ಪಟನಾ: ನನಗೆ ರಸ್ತೆಯಲ್ಲಿ ಓಡಾಡಲು ಭಯವಾಗುತ್ತಿದೆ. ಯಾರು ಯಾರನ್ನು ಬೇಕಾದರೂ ಕೊಲ್ಲಬಹುದು” ಎಂದು ರಾಷ್ಟ್ರೀಯ ಜನತಾ ದಳ (ಆರ್ಜೆಡಿ) ಮುಖ್ಯಸ್ಥ ಲಾಲು ಪ್ರಸಾದ್ ಯಾದವ್ ಅವರ ಪುತ್ರ ತೇಜ್ ಪ್ರತಾಪ್ ಯಾದವ್ ತಮಗೆ ನೀಡಿರುವ ಭದ್ರತೆ ಹೆಚ್ಚಿಸುವಂತೆ ಸಿಎಂ ನಿತೀಶ್ ಕುಮಾರ್ ಅವರಿಗೆ ಮನವಿ ಮಾಡಿದ್ದಾರೆ.
ಈ ಕುರಿತು ಮಾತನಾಡಿದ ತೇಜ್ ಪ್ರತಾಪ್, ಬಿಹಾರದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿರುವುದನ್ನು ಉಲ್ಲೇಖಿಸಿದ ತೇಜ್, “ಯಾರು ಯಾರನ್ನಾದರೂ ಕೊಲ್ಲಬಹುದೆಂದು ನನಗೆ ಭಯವಾಗುತ್ತಿದೆ. ಪ್ರತಿನಿತ್ಯ ಕೊಲೆಗಳು ಜರುಗುತ್ತಿವೆ. ನನಗೆ ಒದಗಿಸಿರುವ ಭದ್ರತೆಯನ್ನು ಹೆಚ್ಚಿಸುವಂತೆ ಮುಖ್ಯಮಂತ್ರಿ ಅವರನ್ನು ವಿನಂತಿಸಿದ್ದೇನೆ ಎಂದಿದ್ದಾರೆ.
ಡಿ.30ರಂದು ಔರಂಗಾಬಾದ್ನಲ್ಲಿ ಉಗ್ರರು ವ್ಯಕ್ತಿಯೊಬ್ಬನನ್ನು ಕೊಂದು, ನಾಲ್ಕು ಬಸ್ಗಳನ್ನು ಸುಟ್ಟಿದ್ದರು. ಕೆಲವೊಮ್ಮೆ ಭದ್ರತೆಗೆ ಬಾಡಿಗಾರ್ಡ್ಸ್ಗಳೂ ಸಾಲುವುದಿಲ್ಲ ಎನಿಸುತ್ತದೆ ಎಂದರು.
“Anyone Can Kill Anybody”: Tej Pratap Yadav Says He Needs More Security