ಸಿಸಿಬಿ ಪೊಲೀಸರಿಂದ ಕ್ಲಬ್ ಮೇಲೆ ದಾಳಿ 15 ಜನರ ಬಂಧನ

ಬೆಂಗಳೂರು,  ಜ.6-ಕ್ಲಬ್‍ವೊಂದರ ಮೇಲೆ ದಾಳಿ ಮಾಡಿದ ಸಿಸಿಬಿ ಪೆÇಲೀಸರು 15 ಮಂದಿಯನ್ನು ಬಂಧಿಸಿ 2,24,000 ರೂಗಳನ್ನು ವಶಪಡಿಸಿಕೊಂಡಿದ್ದಾರೆ.
ನಗರದ ಜಯಮಹಲ್ ಮೈನ್ ರೋಡ್, ಪ್ಯಾಲೇಸ್ ಗ್ರೌಂಡ್ ಕಾಂಪೌಂಡ್‍ನೊಳಗಿರುವ ಕೆ.ಸಿ.ಪ್ಯಾಲೇಸ್ ಕ್ಲಬ್ ಮೇಲೆ ಖಚಿತ ಮಾಹಿತಿ ಆಧರಿಸಿ  ಸಿಸಿಬಿ ಪೆÇಲೀಸರು ದಾಳಿ ನಡೆಸಿದರು.

ಒಟ್ಟು 15 ಮಂದಿಯನ್ನು  ಬಂಧಿಸಿರುವ ಪೆÇಲೀಸರು 2,24,000 ರೂ., ಇಸ್ಪೀಟ್ ಕಾರ್ಡ್‍ಗಳು ಮತ್ತಿತರ ಪರಿಕರಗಳನ್ನು ವಶಪಡಿಸಿಕೊಂಡಿದ್ದಾರೆ.
ಅಪರಾಧ ವಿಭಾಗದ ಹೆಚ್ಚುವರಿ ಪೆÇಲೀಸ್ ಆಯುಕ್ತ ಅಲೋಕ್‍ಕುಮಾರ್, ಉಪಪೆÇಲೀಸ್ ಆಯುಕ್ತ ಗಿರೀಶ್ ಅವರ ಮಾರ್ಗದರ್ಶನದಲ್ಲಿ ವಿಶೇಷ ವಿಚಾರಣಾ ದಳದ ಸಹಾಯಕ ಪೆÇಲೀಸ್ ಆಯುಕ್ತ ಪಿ.ಟಿ.ಸುಬ್ರಹ್ಮಣ್ಯ ನೇತೃತ್ವದಲ್ಲಿ  ದಾಳಿ ನಡೆಸಲಾಯಿತು.
ಆರೋಪಿಗಳ ವಿರುದ್ಧ ಸದಾಶಿವನಗರ ಪೆÇಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ