
ಮೆಲ್ಬೋರ್ನ್: ಟೀಂ ಇಂಡಿಯಾದ ಆಲ್‍ರೌಂಡರ್ ಹಾರ್ದಿಕ್ ಪಾಂಡ್ಯ ತಂಡದ ಆಟಗಾರರೊಂದಿಗೆ ಸೆಲ್ಪೀ ತೆಗೆಸಿಕೊಳ್ಳುವ ಮೂಲಕ ಅಸಿಸ್ ವಿರುದ್ಧ ಮೂರನೆ ಟೆಸ್ಟ್ ಪಂದ್ಯದಲ್ಲಿ ಅಡಲು ಫಿಟ್ ಆಗಿರುವುದಾಗಿ ಘೋಷಿಸಿದ್ದಾರೆ.
ಮೆಲ್ಬೋರ್ನ್ ನಲ್ಲಿ ಕಾಂಗರೂಗಳ ವಿರುದ್ಧ ನಡೆಯಲಿರುವ ಮೂರನೆ ಟೆಸ್ಟ್ ಪಂದ್ಯದಲ್ಲಿ ಹಾರ್ದಿಕ್ ಪಾಂಡ್ಯ ಹನುಮ ವಿಹಾರಿ ಬದಲು ಆಡೋದು ಖಚಿತವಾಗಿದೆ. ಈ ಆಲ್‍ರೌಂಡರ್ ಆರನೇ ಕ್ರಮಾಂಕದಲ್ಲಿ ಕಣಕ್ಕಿಳಿಯಲಿದ್ದು ಗಾಯದ ಸಮಸ್ಯೆಯಿಂದ ಕಳೆದ ಸೆಪ್ಟಂಬರ್‍ನಿಂದ ಟೀಂ ಇಂಡಿಯಾ ಪರ ಆಡಿಲ್ಲ.
ಈ ಕಾರಣಕ್ಕಾಗಿ ಮೊದಲ ಮತ್ತು ಎರಡನೆ ಟೆಸ್ಟ್ ಪಂದ್ಯ ಆಡಿರಲ್ಲಿಲ್ಲ. ಇದೀಗ ತಂಡವನ್ನ ಸೇರಿರುವ ಹಾರ್ದಿಕ್ ಪಾಂಡ್ಯ ಅಭ್ಯಾಸದ ವೇಳೆ ತಂಡದ ಎಲ್ಲ ಆಟಗಾರರ ಜೊತೆ ಸೆಲ್ಫಿ ತೆಗೆಸಿಕೊಂಡು ಇದು ಅತ್ಯುತ್ತಮ ಸೆಲ್ಪಿ ಎಂದು ಹೇಳಿಕೊಂಡಿದ್ದಾರೆ.