
ಬೆಂಗಳೂರು, ಡಿ.21-ಚಾಲುಕ್ಯ ವೃತ್ತದಿಂದ ಮೌರ್ಯ ವೃತ್ತದವರೆಗಿನ ರಸ್ತೆಗೆ ಇತ್ತೀಚೆಗೆ ನಿಧನರಾದ ರೆಬೆಲ್ಸ್ಟಾರ್ ಅಂಬರೀಶ್ ಅವರ ಹೆಸರನ್ನು ನಾಮಕರಣ ಮಾಡಲು ಬಿಬಿಎಂಪಿ ತೀರ್ಮಾನಿಸಿದೆ.
ಅಂಬರೀಶ್ ಅವರಿಗೆ ಪಾಲಿಕೆ ಸಭೆಯಲ್ಲಿ ಶ್ರದ್ಧಾಂಜಲಿ ಸಲ್ಲಿಸುವ ಸಂದರ್ಭದಲ್ಲಿ ಹಲವು ಸದಸ್ಯರು ನಗರದ ಯಾವುದಾದರೂ ರಸ್ತೆಗೆ ಅಂಬಿ ಹೆಸರಿಟ್ಟು ಅವರ ನಾಮ ಚಿರಸ್ಥಾಯಿಯಾಗಿರುವಂತೆ ಮಾಡಬೇಕೆಂದು ಒತ್ತಾಯಿಸಿದ್ದರು.
ಚಲನಚಿತ್ರ ವಾಣಿಜ್ಯ ಮಂಡಳಿ ಸ್ಥಳ ರೇಸ್ಕೋರ್ಸ್ ರಸ್ತೆಗೆ ಹೊಂದಿಕೊಂಡಿದ್ದು, ಈ ರಸ್ತೆಗೆ ಅಂಬಿ ಹೆಸರಿನ್ನಿಡುವುದು ಸೂಕ್ತ ಎಂದು ಕೆಲವು ಸದಸ್ಯರು ಸಲಹೆ ನೀಡಿದ್ದರು.
ಈ ಬಗ್ಗೆ ಬಿಬಿಎಂಪಿ ವಾಣಿಜ್ಯ ಮಂಡಳಿ ಹಾಗೂ ಕಲಾವಿದರ ಸಲಹೆ ಕೇಳಿತ್ತು. ರಾಕ್ಲೈನ್ ವೆಂಕಟೇಶ್ ಸೇರಿದಂತೆ ಚಿತ್ರರಂಗದ ಹಲವು ಗಣ್ಯರು ಪಾಲಿಕೆ ವೃತ್ತದಿಂದ ಮೌರ್ಯ ವೃತ್ತದವರೆಗಿನ ರಸ್ತೆಗೆ ಅಂಬಿ ಹೆಸರಿಡುವುದು ಸೂಕ್ತ ಎಂದು ಹೇಳಿದ್ದರು.
ಅವರ ಸಲಹೆ ಮೇರೆಗೆ ಈ ರಸ್ತೆಗೆ ಅಂಬಿ ಹೆಸರು ನಾಮಕರಣ ಮಾಡಲು ಇದೇ 27, 28 ರಂದು ನಡೆಯಲಿರುವ ಪಾಲಿಕೆ ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಗುವುದು.