ಟೀಂ ಇಂಡಿಯಾದ ವಿಕೆಟ್ ಕೀಪರ್ ಕಮ್ ಬ್ಯಾಟ್ಸ್ಮನ್ ರಿಷಭ್ ಪಂತ್ ನಿನ್ನೆ ಸಿಡ್ನಿ ಅಂಗಳದಲ್ಲಿ ಭರ್ಜರಿ ಬ್ಯಾಟಿಂಗ್ ಮಾಡಿ ಶತಕ ಬಾರಿಸಿ ಅಬ್ಬರಿಸಿದ್ರು. ಇದರೊಂದಿಗೆ ಟೆಸ್ಟ ನ ವೃತ್ತಿ ಜೀವನದಲ್ಲಿ ಎರಡನೇ ಶತಕ ಬಾರಿಸಿ ಆಸಿಸ್ ನಾಡಲ್ಲಿ ಶತಕ ಬಾರಿಸಿದ ಏಷ್ಯಾದ ಮೊದಲ ವಿಕೆಟ್ ಕೀಪರ್ ಎಂಬ ಹಿರಿಮೆಗೆ ಪಾತ್ರರಾದ್ರು.
ಆಸಿಸ್ ವಿರುದ್ಧ ಮೊದಲ ಟೆಸ್ಟ್ ಪಂದ್ಯಗಳಲ್ಲಿ ಹೇಳಿಕೊಳ್ಳದಂತ ಪರ್ಫಾಮನ್ಸ್ ನೀಡಿದ್ದ ರಿಷಭ್ ಪಂತ್ ಸಿಡ್ನಿ ಅಂಗಳದಲ್ಲಿ ನಡೆದ ಎರಡನೇ ದಿನದಾಟದ ಪಂದ್ಯದಲ್ಲಿ ಶತಕ ಬಾರಿಸಿ ಮಿಂಚು ಹರಿಸಿದ್ರು. ರಿಷಭ್ ಶತಕ ಬಾರಿಸಲು ಪಟ್ಟ ಕಷ್ಟ ಅಷ್ಟಿಷ್ಟಲ್ಲ. ವಿಕೆಟ್ ಹಿಂದೆ ಕಮಾಲ್ ಮಾಡುತ್ತಿದ್ದ ರಿಷಭ್ ಪಂತ್ ಆ ಒಂದು ಸಮಸ್ಯೆಯನ್ನ ಎದುರಿಸುತ್ತಿದ್ರು.
ಅಷ್ಟಕ್ಕೂ ರಿಷಭ್ ಪಂತ್ ಎದುರಿಸುತ್ತಿದ್ದ ಆ ಒಂದು ಸಮಸ್ಯೆ ಬೇರೆ ಯಾವುದು ಅಲ್ಲ ನರ್ವಸ್ ನೈಂಟಿ.
ನರ್ವಸ್ ನೈಂಟಿ ಪ್ರತಿಯೊಬ್ಬ ಶ್ರೇಷ್ಠ ಬ್ಯಾಟ್ಸ್ಮನ್ಸ್ಗಳನ್ನ ಕಾಡುವ ಸಮಸ್ಯೆ. ಈ ಹಿಂದೆ ವಿಶ್ವ ಕ್ರಿಕೆಟ್ನಲ್ಲಿ ಅದೆಷ್ಟೋ ಶ್ರೇಷ್ಠ ಬ್ಯಾಟ್ಸ್ಮನ್ಗಳು ನರ್ವಸ್ 90 ಯಿಮದ ಬಳಲಿ ಅದೆಷ್ಟೋ ಶತಕಗಳನ್ನ ಮಿಸ್ ಮಾಡಿಕೊಂಡಿದ್ದಾರೆ.
ಕ್ರಿಕೆಟ್ ದೇವರನ್ನು ಬಿಟ್ಟಿರಲಿಲ್ಲ ನರ್ವಸ್ ನೈಂಟಿ..!
ನರ್ವಸ್ 90 ಅನ್ನೊ ಪೆಡಂಭೂತ ಕ್ರಿಕೆಟ್ ದೇವರು ಸಚಿನ್ ತೆಂಡೂಲ್ಕರ್ ಅವರನ್ನು ಬಿಟ್ಟಿರಲಿಲ್ಲ. ವಿಶ್ವ ಕ್ರಿಕೆಟ್ನಲ್ಲಿ ನರ್ವಸ್ ನೈಂಟಿ ಮಾಸ್ಟರ್ ಸಚಿನ್ ತೆಂಡೂಲ್ಕರ್ ಅವರನ್ನೆ ಹೆಚ್ಚು ಬಲಿ ತೆಗೆದುಕೊಂಡಿತ್ತು ಅನ್ನೋದೇ ಮತ್ತೊಂದು ವಿಶೇಷ . ಕ್ರಿಕೆಟ್ನ ಮೂರು ಫಾರ್ಮೆಟ್ಗಳಿಂದ ಸಚಿನ್ ತೆಂಡೂಲ್ಕರ್ ಒಟ್ಟು 18 ಬಾರಿ ಔಟಾಗಿ ಶತಕಗಳನ್ನ ಕೈಚೆಲ್ಲಿದ್ರು.
ನರ್ವಸ್ ನೈಂಟಿ ಎದುರಿಸಿದ್ದ ರಿಷಭ್ ಪಂತ್
ಟೀಂ ಇಂಡಿಯಾದ ವಿಕೆಟ್ ಕೀಪರ್ ರಿಷಭ್ ಪಂತ್ ಆಸಿಸ್ ಸರಣಿಗೂ ಮುನ್ನ ನರ್ವಸ್ ನೈಂಟಿ ಸಮಸ್ಯೆಯನ್ನ ಎದುರಿಸಿದ್ರು. ಕಳೆದ ಕೆಲವು ತಿಂಗಳ ಹಿಂದೆ ತವರಿನಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ನಡೆದ ರಾಜ್ಕೋಟ್ ಮತ್ತು ಹೈದ್ರಾಬದ್ ಟೆಸ್ಟ್ ಪಂದ್ಯದಲಗಳಲ್ಲಿ ರಿಷಭ್ ಎರಡೂ ಪಂದ್ಯಗಳಲ್ಲೂ ನರ್ವಸ್ 90 ಎದುರಿಸಿದ್ರು. ರಾಜ್ಕೋಟ್ ಂದ್ಯ ಮೊದಲ ಇನ್ನಿಂಗ್ಸ್ನಲ್ಲಿ ಬೊಂಬಾಟ್ ಬ್ಯಾಟಿಂಗ್ ಮಾಡಿದ್ದ ಡೆಲ್ಲಿ ಡ್ಯಾಶರ್ 92 ರನ್ ಗಳಿಸಿ ಔಟ್ ಆಗಿ ಬಿಶೂಗೆ ವಿಕೆಟ್ ಒಪ್ಪಿಸಿದ್ದರು.
ವಿಪರ್ಯಾವೆಂದರೆ ನಂತರ ನಡೆದ ಹೈದ್ರಬಾದ್ ಟೆಸ್ಟ್ ಪಂದ್ಯದ ಮೊದಲ ಇನ್ನಿಂಗ್ಸ್ನಲ್ಲಿ ಮತ್ತೆ ಸಾಲಿಡ್ ಬ್ಯಾಟಿಂಗ್ ಮಾಡಿ ಶತಕದ ಹೊಸ್ತಿಲಿಗೆ ತಲುಪುತ್ತಾರೆ. ಇನ್ನೇನು ಡೆಲ್ಲಿ ಡ್ಯಾಶರ್ ಶತಕ ಬಾರಿಸಿ ಸಂಭ್ರಮಿಸುತ್ತಾರೆ ಅಂದುಕೊಳ್ಳುವಾಗಲೇ 92 ರನ್ ಗಳಿಸಿದ್ದಾಗ ರಿಷಭ್ ಗೆಬ್ರಿಯಲ್ ಎಸತದಲ್ಲಿ ಹೇಟ್ಮರ್ಗೆ ಕ್ಯಾಚ್ ನೀಡಿ ಹೊರ ನಡೆಯುತ್ತಾರೆ. ಇದರೊಂದಿಗೆ ರಿಷಭ್ ಮತ್ತೆ ನರ್ವಸ್ 90ಗೆ ಗುರಿಯಾಗಿ ಶತಕದಿಂದ ವಂಚಿತರಾಗುತ್ತಾರೆ.
ನರ್ವಸ್ ನೈಂಟಿಯಿಂದ ಹೊರ ಬಂದ ವಿಕೆಟ್ ಕೀಪರ್
ತವರಿಲ್ಲಿ ಕೆರೆಬಿಯನ್ನರ ವಿರುದ್ಧ ಎರಡು ಬ್ಯಾಕ್ ಟು ಬ್ಯಾಕ್ ಶತಕಗಳನ್ನ ಮಿಸ್ ಮಾಡಿಕೊಂಡು ನರ್ವಸ್ ನೈಂಟಿ ಎದುರಿಸಿದ್ದ ರಿಷಭ್ ಪಂತ್ ಇದೀಗ ಸಿಡ್ನಿ ಟೆಸ್ಟ್ ಪಂದ್ಯದಲ್ಲಿ ಸಾಲಿಡ್ ಸೆಂಚುರಿ ಸಿಡಿಸಿ ನರ್ವಸ್ 90ಯಿಂದ ಹೊರ ಬಂದು ಸಲೆಬ್ರೇಟ್ ಮಾಡಿದ್ದಾರೆ.
ನರ್ವಸ್ ನೈಂಟಿ ಬಗ್ಗೆ ಸ್ವತಃ ರಿಷಭ್ ಪಂತ್ ರಿವೀಲ್
ನಿಜ ಹೇಳಬೇಕೆಂದರೆ, ನಾನು ಭಾರತದಲ್ಲಿ ವೆಸ್ಟ್ ಇಂಡೀಸ್ ವಿರುದ್ಧದ ಟೆಸ್ಟ್ ಇನ್ನಿಂಗ್ಸ್ಗಳಲ್ಲಿ ಎರಡು ಬಾರಿ 92 ಮತ್ತು 92 ರನ್ಗಳಿಗೆ ಔಟ್ ಆಗಿ ಸಣ್ಣ ಮಟ್ಟಿಗೆ ನರ್ವಸ್ ಆಗಿದ್ದೆ. ಈ ಕಾರಣಕ್ಕಾಗಿ ಸ್ವಲ್ಪ ಹೆದರಿದ್ದೆ . ಆದರೆ ಈಗ ಆ ಹಂತವನ್ನ ಈಗ ದಾಟಿ ಬಂದಿದ್ದೇನೆ. ನಾನು ನನ್ನ ಸೆಲೆಬ್ರೇಷನ್ನನ್ನ ಪ್ರೀತಿಸುತ್ತೇನೆ. ನಾನು ಏನೋ ಒಂದನ್ನ ಸಾಧಿಸುತ್ತೇನೆ ಅಂದುಕೊಂಡಿರಲಿಲ್ಲ.
ಒಟ್ನಲ್ಲಿ ಎಲ್ಲ ಶ್ರೇಷ್ಠ ಬ್ಯಾಟ್ಸ್ಮನ್ಗಳಂತೆ ರಿಷಭ್ ಪಂತ್ ನರ್ವಸ್ 90 ಎದುರಿಸಿದ್ದಾರೆ. ಆದರೆ ವೃತ್ತಿ ಜೀವನದ ಆರಂಭದಲ್ಲಿ ಎದುರಾದ ನರ್ವಸ್ 90 ಪೆಡಂಭೂತವನ್ನ ಡೆಲ್ಲಿ ಡ್ಯಾಶರ್ ಬೇಗನೆ ಹೊಡೆದೊಡಿಸಿ ಯುವ ಕ್ರಿಕೆಟಿಗರಿಗೆ ರೋಲ್ ಮಾಡಲ್ ಆಗಿದ್ದಾರೆ.