10 ದಿನಗಳ ಈ ಅಧಿವೇಶನದಲ್ಲಿ ಒಟ್ಟು 40ಗಂಟೆ 45ನಿಮಿಷ ಕಲಾಪ ನಡೆದಿದೆ, ಸ್ಪೀಕರ್ ರಮೇಶ್ ಕುಮಾರ್

ಬೆಳಗಾವಿ (ಸುವರ್ಣಸೌಧ), ಡಿ.21- ಹದಿನೈದನೆ ವಿಧಾನಸಭೆಯ ಬೆಳಗಾವಿಯಲ್ಲಿ ನಡೆದ 10 ದಿನಗಳ ಎರಡನೆ ಅಧಿವೇಶನದ ಕಲಾಪ 40 ಗಂಟೆ, 45 ನಿಮಿಷಗಳ ಕಾಲ ನಡೆದಿದ್ದು, ಎಂಟು ವಿಧೇಯಕಗಳ ಅಂಗೀಕಾರ, ರಾಜೀವ್‍ಗಾಂಧಿ ವಿವಿಗೆ ಮೂವರು ಸದಸ್ಯರ ನಾಮನಿರ್ದೇಶನ ಸೇರಿದಂತೆ ಹಲವು ನಿರ್ಣಯಗಳನ್ನು ಕೈಗೊಳ್ಳಲಾಗಿದೆ ಎಂದು ಸಭಾಧ್ಯಕ್ಷ ರಮೇಶ್‍ಕುಮಾರ್ ತಿಳಿಸಿದರು.

ಕಲಾಪ ಮುಂದೂಡಿದ ನಂತರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಸಂತಾಪ ಸೂಚಕ ನಿರ್ಣಯ ಪೂರಕ ಅಂದಾಜು, 2018-19ನೆ ಸಾಲಿನ ಹಣಕಾಸಿನ ಮಧ್ಯವಾರ್ಷಿಕ ಪರಿಶೀಲನಾ ವರದಿ, ನಗರ ಸ್ಥಳೀಯ ಸಂಸ್ಥೆಗಳಲ್ಲಿ ಘನತ್ಯಾಜ್ಯ ನಿರ್ವಹಣೆ ಮೇಲಿನ ಲೆಕ್ಕ ಪರಿಶೋಧನಾ ವರದಿ ಮತ್ತು ಸರ್ಕಾರಿ ಭೂಮಿ ಮಂಜೂರಾತಿ ಗುತ್ತಿಗೆ ಒತ್ತುವರಿಗಳ ತೆರವುಗೊಳಿಸುವಿಕೆ ಹಾಗೂ ಅಕ್ರಮ ಇಡುವಳಿಗಳನ್ನು ಸಕ್ರಮಗೊಳಿಸುವಿಕೆ ವರದಿಗಳನ್ನು ಮಂಡಿಸಲಾಗಿದೆ.

ಹಿಂದುಳಿದ ವರ್ಗಗಳ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಸಮಿತಿಯ ಮಧ್ಯಂತರ ವರದಿ, ಅನುಸೂಚಿತ ಜಾತಿ ಮತ್ತು ಪಂಗಡ ಕಲ್ಯಾಣ ಸಮಿತಿಯ ಮೊದಲನೆ ವರದಿ ಮಂಡನೆಯಾಗಿದೆ.ನಿಯಮ-60ರಡಿ ಒಟ್ಟು ನಾಲ್ಕು ಸೂಚನೆಗಳನ್ನು ಸ್ವೀಕರಿಸಲಾಗಿದ್ದು, ಎರಡು ಸೂಚನೆಗಳನ್ನು ನಿಯಮ-69ಕ್ಕೆ ಪರಿವರ್ತಿಸಲಾಗಿದೆ.ಶೂನ್ಯವೇಳೆಯಡಿ 24 ಸೂಚನೆಗಳ ಮೇಲೆ ಚರ್ಚೆ ನಡೆಸಲಾಗಿದೆ.ಪ್ರಸ್ತುತ ಅಧಿವೇಶನದಲ್ಲಿ ಇಬ್ಬರು ಸದಸ್ಯರುಗಳ ಖಾಸಗಿ ನಿರ್ಣಯ ಸ್ವೀಕರಿಸಲಾಗಿದೆ.

89 ವಾರ್ಷಿಕ ವರದಿಗಳು, 73 ಲೆಕ್ಕಪರಿಶೋಧನಾ ವರದಿಗಳು, ಒಂದು ವಿಶೇಷ ವರದಿ, ಒಂದು ಆಯವ್ಯಯ ಪಟ್ಟಿ, ಪರಿಷ್ಕøತ ಆಯವ್ಯಯ ಪಟ್ಟಿ ಹಾಗೂ ಮೂರನೆ ಪಟ್ಟಿಯಲ್ಲಿ ಮೂರು ಅಧಿಸೂಚನೆಗಳನ್ನು ಮಂಡಿಸಲಾಗಿದೆ.2018ನೆ ಸಾಲಿನ ರೈ ತಾಂತ್ರಿಕ ವಿಶ್ವವಿದ್ಯಾಲಯ, ಬೆಂಗಳೂರು ತಿದ್ದುಪಡಿ ವಿಧೇಯಕ ಅಂಗೀಕರಿಸಲಾಗಿದೆ ಎಂದು ಹೇಳಿದರು.

ಪತ್ರಿಕಾಗೋಷ್ಠಿಯಲ್ಲಿ ಉಪಸಭಾಧ್ಯಕ್ಷ ಶಿವಶಂಕರ್‍ರೆಡ್ಡಿ ಇದ್ದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ