ಬಾಕ್ಸಿಂಗ್ ಡೇ: ಗೌರವ ಮೊತ್ತ ಪೇರಿಸಿದ ಟೀಂ ಇಂಡಿಯಾ

ಆರಂಭಿಕ ಬ್ಯಾಟ್ಸ್‍ಮನ್ ಕನ್ನಡಿಗ ಮಯಾಂಕ್ ಅಗರ್‍ವಾಲ್ ಮತ್ತು ಟೆಸ್ಟ್ ಸ್ಪೆಶಲಿಸ್ಟ್ ಚೇತೇಶ್ವರ ಪೂಜಾರ ಅವರ ಆಕರ್ಷಕ ಅರ್ಧ ಶತಕದ ನೆರವಿನಿಂದ ಟೀಂ ಇಂಡಿಯಾ ಆತಿಥೇಯ ಆಸ್ಟ್ರೇಲಿಯಾ ವಿರುದ್ದದ ಬಾಕ್ಸಿಂಗ್ ಡೇ ಕದನದ ಮೊದಲದಿನದಾಟದ ಪಂದ್ಯದಲ್ಲಿ ಗೌರವ ಮೊತ್ತ ಪೇರಿಸಿದೆ.

ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ಭಾರತ ಆರಂಭಿಕ ಬ್ಯಾಟ್ಸ್‍ಮನ್ ಹನುಮ ವಿಹಾರಿ ಅವರ ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿ ಸಿಲುಕಿತು. ಆದರೆ ಕನ್ನಡಿಗ ಮಯಾಂಕ್ ಅಗರ್‍ವಾಲ್ ಚೇತೇಶ್ವರ ಪೂಜಾರ ಜೊತೆಗೂಡಿ ನಿಧಾನಗತಿಯ ಆಟವಾಡಿ ತಂಡಕ್ಕೆ ಉತ್ತಮ ಆರಂಭ ನೀಡಿದ್ರು. ಆಸಿಸ್ ಬೌಲರ್‍ಗಳ ಬೆವರಿಳಿಸಿದ ಮಯಾಂಕ್ 95 ಎಸೆತದಲ್ಲಿ ಅರ್ಧಶತಕ ಪೂರೈಸಿ ಚೊಚ್ಚಲ ಟೆಸ್ಟ್ ಪಂದ್ಯದಲ್ಲಿ ಮಿಂಚಿದು.್ರ ಆದರೆ 76 ರನ್‍ಗಳಿಸಿ ಶತಕದತ್ತ ಮುನ್ನುಗುತ್ತಿದ್ದ ಮಯಾಂಕ್ ವೇಗಿ ಪ್ಯಾಟ್ ಕಮಿನ್ಸ್ ಎಸೆತದಲ್ಲಿ ವಿಕೆಟ್ ಕೀಪರ್ ಪೇನ್‍ಗೆ ಕ್ಯಾಚ್ ನೀಡಿ ಹೊರ ನಡೆದ್ರು. ನಂತರ ನಾಯಕ ಚೇತೇಶ್ವರ ಪೂಜಾರ ಜೊತೆಗೂಡಿದ ನಾಯಕ ವಿರಾಟ್ ಕೊಹ್ಲಿ ನಿಧಾನಗತಿಯ ಆಟಕ್ಕೆ ಮೊರೆ ಹೋದ್ರು. ದಿನವೀಡಿ ಆಸಿಸ್ ಬೌಲರ್‍ಗಳನ್ನ ಕಾಡಿ ಬೆವರಿಳಿಸಿದ್ರು. ಈ ವೇಳೆ ಪೂಜಾರ ಅರ್ಧಶತಕ ಗಳಿಸಿ ಸಂಭ್ರಮಿಸಿದ್ರು. ದಿನದಾಟದ ಅಂತ್ಯಕ್ಕೆ ಚೇತೇಶ್ವರ ಪೂಜಾರ ಅಜೇಯ 68 ಮತ್ತು ಕ್ಯಾಪ್ಟನ್ ಕೊಹ್ಲಿ ಅಜೇಯ 47 ರನ್‍ಗಳಿಸಿ ಎರಡನೇ ದಿನಕ್ಕೆ ಕ್ರೀಸ್ ಕಾಯ್ದಕೊಂಡಿದ್ದಾರೆ. ಅಸಿಸ್ ಪರ ಪ್ಯಾಟ್ ಕಮಿನ್ಸ್ 2 ವಿಕೆಟ್ ಪಡೆದಿದ್ದಾರೆ. ಟೀಂ ಇಂಡಿಯಾ 2 ವಿಕೆಟ್ ನಷ್ಟಕ್ಕೆ 215 ರನ್ ಗಳಿಸಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ