ಪೂಜಾರ ಆಕರ್ಷಕ ಶತಕ : ಭಾರತಕ್ಕೆ ದಿನದ ಗೌರವ

ಸಿಡ್ನಿ ; ಸಿಡ್ನಿ ಟೆಸ್ಟ್ ಪಂದ್ಯದ ಮೊದಲ ಟೀಂ ಇಂಡಿಯಾ ಮೇಲುಗೈ ಸಾಧಿಸಿದೆ. ಸಿಡ್ನಿ ಅಂಗಳದಲ್ಲಿ ನಡೆದ ಮೊದಲ ದಿನದಾಟದ ಪಂದ್ಯದಲ್ಲಿ ತಂಡದ ಟೆಸ್ಟ್ ಸ್ಪೆಶಲಿಸ್ಟ್ ಚೇತೇಶ್ವರ ಪೂಜಾರ ಅವರ ಆಕರ್ಷಕ ಶತಕದ ನೆರವಿನಿಂದ ಮೊದಲ ದಿನ ದಿನದ ಗೌರವ ಸಂಪಾದಿಸಿತು.

ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆಯ್ದಕೊಂಡ ಟೀಂ ಇಂಡಿಯಾಕ್ಕೆ ಕನ್ನಡಿಗರಾದ ಕೆ.ಎಲ್. ರಾಹುಲ್ ಮತ್ತು ಮಯಾಂಕ್ ಅಗರ್ವಾಲ್ ಉತ್ತಮ ಆರಂಭ ನೀಡುವಲ್ಲಿ ಎಡವಿದ್ರು. 9 ರನ್ ಗಳಿಸಿದ್ದ ಕೆ.ಎಲ್. ರಾಹುಲ್ ಹೆಜ್ಲ್ವುಡ್ಗೆ ವಿಕೆಟ್ ಒಪ್ಪಿಸಿ ಹೊ ನಡೆದ್ರು.

ಮೂರನೇ ಕ್ರಮಾಂಕದಲ್ಲಿ ಬಂದ ಟೆಸ್ಟ್ ಸ್ಪೆಶಲಿಸ್ಟ್ ಚೇತೇಶ್ವರ ಪೂಜಾರ ಮಯಾಂಕ್ ಜೊತೆಗೂಡಿ ತಂಡವನ್ನ ಕುಸಿಯುವ ಭೀತಿಯಿಂದ ಪಾರು ಮಾಡಿದ್ರು. ಈ ಜೋಡಿ ಎರಡನೇ ವಿಕೆಟ್ಗೆ 116 ರನ್ ಸೇರಿಸಿ ಭದ್ರ ಅಡಿಪಾಯ ಹಾಕಿಕೊಟ್ಟಿತ್ತು.77 ರನ್ ಗಳಿಸಿದ್ದ ಮಯಾಂಕ್ ಅಗರ್ವಾಲ್ ಅರ್ಧ ಶತಕ ಬಾರಿಸಿ ಲಯಾನ್ಗೆ ಬಲಿಯಾದ್ರು.

ನಾಲ್ಕನೆ ಮತ್ತು ಐದನೇ ಕ್ರಮಾಂಕದಲ್ಲಿ ಬಂದ ಕ್ಯಾಪ್ಟನ್ ಕೊಹ್ಲಿ ಮತ್ತು ಅಜಿಂಕ್ಯ ರಹಾನೆ ಹೆಚ್ಚು ಹೊತ್ತು ಕ್ರೀಸ್ನಲ್ಲಿ ನಿಲ್ಲಲ್ಲಿ. ಆದರೆ ಏಕಾಂಗಿ ಹೋರಾಟ್ ಮುಂದುವರೆಸಿದ ಚೇತೇಶ್ವರ ಪೂಜಾರ ಆಕರ್ಷಕ ಶತಕ ಬಾರಿಸಿ ಸಂಭ್ರಮಿಸಿದ್ರು. ಇದರೊಂದಿಗೆ ಚೇತೇಶ್ವರ ಪೂಜಾರ ಟೆಸ್ಟ್ ನಲ್ಲಿ 18 ಶತಕ ಬಾರಿಸಿದ ಹಿರಿಮೆಗೆ ಪಾತ್ರರಾದ್ರು.

ದಿನದಾಟದ ಅಂತ್ಯದಲ್ಲಿ ಸಾಲಿಡ್ ಬ್ಯಾಟಿಂಗ್ ಮಾಡಿದ ಚೇತೇಶ್ವರ ಪೂಜಾರ ಅಜೇಯ 130 ಮತ್ತು ಆಲ್ರೌಂಡರ್ ಹನುಮ ವಿಹಾರಿ ಅಜೇಯ 39 ರನ್ಗಳಿಸಿ ಎರಡನೇ ದಿನಕ್ಕೆ ಕ್ರೀಸ್ ಕಾಯ್ದುಕೊಂಡದ್ರು. ಭಾರತ ದಿನದಾಟದ ಅಂತ್ಯಕ್ಕೆ 4 ವಿಕೆಟ್ ನಷ್ಟಕ್ಕೆ 304 ರನ್ ಗಳಿಸಿದ್ದು ಬಿಗ್ ಸ್ಕೋರ್ನತ್ತ ದಾಪುಗಾಲು ಹಾಕಿದೆ.

ಟೀಂ ಇಂಡಿಯಾ ಮೊದಲ ಇನ್ನಿಂಗ್ಸ್ 303/4
ಚೇತೇಶ್ವರ ಪೂಜಾರ ಅಜೇಯ 130 , ವಿಹಾರಿ ಅಜೇಯ 39
ಮಯಾಂಕ್ ಅಗರ್ವಾಲ್ 77, ವಿರಾಟ್ ಕೊಹ್ಲಿ 23
ಜೋಶ್ ಹೆಜ್ಲ್ವುಡ್ 2, ಸ್ಟಾರ್ಕ್, ಲಿಯಾನ್ಗೆ ತಲಾ 1 ವಿಕೆಟ್

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ