ಮ್ಯಾರಥಾನ್ಗಳು ಅವರಿಗೆ ಚೈತನ್ಯ ಮೂಡಿಸಲಿವೆ.
ಕ್ಯಾನ್ಸರ್ಗೆದ್ದ ಸೀಮಾ ಅವರ ಪ್ರಾರಂಭಿಕ 5ಕೆ ಓಟ ಪೂರ್ಣಗೊಳಿಸಲು ಸಂಪೂರ್ಣ ಸದೃಢ ಮತ್ತು ಆರೋಗ್ಯವಾಗಿದ್ದಾರೆ.
ನಮ್ಮ ಪಿಂಕಥಾನ್ ಫರೆವರ್ ತರಬೇತಿ ಗುಂಪುಗಳಲ್ಲಿ ಬನ್ನೇರುಘಟ್ಟ, ಜಯನಗರ ಮತ್ತು ಕಬ್ಬನ್ಗಳಲ್ಲಿ ಹೆಚ್ಚು ದೂರವನ್ನು ನಮ್ಮ ಕ್ಯಾನ್ಸರ್ ವಿಜೇತರು ಸುಲಭವಾಗಿ ಕ್ರಮಿಸಿದ ನಂತರ ಈ ಆಲೋಚನೆ ನಮಗೆ ಬಂದಿತು. ಹಲವು ಚಟುವಟಿಕೆಗಳನ್ನು ಆಯೋಜಿಸಿದ ಅವರನ್ನು ಪ್ರಮುಖ ದಿನದ ಓಟಕ್ಕೆ ಸಜ್ಜುಗೊಳಿಸಲಾಯಿತು. ಈ ಓಟ ವಿಶೇಷವಾಗಿ ಕ್ಯಾನ್ಸರ್ಗೆದ್ದವರಿಗಾಗಿ ಅವರ ದೇಹದಾಢ್ರ್ಯ ಮತ್ತು ತಾಳಿಕೆಯ ಮಟ್ಟಗಳನ್ನು ಪರೀಕ್ಷಿಸುವ ವಿಶ್ವಾಸವುಳ್ಳವರಿಗಾಗಿ ಆಯೋಜಿಸಿ ಅವರಲ್ಲ ಆತ್ಮವಿಶ್ವಾಸ ಮೂಡಿಸಲಾಯಿತು ಎಂದು ಆಯೋಜಕರು ತಿಳಿಸಿದರು.
ಇದು ಎಲ್ಲ ವಯಸ್ಸಿನ ಕ್ಯಾನ್ಸರ್ ಗೆದ್ದವರನ್ನು ಉತ್ತೇಜಿಸುವುದಲ್ಲದೆ ಅವರ ಮಿತ್ರರು, ಬೆಂಬಲಿಗರು ಮತ್ತು ಆರೈಕೆ ಮಾಡುವವರು ಈ ಮಾರಣಾಂತಿಕ ರೋಗz ಕುರಿತು ಜಾಗೃತಿ ಮೂಡಿಸಲು ಹಾಗೂ ಸಹಜ ಜೀವನ ನಡೆಸಲು ಉತ್ತೇಜಿಸುತ್ತದೆ ಎಂದರು.