ಬೆಂಗಳೂರು,ಡಿ.20-ಬಿಬಿಎಂಪಿಯಲ್ಲಿ ಆಂಜನೇಯ ಗುಡಿ ನಿರ್ಮಾಣದ ಬಗ್ಗೆ ಹಾಲಿ ಮಾಜಿ ಸದಸ್ಯರ ನಡುವೆ ಕಿತ್ತಾಟ ಉಂಟಾಗಿದೆ. ಒಂದು ಬಣ ದೇವಸ್ಥಾನ ಬೇಕು ಎಂದು ಪಟ್ಟು ಹಿಡಿದರೆ ಮತ್ತೊಂದು ಬಣ ಬೇಡವೆಂದು ಹಠ ಹಿಡಿದಿದೆ.
ಹನುಮ ಜಯಂತಿ ಹಿನ್ನೆಲೆಯಲ್ಲಿ ಹನುಮನಿಗೆ ಗುಡಿ ನಿರ್ಮಾಣ ಮಾಡಲು ಒಂದು ಬಣ ಮುಂದಾಗಿತ್ತು.2*4 ಅಳತೆಯಲ್ಲಿ ಸಣ್ಣ ದೇವಸ್ಥಾನ ನಿರ್ಮಿಸಲು ನೌಕರರ ಸಂಘ ಇಚ್ಛಿಸಿತ್ತು.ಆದರೆ ಇದಕ್ಕೆ ಮಾಜಿ ಸದಸ್ಯರು ವಿರೋಧ ವ್ಯಕ್ತಪಡಿಸಿ ನಿವೃತ್ತ ನೌಕರರ ಕಚೇರಿಗೆ ಜಾಗ ಬೇಕೆಂದು ಪಟ್ಟು ಹಿಡಿದಿದ್ದಾರೆ.
ನೌಕರರ ಸಂಘದ ಮುಂದೆ ಹಲವು ವರ್ಷಗಳಿಂದ ಆಂಜನೇಯ ಪ್ರತಿಮೆ ಬಿಸಿಲು, ಮಳೆ ಗಾಳಿಗೆ ನಿಂತಿದೆ. ಈ ಹಿನ್ನೆಲೆಯಲ್ಲಿ ನೌಕರರು ಗುಡಿ ನಿರ್ಮಿಸಲು ಮುಂದಾಗಿದ್ದರು.ಆದರೆ ಅವರ ಆಸೆ ಕೈಗೂಡಿಲ್ಲ. ಹಾಗಾಗಿ ಈಗಲೂ ಬಯಲಿನಲ್ಲೇ ಆಂಜನೇಯಮೂರ್ತಿ ಅನಾಥವಾಗಿ ನಿಂತಂತಾಗಿದೆ.ಇಲ್ಲೇ ಕೆಲ ಸದಸ್ಯರು ಪೂಜೆ ಮಾಡಿ ಹೋಗಿದ್ದಾರೆ.
ಒಟ್ಟಾರೆ ಹಾಲಿ-ಮಾಜಿ ಸದಸ್ಯರ ಕಿತ್ತಾಟದಿಂದಾಗಿ ಆಂಜನೇಯ ಗುಡಿ ಇಲ್ಲದಂತಾಗಿದ್ದಾನೆ.