ಬುಲಂದ್ಶಹರ್: ಬುಲಂದ್ಶಹರ್ ಗಲಭೆಯಲ್ಲಿ ಪೊಲೀಸ್ ಅಧಿಕಾರಿ ಸುಬೋಧ್ ಕುಮಾರ್ ಸಿಂಗ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಪ್ರಮುಖ ಆರೋಪಿಯಾಗಿದ್ದ ಯೋಗೇಶ್ ರಾಜ್ನನ್ನು ಕೊನೆಗೂ ಬಂಧಿಸಿದ್ದಾರೆ.
ಉತ್ತರಪ್ರದೇಶದ ಖುರ್ಜಾ ಎಂಬಲ್ಲಿ ಯೋಗೇಶ್ ರಾಜ್ ನನ್ನು ಬಂಧಿಸಿದ್ದು, ಈತ ಬಜರಂಗದಳ ಕಾರ್ಯಕರ್ತ ಎಂದು ತಿಳಿದುಬಂದಿದೆ.
ಕಳೆದ ವರ್ಷ ಡಿ.3ರಂದು ಗಲಭೆ ನಡೆದಿತ್ತು. ಇನ್ಸ್ಪೆಕ್ಟರ್ ಜತೆ ಗಲಭೆಯಲ್ಲಿ ಸುಮಿತ್ ಕುಮಾರ್ ಎಂಬ ಯುವಕ ಮೃತಪಟ್ಟಿದ್ದ. ಹಲವರು ಗಾಯಗೊಂಡಿದ್ದರು. ಗೋ ಹತ್ಯೆ ಮಾಡಲಾಗುತ್ತಿದೆ ಎಂದು ಬುಲಂದ್ಶಹರ್ನಲ್ಲಿ ಗಲಭೆ ಎಬ್ಬಿಸಲು ಕಾರಣನಾಗಿದ್ದ ಯೋಗೇಶ್ನನ್ನು ಬಂಧಿಸಲು ಪೊಲೀಸರು ಗಲಭೆ ನಡೆದ ದಿನದಿಂದಲೂ ಹುಡುಕಾಟ ನಡೆಸಿದ್ದರು.
ಘಟನೆ ಕುರಿತಂತೆ ದಾಖಲಾಗಿದ್ದ ಎಫ್ಐಆರ್ನಲ್ಲಿ 50 ರಿಂದ 60 ಅನಾಮಧೇಯ ವ್ಯಕ್ತಿಗಳ ಜತೆ 27 ಜನರ ಹೆಸರನ್ನು ನಮೂದಿಸಲಾಗಿತ್ತು. ಬಂಧಿತ ಯೋಗೇಶ್ ರಾಜ್ ಜತೆ ಬಿಜೆಪಿ ನಾಯಕರಾದ ಶಿಖರ್ ಅಗರ್ವಾಲ್, ವಿಎಚ್ಪಿ ಕಾರ್ಯಕರ್ತ ಉಪೇಂದ್ರ ರಾಘವ್ ಹೆಸರೂ ಪ್ರಮುಖ ಆರೋಪಿಗಳಾಗಿದ್ದು, ಇವರ ವಿರುದ್ಧ ಆರೋಪ ಪಟ್ಟಿಸಲ್ಲಿಸಲಾಗಿದೆ.
Bulandshahr, accused Yogesh Raj caught 30 days after cop’s death in violence