ಹುಬ್ಬಳ್ಳಿ-ಬಸವರಾಜ್ ಹೊರಟ್ಟಿಯವರಿಗೆ ಸಚಿವ ಸಂಪುಟದಲ್ಲಿ ಸ್ಥಾನ ಸಿಗಲಿದೆ.ಹೊರಟ್ಟಿಯವರಂತಹ ಹಿರಿಯರ ಅವಶ್ಯಕತೆ ಸರ್ಕಾರಕ್ಕೆ ಇದೆ. ಹೊಸ ವರ್ಷದಲ್ಲಿ ಹೊಸ ಸಂದೇಶ ಕೊಡುತ್ತೇವೆ ಎಂದು ಸಾರಿಗೆ ಸಚಿವ ಡಿ.ಸಿ. ತಮ್ಮಣ್ಣ ತಿಳಿಸಿದರು.
ನಗರದಲ್ಲಿಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಬಸವರಾಜ್ ಹೊರಟ್ಟಿಯವರಿಗೆ ಸಚಿವ ಸಂಪುಟದಲ್ಲಿ ಸ್ಥಾನ ಸಿಗಲಿದೆ.ಹೊ
ರಟ್ಟಿಯವರಂತಹ ಹಿರಿಯರ ಅವಶ್ಯಕತೆ ಸರ್ಕಾರಕ್ಕೆ ಇದೆ. ಸಭಾಪತಿ ಹುದ್ದೆಯಲ್ಲಿ ಮುಂದುವರಿಸಲು ಕಾಂಗ್ರೆಸ್ ಅವಕಾಶ ಕೊಡಲಿಲ್ಲ ಆದರೇ ಹೊರಟ್ಟಿಯವರು ಶಿಕ್ಷಣ ಸಚಿವರಾಗಲಿದ್ದಾರೆ ಎಂದರು. ಸಂಪುಟ ವಿಸ್ತರಣೆಯಿಂದ ಸರ್ಕಾರ ಬೀಳುತ್ತೆ ಅನ್ನುವುದು ಕೇವಲ ಊಹಾಪೋಹವಾಗಿದೆ ಎಂದು ಅವರು ತಿಳಿಸಿದರು. ಸತೀಶ್ ಮತ್ತು ರಮೇಶ್ ಜಾರಕಿಹೋಳಿ ಸಹೋದರರಾಗಿದ್ದು, ಎಲ್ಲ ಸರಿಹೋಗುತ್ತೆ ಎಂದರು.
ಹಳೆಯ ಬಸ್‌ಗಳನ್ನು ಸ್ಕ್ರ್ಯಾಪ್ ಮಾಡಲಾಗುವುದು.
ಉತ್ತರ ಕರ್ನಾಟಕ ಭಾಗಕ್ಕೆ ಉತ್ತಮ ಸಾರಿಗೆ ವ್ಯವಸ್ಥೆ ಕಲ್ಪಿಸಲಾಗುವುದು. ಅಲ್ಲದೇ ಬಿಆರ್‌ಟಿಎಸ್ ಪ್ರತ್ಯೇಕ ನಿಗಮ ಮಾಡಲು ಚಿಂತಿಸಲಾಗುತ್ತಿದೆ. ಸಾರಿಗೆ ಸಂಸ್ಥೆಗಳು ಈಗಲೇ ನಷ್ಟದಲ್ಲಿವೆ.
ಬಿಆರ್‌ಟಿಎಸ್ ವಾಯವ್ಯ ಸಾರಿಗೆಗೆ ವಹಿಸಿದರೆ ಮತ್ತಷ್ಟು ಹೊರೆಯಾಗುತ್ತೆ ಎಂದರು. ಬಿಆರ್‌ಟಿಎಸ್ ಪ್ರತ್ಯೇಕ ನಿಗಮವಾದರೆ ಕೇಂದ್ರದಿಂದ ಹಣಕಾಸಿನ ನೆರವು ಸಿಗುತ್ತೆ ಈ ಕುರಿತು ಡಿಸೆಂಬರ್ 26ರಂದು ಬೋರ್ಡ್ ಮೀಟಿಂಗ್‌ನಲ್ಲಿ ಚರ್ಚಿಸಿ ತೀರ್ಮಾನಿಸುತ್ತೇವೆ ಎಂದರು.