ನವದೆಹಲಿ: ಹೊಗೆನಕಲ್ ಬಳಿ ಪರ್ಯಾಯ ಡ್ಯಾಂ ನಿರ್ಮಾಣಕ್ಕೆ ಸಂಬಂಧಪಟ್ಟಂತೆ ಕಾರ್ಯಸಾಧು ವರದಿ ನೀಡಲು ಕೇಂದ್ರ ಕರ್ನಾಟಕಕ್ಕೆ ಕೋರಿರುವ ಹಿನ್ನೆಲೆಯಲ್ಲಿ ತಮಿಳುನಾಡು ಸರ್ಕಾರ ವಿರೋಧಿಸಿದೆ.
ಇದೇ ವಿವಾದಕ್ಕೆ ಸಂಬಂಧಿಸಿದಂತೆ ಇಂದು ಎಐಎಡಿಎಂಕೆ ಸದಸ್ಯರು ಸಂಸತ್ ಭವನದ ಮುಂದಿರುವ ಮಹಾತ್ಮ ಗಾಂಧಿ ಪ್ರತಿಮೆ ಎದುರು ಪ್ರತಿಭಟನೆ ನಡೆಸಿದರು. ಕೇಂದ್ರ ಜಲಮಂಡಳಿ ಹಾಗೂ ಜಲಸಂಪನ್ಮೂಲ ಇಲಾಖೆ ನಿರ್ಧಾರವನ್ನ ಎಐಎಡಿಎಂಕೆ ವಿರೋಧಿಸಿದೆ.
ಈ ನಡುವೆ ರಾಜ್ಯಸಭೆಯಲ್ಲಿ ಸದನದ ಭಾವಿಗೆ ಇಳಿದು ಪ್ರತಿಭಟನೆ ನಡೆಸಿದರು.