ನವದೆಹಲಿ: ಅಯೋಧ್ಯೆಯಲ್ಲಿ ಶ್ರೀರಾಮನಿಗಾಗಿ ಪ್ರಧಾನಮಂತ್ರಿ ವಸತಿ ಯೋಜನೆಯಡಿ ಮನೆ ನಿರ್ಮಿಸಿಕೊಡಬೇಕು ಎಂದು ಬಿಜೆಪಿ ಸಂಸದರೊಬ್ಬರು ಮನವಿ ಮಾಡಿದ್ದಾರೆ.
ಉತ್ತರ ಪ್ರದೇಶ ಘೋಸಿ ಚುನಾವಣಾ ಕ್ಷೇತ್ರದ ಸಂಸದರಾಗಿರುವ ಹರಿನಾರಾಯಣ್ ರಾಜ್ಭಹಾರ್, ಪ್ರಧಾನಮಂತ್ರಿ ವಸತಿ ಯೋಜನೆಯಡಿ ಶ್ರೀರಾಮಲಲ್ಲಾಗೆ ಮನೆ ನಿರ್ಮಿಸುವಂತೆ ಬೇಡಿಕೆ ಇಟ್ಟಿದ್ದಾರೆ
ತಲೆ ಮೇಲೆ ಸೂರು ಇಲ್ಲದೆ ಶ್ರೀರಾಮ ವಿಪರೀತ ಚಳಿ, ಸುಡುವ ಬೇಸಿಗೆ ಮತ್ತು ಸುರಿವ ಮಳೆಗೆ ನಿಂತಿದ್ದಾರೆ. ಸೂರು ಇಲ್ಲದವರಿಗೆ ಸರ್ಕಾರ ವಸತಿ ನೀಡುತ್ತದೆ. ಹಾಗಾಗಿ ಪ್ರಧಾನಮಂತ್ರಿ ವಸತಿ ಯೋಜನೆಯಡಿಯಲ್ಲಿ ಶ್ರೀರಾಮನಿಗೊಂದು ಸೂರು ನಿರ್ಮಿಸಬೇಕೆಂದು ಹರಿನಾರಾಯಣ್ ಜಿಲ್ಲಾಡಳಿತದ ಅಧಿಕಾರಿಗಳಿಗೆ ಪತ್ರ ಬರೆದಿದ್ದಾರೆ.
ಲೋಕಸಭಾ ಚುನಾವಣೆ ಸಮೀಪಿಸುತ್ತಿದ್ದಂತೆ ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಿಸಬೇಕೆಂಬ ಒತ್ತಡ ಹೆಚ್ಚಿದ ಹಿನ್ನಲೆಯಲ್ಲಿ ಬಿಜೆಪಿ ಸಂಸದರ ಈ ವಿಚಿತ್ರ ರೀತಿಯ ಬೇಡಿಕೆ ಈಗ ಗಮನ ಸೆಳೆದಿದೆ.
A house for Ram,under PM housing scheme,BJP MP Hari Narayan Rajbhar demands