ಬುಲಂದ್​ಶಹರ್​ ಗಲಭೆಯಲ್ಲಿ ಪೊಲೀಸ್ ಅಧಿಕಾರಿ ಹತ್ಯೆ ಪ್ರಕರಣ: ಪ್ರಮುಖ ಆರೋಪಿ ಬಂಧನ

ಬುಲಂದ್​ಶಹರ್​: ಬುಲಂದ್​ಶಹರ್​ ಗಲಭೆಯಲ್ಲಿ ಪೊಲೀಸ್ ಅಧಿಕಾರಿ​ ಸುಬೋಧ್​ ಕುಮಾರ್​ ಸಿಂಗ್​ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಪ್ರಮುಖ ಆರೋಪಿಯಾಗಿದ್ದ ಯೋಗೇಶ್​ ರಾಜ್​ನನ್ನು ಕೊನೆಗೂ ಬಂಧಿಸಿದ್ದಾರೆ.

ಉತ್ತರಪ್ರದೇಶದ ಖುರ್ಜಾ ಎಂಬಲ್ಲಿ ಯೋಗೇಶ್ ರಾಜ್ ನನ್ನು ಬಂಧಿಸಿದ್ದು, ಈತ ಬಜರಂಗದಳ ಕಾರ್ಯಕರ್ತ ಎಂದು ತಿಳಿದುಬಂದಿದೆ.

ಕಳೆದ ವರ್ಷ ಡಿ.3ರಂದು ಗಲಭೆ ನಡೆದಿತ್ತು. ಇನ್ಸ್​ಪೆಕ್ಟರ್​ ಜತೆ ಗಲಭೆಯಲ್ಲಿ ಸುಮಿತ್​ ಕುಮಾರ್​ ಎಂಬ ಯುವಕ ಮೃತಪಟ್ಟಿದ್ದ. ಹಲವರು ಗಾಯಗೊಂಡಿದ್ದರು. ಗೋ ಹತ್ಯೆ ಮಾಡಲಾಗುತ್ತಿದೆ ಎಂದು ಬುಲಂದ್​ಶಹರ್​ನಲ್ಲಿ ಗಲಭೆ ಎಬ್ಬಿಸಲು ಕಾರಣನಾಗಿದ್ದ ಯೋಗೇಶ್​ನನ್ನು ಬಂಧಿಸಲು ಪೊಲೀಸರು ಗಲಭೆ ನಡೆದ ದಿನದಿಂದಲೂ ಹುಡುಕಾಟ ನಡೆಸಿದ್ದರು.

ಘಟನೆ ಕುರಿತಂತೆ ದಾಖಲಾಗಿದ್ದ ಎಫ್​ಐಆರ್​ನಲ್ಲಿ 50 ರಿಂದ 60 ಅನಾಮಧೇಯ ವ್ಯಕ್ತಿಗಳ ಜತೆ 27 ಜನರ ಹೆಸರನ್ನು ನಮೂದಿಸಲಾಗಿತ್ತು. ಬಂಧಿತ ಯೋಗೇಶ್​ ರಾಜ್​ ಜತೆ ಬಿಜೆಪಿ ನಾಯಕರಾದ ಶಿಖರ್​ ಅಗರ್ವಾಲ್​, ವಿಎಚ್​ಪಿ ಕಾರ್ಯಕರ್ತ ಉಪೇಂದ್ರ ರಾಘವ್​ ಹೆಸರೂ ಪ್ರಮುಖ ಆರೋಪಿಗಳಾಗಿದ್ದು, ಇವರ ವಿರುದ್ಧ ಆರೋಪ ಪಟ್ಟಿಸಲ್ಲಿಸಲಾಗಿದೆ.

Bulandshahr, accused Yogesh Raj caught 30 days after cop’s death in violence

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ