ಲಖನೌ: ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣ ಬಿಜೆಪಿಯಿಂದ ಮಾತ್ರ ಸಾಧ್ಯ ಹೊರತು ಬೇರೆಯಾರಿಂದಲೂ ರಾಮ ಮಂದಿರ ನಿರ್ಮಿಸಲಾರರು ಎಂದು ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ತಿಳಿಸಿದ್ದಾರೆ.
ಬಿಜೆಪಿ ಮತ್ತು ಎಬಿವಿಪಿ ಕಾರ್ಯಕರ್ತರನ್ನುದ್ದೇಶಿಸಿ ಮಾತನಾಡಿದ ಅವರು, ರಾಮ ಮಂದಿರ ನಿರ್ಮಾಣ ನಮ್ಮಿಂದ ಮಾತ್ರ ಸಾಧ್ಯ. ಬೇರೆ ಯಾರು ನಿರ್ಮಿಸಲಾರರು. ಯಾರು ರಾಮ ಮಂದಿರ ನಿರ್ಮಾಣ ಮಾಡುತ್ತಾರೋ ಅವರಿಗೆ ಜನ ಮತ ಹಾಕಲಿದ್ದಾರೆ ಎಂದು ತಿಳಿಸಿದ್ದಾರೆ.
ಇದೇ ವೇಳೆ ಕೆಲವರು ಜನಿವಾರ ಪ್ರದರ್ಶಿಸುತ್ತ, ಗೋತ್ರದ ಬಗ್ಗೆ ಹೇಳಿಕೊಳ್ಳುತ್ತ ಜನರ ದಾರಿ ತಪ್ಪಿಸುತ್ತಿದ್ದಾರೆ ಎಂದಿದ್ದಾರೆ ಎಂದು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ವಿರುದ್ಧ ವಾಗ್ದಾಳಿ ನಡೆಸಿದರು.
ಇದೇ ವೇಳೆ ಅಲಹಾಬಾದ್ನ ಸಂಗಮ ತೀರದಲ್ಲಿರುವ ಅಕ್ಷಯ್ ವಟ್ ಮತ್ತು ಸರಸ್ವತಿ ಕೂಪ್ ಎಂಬ ಧಾರ್ಮಿಕ ಸ್ಥಳಗಳನ್ನು ಭಕ್ತರಿಗೆ ತೆರೆವಾಗಿಸಲಾಗಿದೆ ಎಂದು ಯೋಗಿ ಘೋಷಿಸಿದ್ದಾರೆ.
ಸುಮಾರು 400 ವರ್ಷಗಳ ಹಿಂದೆ ಮುಘಲ್ ಆಡಳಿತದ ಸಂದರ್ಭ ಈ ಎರಡು ಪ್ರದೇಶಗಳ ಪ್ರವೇಶಕ್ಕೆ ಅವಕಾಶವಿರಲಿಲ್ಲ. ಮುಘಲ್ ಕೋಟೆಯ ಒಳಗೆ ಇದ್ದುದರಿಂದ ನಿಷಿಧಿಸಲಾಗಿತ್ತು. ಕುಂಭ ಮೇಳ ಸಂದರ್ಭದಲ್ಲಿ ಮಾತ್ರವಲ್ಲ ಎಲ್ಲಾ ದಿನಗಳಲ್ಲು ಭಕ್ತರಿಗೆ ಭೇಟಿ ನೀಡುವ ಅವಕಾಶವಿದೆ. ಮುಂದಿನ ವರ್ಷದ ಮಾರ್ಚ್ ತಿಂಗಳಿನಿಂದ ಪ್ರತಿದಿನ ಭಕ್ತರು ಭೇಟಿ ನೀಡಬಹುದು. ಎರಡೂ ಸ್ಥಳಗಳಲ್ಲಿ ರಿಷಿ ಭರದ್ವಾಜ್ ಮತ್ತು ಸರಸ್ವತಿ ಪ್ರತಿಮೆ ನಿರ್ಮಿಸಲಾಗುವುದು ಎಂದು ಯೋಗಿ ಆದಿತ್ಯನಾಥ್ ತಿಳಿಸಿದ್ದಾರೆ.
Uttar Pradesh, CM Yogi Adityanath,Ram Mandir will be built by us