ಸಿಸಿಬಿ ಪೊಲೀಸರಿಂದ ಜೂಜಾಡುತ್ತಿದ್ದ 32 ಮಂದಿಯ ಬಂಧನ

ಬೆಂಗಳೂರು, ಡಿ.25-ಶೆಡ್‍ವೊಂದರಲ್ಲಿ ಹಣವನ್ನು ಪಣವಾಗಿ ಕಟ್ಟಿಕೊಂಡು ಜೂಜಾಡುತ್ತಿದ್ದ 32 ಮಂದಿಯನ್ನು ಸಿಸಿಬಿ ಪೊಲೀಸರು ಬಂಧಿಸಿ 3.64 ಲಕ್ಷ ರೂ. ವಶಪಡಿಸಿಕೊಂಡಿದ್ದಾರೆ.

ಸುದ್ದ್ದುಗುಂಟೆಪಾಳ್ಯ ವ್ಯಾಪ್ತಿಯ ತಾವರೆಕೆರೆ, ಬಿಟಿಎಂ 1ನೇ ಹಂತದ, 5ನೇ ಮಹಡಿ ಶೆಡ್‍ವೊಂದರಲ್ಲಿ ಗುಂಪು ಕಟ್ಟಿಕೊಂಡು ಜೂಜಾಡುತ್ತಿದ್ದ ಬಗ್ಗೆ ಪೊಲೀಸರಿಗೆ ಮಾಹಿತಿ ಲಭಿಸಿದೆ.

ತಕ್ಷಣ ಕಾರ್ಯಪ್ರವೃತ್ತರಾದ ಪೊಲೀಸರು ಶೆಡ್ ಮೇಲೆ ದಾಳಿ ಮಾಡಿ 34 ಮಂದಿಯನ್ನು ಬಂಧಿಸಿ ಪಣಕ್ಕಿಟ್ಟಿದ್ದ ಹಣವನ್ನು ವಶಪಡಿಸಿಕೊಂಡು ಆರೋಪಿಗಳ ವಿರುದ್ಧ ಸುದ್ದುಗುಂಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ