ಹುಬ್ಬಳ್ಳಿ: ಕಾಂಗ್ರೆಸ್ ಪಕ್ಷದಲ್ಲಿ ವೈಯುಕ್ತಿಕ ವರ್ಚಸ್ಸು ಇಲ್ಲ. ಸಚಿವ ಸಂಪುಟ ವಿಸ್ತರಣೆಯಲ್ಲಿ ಸಿದ್ದರಾಮಯ್ಯ ಕೈ ಮೇಲು ಎಂಬುದಿಲ್ಲ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಸ್ಪಷ್ಟಪಡಿಸಿದರು.
ಹುಬ್ಬಳ್ಳಿವಿಮಾನ ನಿಲ್ದಾಣದಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಪಕ್ಷದಲ್ಲಿ ಎಲ್ಲವೂ ಹೈಕಮಾಂಡ್ ತೀರ್ಮಾನದಂತೆ ನಡೆಯುತ್ತೆ. ನಾವು ಸಲಹೆ ಸೂಚನೆ ಮಾತ್ರ ನೀಡುತ್ತೇವೆ. ಅಂತಿಮವಾಗಿ ಹೈಕಮಾಂಡ ನಿರ್ಧಾರ ತೆಗೆದುಕೊಳ್ಳುತ್ತೆ ಎಂದರು.
ಇನ್ನು ನಮ್ಮಲ್ಲಿ ಯಾರಲ್ಲು ಅಸಮಾಧಾನವಿಲ್ಲ. ದೇವೆಗೌಡರು, ರೇವಣ್ಣ ಯಾವ ಅರ್ಥದಲ್ಲಿ ಸಂಪುಟದ ಬಗ್ಗೆ ಅಸಮಾಧಾನವಿದೆ ಅಂತ ಹೇಳಿದ್ದಾರೆ ಗೊತ್ತಿಲ್ಲ ಎಂದರು. ರಮೇಶ ಜಾರಕಿಹೋಳಿ ಎಲ್ಲೂ ಹೋಗೋದಿಲ್ಲ. ಫೋನ್ ಸ್ವಿಚ್ ಆಫ್ ಮಾಡಿಕೊಂಡಿದ್ದಾರೆ. ಕಾಂಗ್ರೆಸ್ ನಲ್ಲೆ ಇರುತ್ತಾರೆ ಎಂದರು.
ಲೋಕಸಭೆ ಚುನಾವಣೆಯಲ್ಲಿ ಸೀಟು ಹಂಚಿಕೆ ಬಗ್ಗೆ ತಿಂಗಳೊಳಗೆ ಸಭೆ ಮಾಡಿ ನಿರ್ಧಾರ ತೆಗೆದುಕೊಳ್ಳತ್ತೇವೆ. ಇನ್ನು ಯಾವ ಕ್ಷೇತ್ರಕ್ಕೆ ಯಾರು ಎಂಬುದು ಗೊತ್ತಾಗಿಲ್ಲ. ಚರ್ಚೆ ಮಾಡಿದ ಮೇಲೆ ಗೊತ್ತಾಗಲಿದೆ ಎಂದರು.
ಶಬರಿಮಲೈ ಅಯ್ಯಪ್ಪ ಸ್ವಾಮಿ ದೇವಾಲಯಕ್ಕೆ ಮಹಿಳೆಯರ ಪ್ರವೇಶ ವಿಚಾರದಲ್ಲಿ ಬಿಜೆಪಿಯವರಿಗೆ ಸುಪ್ರೀಂಕೋರ್ಟ್ ಆದೇಶದ ಮೇಲೆ ಗೌರವಿಲ್ಲ. ರಾಮಮಂದಿರ ವಿಚಾರ ಬಂದಾಗ, ಸುಪ್ರೀಂ ಕೋಟ್೯ ತೀರ್ಪು ಬರಲಿ ಅಂತಾರೆ, ಈಗ ಅಯ್ಯಪ್ಪ ಸ್ವಾಮಿ ದೇವಾಲಯ ಪ್ರವೇಶ ವಿಚಾರ ಬಂದ್ರೆ ಬಿಜೆಪಿಯವರು ವಿರೋಧ ಮಾಡುತ್ತಾರೆ. ಬಿಜೆಪಿಯವರಿಗೆ ನ್ಯಾಯಾಲಯದ ಮೇಲೆ ಗೌರವ, ವಿಶ್ವಾಸ ಇಲ್ಲ. ತೀರ್ಪು ಬಂದ್ರೆ ವಿರೋಧ ಮಾಡ್ತಾರೆ, ಅವರಿಗೆ ನ್ಯಾಯಂಗದ ಬಗ್ಗೆ ಕ್ಲ್ಯಾರಿಟಿ ಇಲ್ಲ ಎಂದರು.
ರಫೇಲ್ ಡೀಲ್ ವಿಷಯದಲ್ಲಿ ಸುಪ್ರೀಂಕೋರ್ಟ್ ಸಿಬಿಐ ನೀಡುವದಿಲ್ಲ ಅಂತ ಮಾತ್ರ ಹೇಳಿದೆ.ಆದ್ರೆ ಜೆಪಿಸಿಗೆ ಯಾಕೆ ನೀಡುತ್ತಿಲ್ಲ. ಜೆಪಿಸಿಗೆ ನೀಡಿದ್ರೆ ಇವರಿಗ್ಯಾಕೆ ಭಯ ಎಂದು ಪ್ರಶ್ನಿಸಿದರು.