
ಬೆಂಗಳೂರು, ಜ.4- ಮಲೆನಾಡು ಮಿತ್ರವೃಂದವು ಪ್ರತಿ ವರ್ಷ ಜನವರಿ ತಿಂಗಳ ಮೊದಲ ವಾರದಲ್ಲಿ ಮಲೆನಾಡಿಗರಿಗಾಗಿ ಮಲೆನಾಡು ಕ್ರೀಡಾಕೂಟವನ್ನು ಆಯೋಜಿಸಿಕೊಂಡು ಬಂದಿದ್ದು, ಈ ಬಾರಿ ಇದೇ 6ರಂದು 10ನೇ ವರ್ಷದ ಕ್ರೀಡಾ ಕೂಟ ಆಯೋಜಿಸಿದೆ.
ಸುದ್ದಿಗೋಷ್ಠಿಯಲ್ಲಿ ಮಲೆನಾಡು ಮಿತ್ರವೃಂದದ ಅಧ್ಯಕ್ಷ ಸುಬ್ಬಯ್ಯನಂಟೂರು ಮಾತನಾಡಿ, ಜ.6ರಂದು ಬೆಳಗ್ಗೆ 10ರಿಂದ ಸಂಜೆ 6ಗಂಟೆಗೆವರೆಗೆ ಜಾಲಹಳ್ಳಿಯ ಎಚ್ಎಂಟಿ ಕ್ರೀಡಾಂಗಣದಲ್ಲಿ ಕ್ರೀಡಾಕೂಟ ನಡೆಯಲಿದೆ.ಇದರಲ್ಲಿ ಮಲೆನಾಡಿನ ಕ್ರೀಡೆಗಳು ಹೆಚ್ಚಾಗಿರುತ್ತವೆ ಎಂದು ತಿಳಿಸಿದರು.
ಮಲೆನಾಡು ಭಾಗಗಳಿಂದ ಬಂದು ಬೆಂಗಳೂರಿನಲ್ಲಿ ಉದ್ಯೋಗ ವ್ಯಾಪಾರಗಳಲ್ಲಿ ತೊಡಗಿಸಿಕೊಂಡಿರುವ ನಾವುಗಳು ಬಿಡುವಿನ ವೇಳೆಯಲ್ಲಿ ಒಂದೆಡೆ ಸೇರಲು ಕ್ರೀಡಾಕೂಟ ಸಹಕಾರಿಯಾಗಿದೆ ಎಂದರು.
ನಮ್ಮ ಸಂಘವು ಕಳೆದ 10 ವರ್ಷಗಳಿಂದ ಮಲೆನಾಡು ಭಾಗದ ಸಾಧಕರನ್ನು ಗುರುತಿಸಿ ಅವರಿಗೆ ಮಲೆನಾಡ ಮಿತ್ರ ಪ್ರಶಸ್ತಿ ಮತ್ತು ಮಲೆನಾಡ ಸಾಧಕರ ಪ್ರಶಸ್ತಿಗಳನ್ನು ನೀಡಿ ಗೌರವಿಸುತ್ತಾ ಬಂದಿದ್ದು, ಈ ಬಾರಿ ಮಲೆನಾಡು ಮಿತ್ರ ಪ್ರಶಸ್ತಿಯನ್ನು ಖ್ಯಾತ ಸಮಾಜವಾದಿ ಹಾಗೂ ಮಾಜಿ ಶಾಸಕ ಕೋಣಂದೂರು ಲಿಂಗಪ್ಪನವರಿಗೆ ನೀಡಿ ಸನ್ಮಾನಿಸಿದ್ದೇವೆ ಎಂದು ಹೇಳಿದರು.
ಕ್ರೀಡಾಕೂಟದ ಸಂದರ್ಭದಲ್ಲಿ ಮಲೆನಾಡಿನ ಚಿತ್ರಣಗಳಿರುವ 2019ರ ಕ್ಯಾಲೆಂಡರ್ಗಳನ್ನು ವಿತರಿಸಲಾಗುತ್ತದೆ ಎಂದರು.
ಸುದ್ದಿಗೋಷ್ಠಿಯಲ್ಲಿ ಕಾರ್ಯದರ್ಶಿ ವಾಸಪ್ಪ ಪಡುಬೈಲ್ ಮತ್ತಿತರರಿದ್ದರು.