
ಬೆಂಗಳೂರು, ಡಿ.21-ಬೆಂಗಳೂರು ಗ್ರಾಮಾಂತರ ರೈಲ್ವೆ ಪೊಲೀಸ್ ಠಾಣೆಯಲ್ಲಿ ವಿವಿಧ ಪ್ರಕರಣಗಳಲ್ಲಿ ವಿವಿಧ ನಮೂನೆಯ ದ್ವಿಚಕ್ರವಾಹನಗಳನ್ನು ವಶಪಡಿಸಿಕೊಂಡಿದ್ದು ನ್ಯಾಯಾಲಯದ ಆದೇಶದ ಮೇರೆಗೆ ಡಿ.23 ರಂದು ಮಧ್ಯಾಹ್ನ 3 ಗಂಟೆಗೆ ಬೆಂಗಳೂರು ಗ್ರಾಮಾಂತರರೈಲ್ವೆ ಪೊಲೀಸ್ ಠಾಣಾ ಆವರಣದಲ್ಲಿ ಬಹಿರಂಗ ಹರಾಜು ಮಾಡಲಾಗುವುದು.
ಈ ವಾಹನಗಳು ಸವಕಳಿಯಾಗಿದ್ದು, ತೂಕದ ಲೆಕ್ಕದಲ್ಲಿ ಹರಾಜು ಮಾಡಲಾಗುವುದು.ಇವುಗಳು ಮರು ನೋಂದಣಿಗೆ ಅರ್ಹವಾಗಿರುವುದಿಲ್ಲ.
ಆಸಕ್ತರು ನೋಂದಾಯಿಸಿ ಹರಾಜು ಪ್ರಕ್ರಿಯೆಯಲ್ಲಿ ಭಾಗವಹಿಸಲು ಕೋರಲಾಗಿದೆ.