ಅರ್ಧ ಶತಕ ಬಾರಿಸಿ ಮಿಂಚಿದ ಕನ್ನಡಿಗ ಮಯಾಂಕ್

ಟೀಂ ಇಂಡಿಯಾದ ಓಪನರ್ ಕನ್ನಡಿಗ ಮಯಾಂಕ್ ಅಗರ್ವಾಲ್ ಮತ್ತೆ ಶೈನ್ ಆಗಿದ್ದಾರೆ. ಸಿಡ್ನಿಯಲ್ಲಿ ಆರಂಭವಾದ ಎರಡನೇ ಟೆಸ್ಟ ಪಂದ್ಯದಲ್ಲಿ ಮಯಾಂಕ್ ಅಗರ್ವಾಲ್ ಅರ್ಧ ಶತಕ ಬಾರಿಸಿ ಶೈನ್ ಆದ್ರು.

ಸಿಡ್ನಿಯಲ್ಲಿ ಅಂಗಳದಲ್ಲಿ ಮತ್ತೊಬ್ಬ ಕನ್ನಡಿಗ ಕೆ.ಎಲ್. ರಾಹುಲ್ ಜೊತೆ ಕಣಕ್ಕಿಳಿದ ಮಯಾಂಕ್ ಅಗರ್ವಾಲ್ ಉತ್ತಮ ಆರಂಭ ನೀಡುವಲ್ಲಿ ಎಡವಿದರಾದ್ರು. ಆದ್ರೆ ಮೂರನೇ ಸ್ಲಾಟ್ನಲ್ಲಿ ಬಂದ ಚೇತಯೇಶ್ವರ ಪೂಜಾರ ಜೊತೆ ಸಾಲಿಡ್ ಇನ್ನಿಂಗ್ಸ್ ಕಟ್ಟಿಕೊಟ್ಟು ಆಸಿಸ್ ಲೆಕ್ಕಾಚಾರಗಳನ್ನ ಉಲ್ಟಾ ಮಾಡಿದ್ರು.

ಟೆಸ್ಟ್ ಸ್ಪೆಶಲಿಸ್ಟ್ ಪೂಜಾರ ಜೊತೆ ಕ್ಲಾಸ್ ಅಂಡ್ ಮಾಸ್ ಬ್ಯಾಟಿಂಗ್ ಮಾಡಿದ ಕರ್ನಾಟಕ ಡ್ಯಾಶಿಂಗ್ ಓಪನರ್ ಆಸಿಸ್ ಬೌಲರ್ಗಳನ್ನ ಚೆಂಡಾಡಿ ಕೇವಲ 96 ಎಸೆತಗಳಲ್ಲಿ ಅರ್ಧ ಶತಕ ಪೂರೈಸಿ ಸಂಭ್ರಮಿಸಿದ್ರು.

ಮಾಯಾಂಕ್ ಅಗರ್ವಾಲ್ ಒಟ್ಟು 112 ಎಸೆತ ಎದುರಿಸಿ 77 ರನ್ ಗಳಿಸಿದ್ರು. 7 ಬೌಂಡರಿ 2 ಸಿಕ್ಸರ್ ಬಾರಿಸಿ ಅಬ್ಬರಿಸಿದ ಮಯಾಂಕ್ 68.75 ಸ್ಟ್ರೈಕ್ರೇಟ್ ಪಡೆದ್ರು.

ಮಾಯಂಕ್ ಸತತ ಎರಡನೇ ಅರ್ಧಶತಕ..!
ಸಿಡ್ನಿ ಟೆಸ್ಟ್ ಪಂದ್ಯದ ಮೊದಲ ಇನ್ನಿಂಗ್ಸ್ನಲ್ಲಿ ಕರ್ನಾಟಕದ ರನ್ ಮಷೀನ್ ಮಯಾಂಕ್ ಅರ್ಧ ಶತಕ ಬಾರಿಸುವ ಮೂಲಕ ಸರಣಿಯಲ್ಲಿ ಸತತ ಎರಡನೇ ಅರ್ಧ ಶತಕ ಪೂರೈಸಿದ ಸಾಧನೆ ಮಾಡಿದ್ರು. ಮೊನ್ನೆ ಮೆಲ್ಬೋರ್ನ್ನಲ್ಲಿ ನಡೆದ ಆeಃue ಪಂದ್ಯದಲ್ಲಿ ಮಯಾಂಕ್ ಅಗರ್ವಾಲ್ 76 ರನ್ ಗಳಿಸಿ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ರು.

ಓಪನರ್ ಮಯಾಂಕ್ ಮತ್ತೊಂದು ದಾಖಲೆ ..!
ಚೊಚ್ಚಲ ಸರಣಿಯಲ್ಲಿ ಬ್ಯಾಕ್ ಟು ಬ್ಯಾಕ್ ಎರಡು ಅರ್ಧ ಶತಕಗಳನ್ನ ಸಿಡಿಸಿರುವ ಕನ್ನಡಿಗ ಮಯಾಂಕ್ ಮತ್ತೊಂದು ದಾಖಲೆ ಬರೆದಿದ್ದಾರೆ. ತಂಡದ ಮಾಜಿ ನಾಯಕ ಸುನಿಲ್ ಗವಾಸ್ಕರ್ ಹಾಗೂ ಮರಿ ಸಚಿನ್ ಪೃಥ್ವಿ ಶಾ ಅವರುಗ ದಾಖಲೆ ಸರಿಗಟ್ಟಿದ್ದಾರೆ.

ಮಾಜು ನಾಯಕ ಸುನೀಲ್ ಗವಾಸ್ಕರ್ ಮತ್ತು ಮರಿ ಸಚಿನ್ ಪೃಥ್ವಿ ಶಾ ತಮ್ಮ ಡೆಬ್ಯು ಸರಣಿಗಳಲ್ಲಿ ಬ್ಯಾಕ್ ಟು ಬ್ಯಾಕ್ ಅರ್ಧ ಶತಕ ಬಾರಿಸಿ ದಾಖಲೆ ಬರದಿದ್ರು. ಇದೀಗ ಮಯಾಂಕ್ ಈ ದಾಖಲೆಯನ್ನ ಸರಿಗಟ್ಟಿದ್ದಾರೆ. ಜೊತೆಗೆ ಆಸೀಸ್ ನೆಲದಲ್ಲಿ ಎರಡು ಬಾರಿ 50ಕ್ಕೂ ಅಧಿಕ ರನ್ಗಳಿಸಿದ ಭಾರತದ ಎಂಟನೇ ಆರಂಭಿಕ ಆಟಗಾರನಾಗಿ ದಾಖಲೆ ಪುಸ್ತಕ ಸೇರಿದ್ದಾರೆ.

ಶತಕದ ಸಮೀಪದಲ್ಲಿ ಎಡವಿದ ಮಯಾಂಕ್
ಸಾಲಿಡ್ ಫಾರ್ಮ್ನಲ್ಲಿರುವ ಮಯಾಂಕ್ ಈ ಬಾರಿಯೂ ಶತಕ ಬಾರಿಸುವ ಅವಕಾಶದಿಂದ ಮತ್ತೋಮ್ಮೆ ವಂಚಿತರಾದ್ರು. ಆದರೂ ಮಯಾಂಕ್ ಆಡಿದ ಮೂರೇ ಇನ್ನಿಂಗ್ಸ್ಗಳಲ್ಲಿ ಎರಡೆರಡು ಅರ್ಧ ಶತಕ ಬಾರಿಸಿ ತೋರಿಸಿದ ಪರಾಕ್ರಮದಿಂದಾಗಿ ಟೀಂ ಇಂಡಿಯಾ ಮೊದಲ ದಿನ ಮೇಲುಗೈ ಸಾಧಿಸುವಲ್ಲಿ ನೆರವಾದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ