ಸಿಡ್ನಿ: ಆಸಿಸ್ ವಿರುದ್ಧ ಆರಂಭವಾಗಲಿರುವ ನಾಲ್ಕನೆ ಮತ್ತು ಅಂತಿಮ ಟೆಸ್ಟ್ ಪಂದ್ಯಕ್ಕೆ ಟೀಂ ಇಂಡಿಯಾವನ್ನ ಪ್ರಕಟಿಸಲಾಗಿದೆ. ಗಾಯದ ಸಮಸ್ಯೆ ನಡುವೆಯೂ ತಂಡದ ಕೇರಂ ಸ್ಪಿನ್ನರ್ ಆರ್.ಅಶ್ವಿನ್ ಅವರನ್ನ ಸೇರಿಸಲಾಗಿದೆ.
2-1 ಅಂತರದಿಂದ ಸರಣಿ ಮುನ್ನಡೆ ಪಡೆದಿರುವ ಟೀಂ ಇಂಡಿಯಾ ಐತಿಹಾಸಿಕ ಸರಣಿ ಮೇಲೆ ಕಣ್ಣಿಟ್ಟಿದೆ.
ಒಂದು ದಿನ ಮುನ್ನವೇ ಟೀಂ ಇಂಡಿಯಾವನ್ನ ಪ್ರಕಟಿಸಲಾಗಿದ್ದು ಗಾಯದ ಸಮಸ್ಯೆಯಿಂದ ಬಳಲುತ್ತಿರುವ ಆರ್.ಅಶ್ವಿನ್ ಅವರನ್ನ ತಂಡದಲ್ಲಿ ಸೇರಿಸಿಕೊಳ್ಳಲಾಗಿದೆ. ಆದರೆ ಅಶ್ವಿನ್ ಫಿಟ್ನೆಸ್ ಪರೀಕ್ಷೆಯಲ್ಲಿ ವಿಫಲವಾಗಿದ್ದು ಆಡುವ ಹನ್ನೊಮದರ ಬಳಗದಲ್ಲಿ ಆಡಿಸಬೇಕೊ ಬೇಡವೋ ಅನ್ನೋದರ ಬಗ್ಗೆ ಪಂದ್ಯಕ್ಕೂ ನಾಯಕ ಕೊಹ್ಲಿ ತೀರ್ಮಾನ ತೆಗೆದುಕೊಳ್ಳಲಿದ್ದಾರೆ.
ಇನ್ನು ತಂಡದ ವೇಗಿ ಇಶಾಂತ್ ಶರ್ಮಾ ಅವರನ್ನ ಕೊನೆಯ ಟೆಸ್ಟ್ ಪಂದ್ಯದಿಂದ ಕೈಬಿಡಲಾಗಿದೆ. ಆದರೆ ಇಶಾಂತ್ ಅವರನ್ನ ಯಾಕೆ ಕೈಬಿಡಲಾಗಿದೆ ಅನ್ನೋದರ ಬಗ್ಗೆ ಮಾಹಿತಿ ಲಭ್ಯವಾಗಿಲ್ಲ. ಇಶಾಂತ್ ಬದಲು ಉಮೇಶ್ ಯಾದವ್ ಆಡುವ ಸಾಧ್ಯತೆ ತುಂಬ ಇದೆ. ಆದರೆ ಉಮೇಶ್ ಯಾದವ್ ಪರ್ತ್ ಟೆಸ್ಟ್ ಪಂದ್ಯದಲ್ಲಿ ವಿಕೆಟ್ ಕೀಳುವಲ್ಲಿ ವಿಫಲರಾಗಿದ್ದರು.
ಇನ್ನು ಬ್ಯಾಟಿಂಗ್ ವಿಭಾಗದಲ್ಲಿ ರೋಹಿತ್ ಶರ್ಮಾ ಬದಲು ಹನುಮ ವಿಹಾರಿ ಆಡುವ ಸಾದ್ಯತೆ ಇದ್ದು ಆರಂಭಿಕರಾಗಿ ಕನ್ನಡಿಗರಾದ ಕೆ.ಎಲ್. ರಾಹುಲ್ ಮತ್ತು ಮಯಾಂಕ್ ಅಗರ್ವಾಲ್ ಕಣಕ್ಕಿಳಿಯಲಿದ್ದಾರೆ.
ಭಾರತ ತಂಡ: ವಿರಾಟ್ ಕೊಹ್ಲಿ (ನಾಯಕ), ಅಜಿಂಕ್ಯ ರಹಾನೆ(ಉಪನಾಯಕ),ಕೆ.ಎಲ್.ರಾಹುಲ್, ಮಯಾಂಕ್ ಅಗರ್ವಾಲ್, ಚೇತೇಶ್ವರ ಪೂಜಾರ, ಹನುಮ ವಿಹಾರಿ, ರಿಷಭ್ ಪಂತ್,ರವೀಂದ್ರ ಜಡೇಜಾ, ಕುಲದೀಪ್ ಯಾದವ್, ಮೊಹ್ಮದ್ ಶಮಿ, ಜಸ್ಪ್ರೀತ್ ಬುಮ್ರಾ, ಮತ್ತು ಉಮೇಶ್ ಯಾದವ್.