ಮೆಲ್ಬೋರ್ನ್: ಟೀಂ ಇಂಡಿಯಾ ಮತ್ತು ಆಸ್ಟ್ರೇಲಿಯಾ ನಡುವಿನ ಮೂರನೇ ಟೆಸ್ಟ್ಗೆ ಇನ್ನು ಮೂರು ದಿನ ಬಾಕಿ ಇದೆ. ಟೀಂ ಇಂಡಿಯಾ ವಿರುದ್ಧ ನಡೆಯಲಿರುವ ಮೇಲ್ಬೋರ್ನ್ ಟೆಸ್ಟ್ ಪಂದ್ಯದಲ್ಲಿ 7 ವರ್ಷದ ಪೋರನೊಬ್ಬ ಆಸಿಸ್ ಪರ ಆಡಲಿದ್ದಾನೆ.
ಅರೆ ಇದೇನಪ್ಪ ಅಂತ ಗೊಂದಲಕ್ಕೀಡಾಗಬೇಡಿ ಈ 7 ವರ್ಷದ ಪೋರನ ಹೆಸರು ಆರ್ಕಿ ಷಿಲ್ಲರ್ ಆಸಿಸ್ ತಂಡದ ಕಟ್ಟಾಭಿಮಾನಿ. ಆದರೆ ಈ 7 ವರ್ಷದ ಬಾಲಕ ಹೃದಯ ಸಂಬಂಧಿ ಖಾಯಿಲೆಯಿಂದ ಬಳಲುತ್ತಿದ್ದಾನೆ.
ಹೀಗಾಗಿ ಕ್ರಿಕೆಟ್ ಆಸ್ಟ್ರೇಲಿಯಾ ಈ ಬಾಲಕನಿಗೆ ಇನ್ನು ಕೆಲವೇ ದಿನಗಳಲ್ಲಿ ನಡೆಯಲಿರುವ ಮೆಲ್ಬೋರ್ನ್ ಟೆಸ್ಟ್ ಪಂದ್ಯದಲ್ಲಿ ತಂಡದಲ್ಲಿ 12ನೇ ಆಟಗಾರನಾಗಿ ಸ್ಥಾನ ನೀಡಿ ಹೃದಯ ವೈಶಾಲ್ಯತೆ ಮೆರೆದಿದೆ.
ಈ ಪೋರ ಸಧ್ಯ ಮೆಲ್ಬೋರ್ನ್ ಅಂಗಳದಲ್ಲಿ ವೈಟ್ ಜೆರ್ಸಿ ತೊಟ್ಟು ಆಟಗಾರರೊಂದಿಗೆ ಕಠಿಣ ಅಭ್ಯಾಸ ಮಾಡಿ ಸಂತಸಪಡುತ್ತಿದ್ದಾನೆ. ಷಿಲ್ಲರ್ಗೆ ಟಿಮ್ ಪೇನ್ ಅಂದ್ರೆ ಅಚ್ಚು ಮೆಚ್ಚು. ಕೊಚ್ ಜಸ್ಟನ್ ಲ್ಯಾಂಗರ್ ಖುದ್ದು ಷಿಲ್ಲರ್ಗೆ ಫೋನ್ ಮಾಡಿ ಪರಿಚೆಯಿಸಿಕೊಂಡಿದ್ರು. ಷಿಲ್ಲರ್ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿಯನ್ನ ಔಟ್ ಮಾಡುತ್ತೇನೆ ಅಂತ ಹೇಳಿದ್ದು ಎಲ್ಲರನ್ನ ನಿಬ್ಬೆರಗಾಗುವಂತೆ ಮಾಡಿತು.