ಸಂವೇದನಾ ಚಾರಿಟಬಲ್ ಟ್ರಸ್ಟ್ ವತಿಯಿಂದ ರಾಷ್ಟ್ರ ಮಟ್ಟದ ವಂದೇ ಮಾತರಂ ಸ್ಪರ್ಧೆ

ಬೆಂಗಳೂರು,ಜ.4-ಸಂವೇದನಾ ಫೌಂಡೇಷನ್ ಚಾರಿಟಬಲ್ ಟ್ರಸ್ಟ್ ವತಿಯಿಂ ಪ್ರತಿ ವರ್ಷದಂತೆ ಈ ವರ್ಷವೂ ರಾಷ್ಟ್ರಮಟ್ಟದ ವಂದೇ ಮಾತರಂ ಆಲ್ಬಮ್ ಸಾಂಗ್ ಸ್ಪರ್ಧೆ ಏರ್ಪಡಿಸಿದ್ದು, ರಾಜ್ಯದ ಸಂಸ್ಕøತಿ ವಿಡಿಯೋ ಚಿತ್ರೀಕರಣ ಮಾಡಿ ಜ.20ರೊಳಗೆ ಕಳುಹಿಸಿಕೊಡಲು ಕೋರಿದೆ.

ಈ ಕುರಿತು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಫೌಂಡೇಷನ್‍ನ ಸಂಸ್ಥಾಪಕ ಪ್ರಕಾಶ್ ಮಲ್ದೆ, ಕಳೆದ ವರ್ಷ ಜನವರಿಯಲ್ಲಿ ವಿವೇಕಾನಂದರ ಜನ್ಮ ದಿನದ ಪ್ರಯುಕ್ತ ಸುಮಾರು ಆರು ಸಾವಿರ ವಿದ್ಯಾರ್ಥಿಗಳು ವಂದೇಮಾತರಂ ಹಾಡಿ ವಿಶ್ವದಾಖಲೆ ನಿರ್ಮಾಣ ಮಾಡಿದ್ದಾರೆ. ಸಂಗೀತಗಾರರು ರಾಜ್ಯದ ಸಂಸ್ಕøತಿ ವಿಡಿಯೋ ಚಿತ್ರೀಕರಣ ಮಾಡಿ ಜ.20ರೊಳಗೆ ವಿಡಿಯೋ ಅಪ್‍ಲೋಡ್ ಕಳುಹಿಸಬೇಕು ಎಂದು ತಿಳಿಸಿದ್ದಾರೆ.

ಪ್ರಥಮ ಬಹುಮಾನ ಎರಡು ಲಕ್ಷ , ದ್ವಿತೀಯ ಬಹುಮಾ ಒಂದು ಲಕ್ಷ ನೀಡಲಾಗುತ್ತಿದ್ದು, ಫೆಬ್ರವರಿ 9ರಂದು ಉಡುಪಿಯ ಮಲ್ಪೆ ಬೀಚ್‍ನಲ್ಲಿ ನಡೆಯುವ ಸಮಾರೋಪ ಸಮಾರಂಭದಲ್ಲಿ ಉತ್ಕøಷ್ಟ ಪ್ರಸ್ತುತಿಗಳನ್ನು ನೀಡಿದ 100 ಕಲಾವಿದರನ್ನು ಆಹ್ವಾನಿಸಿ ಅವರಿಂದ ಸಾಂಸ್ಕøತಿಕ ಕಾರ್ಯಕ್ರಮ ಮತ್ತು ವಿಜೇತರ ಘೋಷಣೆ ಮಾಡುವುದಾಗಿ ತಿಳಿಸಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ