ಬೆಂಗಳೂರು,ಡಿ.28- ಹೊಸವರ್ಷ ಇನ್ನೇನು ಬರುತ್ತಿದ್ದು, ಪ್ರಸಕ್ತ ವರ್ಷ ಮುಗಿಯುತ್ತಿದ್ದು, ನಾವೆಲ್ಲರೂ ಹೊಸ ಆರಂಭಕ್ಕಾಗಿ ಸಿದ್ಧರಾಗುತ್ತಿದ್ದೇವೆ. ನಮ್ಮ ಸ್ವಂತ ಸೌಖ್ಯತೆ ಮತ್ತು ಪರಿಸ್ಥಿತಿ ಉತ್ತಮಗೊಳ್ಳುವುದಕ್ಕಾಗಿಯೇ ನಮ್ಮ ವೈಯಕ್ತಿಕ ಹಣಕಾಸು ಯೋಜನೆ ಕೈಗೊಳ್ಳಬೇಕು ಎಂಬುದನ್ನು ನಾವು ತಿಳಿದುಕೊಳ್ಳುವ ಅಗತ್ಯವಿದೆ.
ನಮ್ಮ ಹಣದ ಗುರಿಗಳಿಗೆ ನಮ್ಮನ್ನು ಹತ್ತಿರವಾಗಿಸಲು ನೆರವಾಗಬಹುದಾದ ದೃಢವಾದ ಹಣಕಾಸು ನಿರ್ಣಯಗಳನ್ನು ಕೈಗೊಳ್ಳುವುದರೊಂದಿಗೆ ನಾವು ಸರಳವಾಗಿ ಆರಂಭಿಸಬಹುದು.
ಆರೋಗ್ಯಕರ ಹಣಕಾಸಿನ ಜೀವನವನ್ನು ನಡೆಸಲು ಅನುಸರಿಸಬೇಕಾದ 10 ನೂತನ ವರ್ಷದ ನಿರ್ಣಯಗಳನ್ನು ಇಲ್ಲಿ ನಿಮಗಾಗಿ ಅವಿವಾ ಲೈಫ್ ಇನ್ಷುರೆನ್ಸ್ನ ಮುಖ್ಯ ಗ್ರಾಹಕ, ಮಾರುಕಟ್ಟೆ ಮತ್ತು ಡಿಜಿಟಲ್ ಅಧಿಕಾರಿಯಾದ ಅಂಜಲಿ ಮಲ್ಹೋತ್ರಾ ಕೆಲವೊಂದು ಸೂಚನೆಗಳನು ನೀಡಿದ್ದಾರೆ.
ನಿಮ್ಮ ಹಣಕಾಸು ವಿಷಯವನ್ನು ವಿಮರ್ಶಿಸಿ ಮತ್ತು ನಿಮ್ಮ ವೈಯಕ್ತಿಕ ಗುರಿಗಳನ್ನು ನಿರೂಪಿಸಿಕೊಳ್ಳಿ, ಆಯವ್ಯಯ ಯೋಜನೆ ಆರಂಭಿಸಿ, ಹಣಕಾಸು ನಿರ್ಣಯಗಳನ್ನು ಕೈಗೊಳ್ಳುವಲ್ಲಿ ಕುಟುಂಬದವರನ್ನು ಸೇರಿಸಿಕೊಳ್ಳಿ, ಹಣಕಾಸು ನಿರ್ಣಯಗಳನ್ನು ಕೈಗೊಳ್ಳುವಲ್ಲಿ ಕುಟುಂಬದವರನ್ನು ಸೇರಿಸಿಕೊಳ್ಳಿ , ನಿಮ್ಮ ಆರೋಗ್ಯಕ್ಕಾಗಿ ಉಳಿತಾಯ ಆರಂಭಿಸಿ, ನಿಮ್ಮ ಮಗುವಿನ ಭವಿಷ್ಯಕ್ಕೆ ಯೋಜನೆ ಆರಂಭಿಸಿ, ನಿಮ್ಮ ಪ್ರೀತಿಪಾತ್ರರ ಭವಿಷ್ಯವನ್ನು ಸುಭದ್ರವಾಗಿಸಿ,ನಿಮ್ಮ ಸಾಲಗಳನ್ನು ತೀರಿಸಿ, ಹೂಡಿಕೆ ಮುನ್ನ ಉಳಿತಾಯ ಆರಂಭಿಸಿ,ನಿಮ್ಮ ನಿವೃತ್ತಿಗಾಗಿ ಉಳಿತಾಯ ಆರಂಭಿಸಿ, ತುರ್ತುಸ್ಥಿತಿ ನಿಧಿ ನಿರ್ಮಿಸಿಕೊಳ್ಳಿ ಎಂದು ಸಲಹೆ ನೀಡಿದ್ದಾರೆ.