ಬೀಜಿಂಗ್: ಚೀನಾದ ಪ್ರಮುಖ ಇ–ಕಾಮರ್ಸ್ ಸಂಸ್ಥೆ ಅಲಿಬಾಬಾ ಮಂಗಳವಾರ ಹಾಂಗ್ ಝೌದಲ್ಲಿ ತನ್ನ ಮೊದಲ ಹೈಟೆಕ್ ಫ್ಯೂಚರಿಸ್ಟಿಕ್ ಹೋಟೆಲ್ ಅನ್ನು ಆರಂಭಿಸಿದ್ದು, ಅತಿಥಿಗಳು ತಮ್ಮ ಮುಖಗಳನ್ನು ಸ್ಕ್ಯಾನಿಂಗ್ ಮಾಡುವ ಮೂಲಕ ಚೆಕ್-ಇನ್ ಮಾಡಬಹುದು.
ಅಲಿಬಾಬಾ ತನ್ನ ಪ್ರಧಾನ ಕಚೇರಿಯನ್ನು ಹೊಂದಿರುವ ಪೂರ್ವ ಚೀನಾದ ಝೆಜಿಯಾಂಗ್ ಪ್ರಾಂತ್ಯದ ರಾಜಧಾನಿ ಹಾಂಗ್ ಝೌನಲ್ಲಿ ಈ ಫ್ಲೈಝೂ ಹೊಟೆಲ್ ಅನ್ನು ಆರಂಭಿಸಿದ್ದು, ಇದನ್ನು ಫ್ಯೂಚರ್ ಹೋಟೆಲ್ ಎಂದು ಕರೆಯಲಾಗುತ್ತಿದೆ.
ಈ ಹೋಟೆಲ್ ನಲ್ಲಿ ಮುಖ ಗುರುತಿಸುವಿಕೆ ಯಂತ್ರ ಅಳವಡಿಸಲಾಗಿದ್ದು, ಹೋಟೆಲ್ ಗೆ ಬರುವ ಅತಿಥಿಗಳು ಕೇವಲ ಮುಖ ಸ್ಕ್ಯಾನ್ ಮಾಡಿದರೆ ಸಾಕು. ಕೊಣೆಯ ರೂಮ್ ಬಾಗಿಲು ತೆರೆಯಲು ಹಾಗೂ ಹೋಟೆಲ್ ಇತರೆ ಸೌಲಭ್ಯ ಪಡೆಯಲು ತಮ್ಮ ಮುಖವನ್ನೇ ಬಳಸಬಹುದು.
ಗ್ರಾಹಕರು ತಮ್ಮ ರೂಮ್ ನಲ್ಲಿ ಧ್ವನಿಯ ಮೂಲಕ ಲೈಟ್, ಟಿವಿ ಮತ್ತು ಕರ್ಟನ್ ಗಳನ್ನು ನಿಯಂತ್ರಿಸಬಹುದು. ಅಲ್ಲದೆ ಗ್ರಾಹಕರ, ಊಟ, ತಿಂಡಿ ಮತ್ತು ಪಾನಿಯಾ ಒದಗಿಸಲು ರೋಬೋಗಳನ್ನು ನಿಯೋಜಿಸಲಾಗಿದೆ.
ಮೊಬೈಲ್ ನಲ್ಲಿ ಆ್ಯಪ್ ಡೌನ್ ಲೋಡ್ ಮಾಡುವ ಮೂಲಕ ಈ ಫ್ಯೂಚರಿಸ್ಟಿಕ್ ಹೋಟೆಲ್ ನಲ್ಲಿ ರೂಮ್ ಬುಕ್ ಮಾಡಬಹದು.
ಇ-ಕಾಮರ್ಸ್ ದೈತ್ಯ ಅಲಿಬಾಬಾ ಇತ್ತೀಚಿಗೆ ತನ್ನ ವಾರ್ಷಿಕ ಆನ್ಲೈನ್ ಶಾಪಿಂಗ್ ಸೇಲ್ನಲ್ಲಿ ಕೇವಲ 5 ನಿಮಿಷದಲ್ಲಿ 3 ಬಿಲಿಯನ್ ಡಾಲರ್( ಅಂದಾಜು 21,744 ಕೋಟಿ) ವ್ಯವಹಾರ ನಡೆಸಿ ದಾಖಲೆ ನಿರ್ಮಿಸಿತ್ತು. ಕಳೆದ ವರ್ಷ ಒಂದು ದಿನದ ಅವಧಿಯಲ್ಲಿ 25 ಬಿಲಿಯನ್ ಡಾಲರ್ ವ್ಯವಹಾರ ನಡೆಸಿದ್ದ ಅಲಿಬಾಬ ಈ ವರ್ಷ ಪ್ಯೂಚರಿಸ್ಟಿಕ್ ಹೋಟೆಲ್ ಆರಂಭಿಸಿ ಗಮನಸೆಳೆದಿದೆ.