ಜಾರಕಿಹೊಳಿ ಸಹೋದರರ ಅಪ್ತ ಶಾಸಕ ಮಹಾಂತೇಶ್‍ ಕೌಜಲಗಿ ಅವರಿಂದ ಮಾಜಿ ಸಿ.ಎಂ.ಸಿದ್ದರಾಮಯ್ಯ ಭೇಟಿ

ಬೆಳಗಾವಿ, ಡಿ.28- ಜಾರಕಿಹೊಳಿ ಸಹೋದರರ ಆಪ್ತ ಶಾಸಕ ಎಂದು ಗುರುತಿಸಿಕೊಂಡಿರುವ ಮಹಾಂತೇಶ್‍ ಕೌಜಲಗಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನುಇಂದು ಭೇಟಿಯಾಗಲಿದ್ದು, ತೀವ್ರ ಕುತೂಹಲಕ್ಕೆ ಕಾರಣವಾಗಿದೆ.

ಸಿದ್ದರಾಮಯ್ಯ ಅವರುತಮ್ಮ ಸ್ವಕ್ಷೇತ್ರ ಬದಾಮಿಗೆ ವಿವಿಧ ಕಾರ್ಯಕ್ರಮಗಳ ನಿಮಿತ್ತಇಂದುಇಲ್ಲಿಗೆ ಆಗಮಿಸಿದ್ದು, ಎರಡು ದಿನ ನಗರದ ಕೃಷ್ಣ ಹೆರಿಟೇಜ್‍ ರೆಸಾರ್ಟ್‍ನಲ್ಲಿ ವಾಸ್ತವ್ಯ ಹೂಡಲಿದ್ದಾರೆ.

ಇಲ್ಲಿಗೆ ಶಾಸಕ ಮಹಾಂತೇಶ್‍ಅವರನ್ನುಆಹ್ವಾನಿಸಲಾಗಿದ್ದು, ಹಾಗೆಯೇ ಪ್ರಸ್ತುತ ಬೆಳಗಾವಿ ಜಿಲ್ಲೆಯ ರಾಜಕಾರಣದ ಕುರಿತು ಚರ್ಚೆ ನಡೆಸಲಿದ್ದಾರೆ ಎಂದು ತಿಳಿದು ಬಂದಿದೆ.

ಸಚಿವ ಸತೀಶ್ ಜಾರಕಿಹೊಳಿ ಅವರಜತೆ ಗುರುತಿಸಿಕೊಂಡಿರುವ ಕೌಜಲಗಿ ಅವರು ರಮೇಶ್ ಜಾರಕಿಹೊಳಿ ನಡೆ ಬಗ್ಗೆ ಸಿದ್ದರಾಮಯ್ಯನವರೊಂದಿಗೆ ಚರ್ಚೆ ನಡೆಸಲಿದ್ದಾರೆ ಎಂದು ಹೇಳಲಾಗಿದೆ.

ಮೈತ್ರಿ ಸರ್ಕಾರದ ಎರಡನೇ ಸಂಪುಟ ವಿಸ್ತರಣೆಯಲ್ಲಿತಮ್ಮಆಪ್ತರಿಗೆ ಸಚಿವ ಸ್ಥಾನ ಕೊಡಿಸುವಲ್ಲಿ ಸಿದ್ದರಾಮಯ್ಯನವರು ಯಶಸ್ವಿಯಾಗಿದ್ದರೂ ಆದರೆ, ಪೌರಾಡಳಿತ ಸಚಿವರಾಗಿದ್ದರಮೇಶ್ ಜಾರಕಿಹೊಳಿ ಅವರನ್ನು ಸಚಿವ ಸ್ಥಾನದಿಂದ ಕೆಳಗಿಸಲಾಗಿತ್ತು.

ಇದರಿಂದ ಬೇಸರಗೊಂಡಿದ್ದ ಜಾರಕಿಹೊಳಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯರೊಂದಿಗೆ ಮುನಿಸಿಕೊಂಡಿದ್ದಾರೆ ಎನ್ನಲಾಗಿದೆ.ರಮೇಶ್ ಜಾರಕಿಹೊಳಿ ಅವರು ಆಪರೇಷನ್‍ ಕಮಲದೊಂದಿಗೆ ಕೈ ಜೋಡಿಸಲಿದ್ದಾರೆ ಎಂಬ ಮಾತುಗಳು ಕೇಳಿ ಬಂದ ಹಿನ್ನೆಲೆಯಲ್ಲಿಅವರ ನಡೆ ಬಗ್ಗೆ ಸಿದ್ದರಾಮಯ್ಯ ನಿಗಾ ಇರಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಬೈಲಹೊಂಗಲದ ಶಾಸಕರ ಭೇಟಿತೀವ್ರಕುತೂಹಲ ಮೂಡಿಸಿದೆ.

ರೆಸಾರ್ಟ್‍ ಆವರಣಕ್ಕೆ ಜನಪ್ರತಿನಿಧಿಗಳನ್ನು ಹೊರತು ಪಡಿಸಿ ಬೇರೆಯವರನ್ನು ಬಿಡದಂತೆ ಕಟ್ಟಪ್ಪಣೆ ನೀಡಲಾಗಿದ್ದು, ಹೀಗಾಗಿ ಸಿದ್ದರಾಮಯ್ಯರನ್ನು ಭೇಟಿಯಾಗಲು ಬಂದಿದ್ದ ನೂರಾರು ಜನರನ್ನು ಗೇಟ್ ಬಳಿಯೇ ತಡೆ ಹಿಡಿಯಲಾಗಿದೆ.
ಆಪ್ತರೊಂದಿಗೆ ಚರ್ಚೆ ನಡೆಸಿದ ಬಳಿಕ ರಮೇಶ್ ಜಾರಕಿಹೊಳಿಯನ್ನು ಮತ್ತೊಮ್ಮೆ ಮಾತುಕತೆಗೆ ಕರೆಯಲು ಸಿದ್ದರಾಮಯ್ಯ ಇಚ್ಛಿಸಿದ್ದಾರೆ ಎನ್ನಲಾಗಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ