ರಾಯಚೂರು ಅಕ್ರಮ ಮರಳು ಮಾಫಿಯಾಕ್ಕೆ ಅಧಿಕಾರಿ ಬಲಿ

ರಾಯಚೂರು 22: ಅಕ್ರಮ ಮರಳು ಮಾಫಿಯಾ ರಾಯಚೂರು ಜಿಲ್ಲೆಯಲ್ಲಿ ಮಿತಿ ಮೀರಿದೆ. ತುಂಗಭದ್ರಾ ನದಿಯಿಂದ ಅಕ್ರಮವಾಗಿ ಮರಳು ಸಾಗಾಣಿಕೆ ಲಾರಿ ಪರಿಶೀಲನೆ ಮಾಡಲು ಬಂದ ಕಂದಾಯ ಇಲಾಖೆ ಅಧಿಕಾರಿ ಮೇಲೆ ಲಾರಿ ಹತ್ತಿಸಿ ಕೊಲೆಗೈದ ಘಟನೆ ನಡೆದಿದೆ.

ರಾಯಚೂರು ಜಿಲ್ಲೆಯ ಮಾನ್ವಿ ತಾಲೂಕಿನ ಚೀಕಲಪರ್ವಿ ಗ್ರಾಮದ ಬಳಿಯ ತುಂಗಭದ್ರಾ ನದಿ ಒಡಲು ಬಗೆದು ಪ್ರತಿನಿತ್ಯ ನೂರಾರು ಟ್ರಪ್ ಲಾರಿ ಮರಳು ರಾಯಚೂರು ಮೂಲಕ ಹೈದರಾಬಾದ್ ಹಾಗೂ ಬೆಂಗಳೂರಿಗೆ ಸಾಗಿಸಲಾಗುತ್ತಿದೆ.

ಸರಕಾರದ ಕಟ್ಟು ನಿಟ್ಟಿನ ಕಣ್ಗಾವಲು ತಪ್ಪಿಸಲು ಒಂದು ಟ್ರಿಪ್ ರಾಯಲ್ಟಿ ತುಂಬಿ ಹತ್ತಾರು ಲಾರಿ ಸಾಗಿಸುವ ದಂಧೆಕೋರರಿಗೆ ಕಡಿವಾಣವಿಲ್ಲವಾಗಿದೆ.

ಇಂದು ಇಂತಹುದೆ ಲಾರಿ ತಡೆಯಲು ಮಾನ್ವಿ ತಾಲೂಕಿನ ಬುದ್ದಿನ್ನಿ ಬಳಿ ಲಾರಿ ತಡೆದು ಪರಿಶೀಲಿಸಲು‌ ಮುಂದಾದ ಕಂದಾಯ ಇಲಾಖೆಯ ವಿ ಎ ಸಾಹೇಬ್ ಪಾಟೇಲ್ ಎನ್ನುವ ಅಧಿಕಾರಿ ಮೇಲೆ ಲಾರಿ ಚಾಲಕ ಲಾರಿ ಹಾಯಿಸಿದ ಪರಿಣಾಮ ಅಧಿಕಾರಿಯ ಎರಡೂ ಕಾಲಗಳು ಕತ್ತರಿಸಿದವು. ಬಳಿಕ ಅವರನ್ನು ರಾಯಚೂರು ಆಸ್ಪತ್ರೆಗೆ ಸಾಗಿಸುವ ಮಾರ್ಗದಲ್ಲಿ ಮೃತಪಟ್ಟರು.

ಹಾಲ್ದಾಳ್ ವೀರಭದ್ರಪ್ಪ ಎಂಬುವರಿಗೆ ಸೇರಿದ ಲಾರಿ ಇದು ಎಂದು ಗೊತ್ತಾಗಿದೆ.

ಮಾನ್ವಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆಯಾಗಿದ್ದು ಇನ್ನೂ ಪ್ರಕರಣ ಧಾಖಲಾದ ಮಾಹಿತಿ ಲಭ್ಯವಾಗಿಲ್ಲ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ