ಟೀಂ ಇಂಡಿಯಾದ ಆಫ್ ಸ್ಪಿನ್ನರ್ ಆರ್.ಅಶ್ವಿನ್ ಮೆಲ್ಬೋರ್ನ್‍ನಲ್ಲಿ ನಡೆಯಲಿರುವ ಮೂರನೆ ಟೆಸ್ಟ್ ಪಂದ್ಯದಲ್ಲಿ ಆಡುವುದು ಇನ್ನು ಅನುಮಾನದಿಂದ ಕೂಡಿದೆ. ಗಾಯದ ಸಮಸ್ಯೆಯಿಂದ ಬಳುತ್ತಿರುವ ಈ ಕೇರಂ ಸ್ಪಿನ್ನರ್ ಮೂರನೆ ಟೆಸ್ಟ್ ಗೂ ಮುನ್ನ ಫಿಟ್ನೆಸ್ ಪರೀಕ್ಷೆಗೆ ಒಳಪಡಲಿದ್ದಾರೆ.
ತಂಡದ ಆಲ್‍ರೌಂಡರ್ ರವೀಂದ್ರ ಜಡೇಜಾ ಗಾಯದ ಸಮಸ್ಯೆಯಿಂದ ಬಳಲುತ್ತಿರೋದ್ರಿಂದ ತಂಡದ ಆಫ್ ಸ್ಪಿನ್ನರ್ ಆರ್.ಅಶ್ವಿನ್ ಇನ್ನು ಚೇತರಿಸಿಕೊಳ್ಳದೇ ಇರೋದು ತಂಡಕ್ಕೆ ಗಾಯದ ಮೇಲೆ ಬರೆ ಎಳೆದಂತಾಗಿದೆ. ಗಾಯದ ಸಮಸ್ಯೆ ಹಿನ್ನಲೆಯಲ್ಲಿ ಅಶ್ವಿನ್ ಪರ್ತ್ ಟೆಸ್ಟ್ ಪಂದ್ಯದಿಂದ ಹೊರಗುಳಿದಿದ್ದರು. ಆತಿಥೆಯ ಆಸಿಸ್ ವಿರುದ್ಧ ಅಡಿಲೇಡ್‍ನಲ್ಲಿ ನಡೆದ ಟೆಸ್ಟ್ ಪಂದ್ಯದ ಎರಡು ಇನ್ನಿಂಗ್ಸ್‍ಗಳಿಂದ ಒಟ್ಟು 6 ವಿಕೆಟ್ ಪಡೆದು ಮಿಂಚಿ ತಂಡದ ಗೆಲುವಿನ ಪ್ರಮುಖ ಪಾತ್ರವಹಿಸಿದ್ರು. ಇದೀಗ ತಂಡದ ಸ್ಪಿನ್ ವಿಭಾಗವನ್ನ ಯಾರು ನಿರ್ವಹಿಸುತ್ತಾರೆ ಎಂಬ ಪ್ರಶ್ನೆ ನಾಯಕ ಕೊಹ್ಲಿಯನ್ನ ಕಾಡ್ತಿದೆ.