ಪೋಷಕರ ವೋಟಿಂಗ್, ದಿ ಬೆಂಗಳೂರು ಸ್ಕೂಲ್ ಕರ್ನಾಟಕದಲ್ಲಿ ನಂ.1 ಮತ್ತು ಭಾರತದಲ್ಲಿ ನಂ. 6ನೇಸ್ಥಾನ

ಬೆಂಗಳೂರು, ಜ.5- ಪೋಷಕರ ವೋಟಿಂಗ್‍ನಿಂದ ದಿ ಬೆಂಗಳೂರು ಸ್ಕೂಲ್ ಕರ್ನಾಟಕದಲ್ಲಿ ನಂ.1 ಮತ್ತು ಭಾರತದಲ್ಲೇ 6ನೇ ಸ್ಥಾನ ಪಡೆದು ಎಜುಕೇಶನ್ ಟುಡೇ ಪ್ರಶಸ್ತಿ ನೀಡಿದೆ.

ಅತ್ಯುತ್ತಮ ವಿದ್ಯಾಭಾಸ ಒದಗಿಸುವ ಈ ಶಾಲೆ ಸಂತೋಷದ ಪೋಷಕರು ಮತ್ತು ಸಂತೋಷದ ಮಕ್ಕಳಿಂದ ಶಾಲೆ ಹಾಗೂ ಸಮುದಾಯ ಸಂತಸ ಪಡೆಯುತ್ತದೆ ಎಂದು ನಂಬುತ್ತಾರೆ.

2012 ರಲ್ಲಿ ಸ್ಥಾಪಿತವಾಗಿರುವ ಈ ಉತ್ಕೃಷ್ಟ ಶಾಲೆ 2013 ರಿಂದ ಶಿಕ್ಷಣ ವಲಯದಲ್ಲಿ ತನ್ನ ಗುರುತನ್ನು ಮೂಡಿಸುತ್ತಿದೆ.ಪ್ರಿಸ್ಕೂಲ್ ವಿಭಾಗವು ಎಜುಕೇಶನ್ ಟುಡೇ, ಟೈಮ್ಸ್ ಆಫ್ ಇಂಡಿಯಾ, ಎಜುಕೇಶನ್ ವಲ್ರ್ಡ್, ಬ್ರೈನ್ ಫೀಡ್, ಅರ್ಲಿ ಚೈಲ್ಡ್ ಹುಡ್ ಎಜುಕೇಶನ್, ದೆವಾಂಗ್ ಮೆಹ್ತಾ ಪ್ರಶಸ್ತಿ ಇತ್ಯಾದಿಗಳನ್ನು ಪಡೆದುಕೊಂಡಿದೆ. ಇವೆಲ್ಲಕ್ಕೂ ಮೀರಿ ನ್ಯೂಯಾರ್ಕ್ ನ ಕ್ಲೈಮೇಟ್ ವೀಕ್ ಆಫ್ ಟ್ರಂಪ್ ನಲ್ಲಿ ಯುಎನ್ ಜಿಎ ಪ್ರಶಸ್ತಿಯನ್ನೂ ಪಡೆದುಕೊಂಡಿದೆ.

ದಿ ಬೆಂಗಳೂರು ಸ್ಕೂಲ್ (ಟಿಬಿಎಸ್) ವೈಟ್ ಫೀಲ್ಡ್ ನಲ್ಲಿ ಇ.ಸಿ.ಸಿ ಶಾಖೆಯನ್ನು ತೆರೆದಿದೆ. ದಿ ಬೆಂಗಳೂರು ಸ್ಕೂಲ್ ಸದ್ಯದಲ್ಲೇ ಅಂದರೆ ಜೂನ್ 2019ರಲ್ಲಿ ದಿ ಗ್ರೀನ್ ಸ್ಕೂಲ್ ಬೆಂಗಳೂರು (ಟಿಬಿಎಸ್ ಬಿ)ಯನ್ನು ಪ್ರಾರಂಭಿಸಲು ಸಿದ್ಧವಾಗಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ