17ನೇ ಶತಕ ಪೂರೈಸಿದ ಚೇತೇಶ್ವರ ಪೂಜಾರ

ಮೆಲ್ಬೋರ್ನ್ ; ಟೀಂ ಇಂಡಿಯಾ ಟೆಸ್ಟ್ ಸ್ಪೆಶಲಿಸ್ಟ್ ಚೇತೇಶ್ವರ ಪೂಜಾರ ಆಕರ್ಷಕ ಶತಕ ಸಿಡಿಸಿ ಮಿಂಚಿದ್ದಾರೆ. ಈ ಶತಕದೊಂದಿಗೆ ಸೌರಾಷ್ಟ್ರ ಸ್ಟಾರ್ ಟೆಸ್ಟ್ ಕ್ರಿಕೆಟ್ನಲ್ಲಿ 17ನೇ ಶತಕ ಪೂರೈಸಿದ ಸಾಧನೆ ಮಾಡಿದರು.

ಬಾಕ್ಸಿಂಗ್ಸ್ ಟೆಸ್ಟ್ ಪಂದ್ಯದ ಎರಡನೇ ದಿನದಾಟದ ಪಂದ್ಯದಲ್ಲಿ ನಾಯಕ ಕೊಹ್ಲಿ ಜೊತೆ ಬ್ಯಾಟಿಂಗ್ ಮುಂದುವರೆಸಿದ ಚೇತೇಶ್ವರ ಪೂಜಾರ ಆಇಸ್ ಬೌಲರ್ಗಳ ಬೆವರಿಳಿಸಿ ಮೊದಲ ಅವಧಿಯಲ್ಲಿ ಶತಕ ಬಾರಿಸಿದರು. ಪೂಜಾರ 280ಎಸೆತ ಎದುರಿಸಿ ಶತಕ ಸಿಡಿಸಿದ್ರು. ನಂತರ 105 ರನ್ಗಳಿಸಿದ್ದಾಗ ಪ್ಯಾಟ್ ಕಮಿನ್ಸ್ ಎಸೆತದಲ್ಲಿ ಬೌಲ್ಡ್ ಆದ್ರು. ಮೊದಲ ದಿನದಾಟದ ಪಂದ್ಯದಲ್ಲಿ ನಿಧಾನಗತಿಯಲ್ಲಿ ಆಡಿ ಅರ್ಧ ಶತಕ ಪೂರೈಸಿದರು .

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ