
ಬೆಂಗಳೂರು: ಚಿರಂಜೀವಿ ಸರ್ಜಾ ಮತ್ತು ಅದಿತಿ ಪ್ರಭುದೇವ ನಟನೆಯ ಸಿಂಗ ಚಿತ್ರದ ರೋಮ್ಯಾಂಟಿಕ್ ಸನ್ನಿವೇಶಗಳು ಮೈಸೂರಿನಲ್ಲಿ ಚಿತ್ರೀಕರಿಸಲಾಗುತ್ತಿದೆ.
ಮೈಸೂರಿನಲ್ಲಿ 30 ದಿನಗಳ ಕಾಲ ಚಿತ್ರೀಕರಣಕ್ಕೆ ಶೆಡ್ಯೂಲ್ ಫಿಕ್ಸ್ ಆಗಿದ್ದು ಈಗಾಗಲೇ 15 ದಿನಗಳ ಚಿತ್ರೀಕರಣ ಮುಗಿದಿದೆ.
ವಿಜಯ್ ಕಿರಣ್ ಸಿನಿಮಾ ನಿರ್ದೇಶನ ಮಾಡುತ್ತಿದ್ದು ಉದಯ್ ಮೆಹ್ತಾ ಸಿನಿಮಾ ನಿರ್ಮಾಪಕರಾಗಿದ್ದಾರೆ, ರಾಮ್ ಲೀಲಾ ನಂತರ, ನಿರ್ದೇಶಕರು ಮತ್ತು ನಟ ಚಿರಂಜೀವಿ ಮತ್ತೆ ಒಂದಾಗಿದ್ದಾರೆ.