ಬೆಂಗಳೂರು, ಡಿ.19- ಸಣ್ಣ ಮತ್ತು ಮಧ್ಯಮ ಕೈಗಾರಿಕೋದ್ಯಮಿಗಳು ಅನೇಕ ಕಾಯ್ದೆಗಳಿಂದ ನೋವು ಅನುಭವಿಸುತ್ತಿದ್ದು, ಏಕಗವಾಕ್ಷಿ ಪದ್ಧತಿಜಾರಿ ಮೂಲಕ ಸುಧಾರಣೆ ತರುವ ಅವಶ್ಯಕತೆ ಇದೆ ಎಂದು ಅಡ್ವೊಕೇಟ್ ಜನರಲ್ ಉದಯ್ ಹೊಳ್ಳ ಇಂದಿಲ್ಲಿ ಹೇಳಿದರು.
ಕಾಸಿಯಾ ವತಿಯಿಂದ ಇಂದು ಹಮ್ಮಿಕೊಂಡಿದ್ದಎಂಎಸ್ಎಂಇ ವಿಳಂಬ ಪಾವತಿ ಕಾಯ್ದೆ-2006 ಕುರಿತು ಒಂದು ದಿನದ ಜಾಗೃತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಕೈಗಾರಿಕೋದ್ಯಮಿಗಳು ತೊಂದರೆತೆಗೆದುಕೊಂಡು ಸಣ್ಣಕೈಗಾರಿಕೋದ್ಯಮ ಪ್ರಾರಂಭಿಸಿ ನಿರುದ್ಯೋಗಿಗಳಿಗೆ ಉದ್ಯೋಗಕಲ್ಪಿಸುವಲ್ಲಿ ಯಶಸ್ವಿಯಾಗಿದ್ದಾರೆ.ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳ ಅಭಿವೃದ್ದಿ ಕಾಯ್ದೆ-2006ರ ಅಡಿಯಲ್ಲಿ ಎಂಎಸ್ಎಸ್ಸಿ ಸಮಾಧಾನ್-ಸೂಕ್ಷ್ಮ, ಸಣ್ಣ ಕೈಗಾರಿಕೆಗಳಿಗೆ ವಿಳಂಬ ಪಾವತಿಯಿಂದಅವರಿಗೆ ಭಾರೀ ಅನಾನುಕೂಲವಾಗುತ್ತಿದ್ದು, ಇದು ನಷ್ಟಕ್ಕೂ ಕಾರಣವಾಗುತ್ತಿದೆಎಂದು ಹೇಳಿದರು.
ಕಾಸಿಯಾ ಗೌರವಾಧ್ಯಕ್ಷ ಬಸವರಾಜ್ ಎಸ್.ಜವಳಿ ಮಾತನಾಡಿ, ಸೂಕ್ಷ್ಮ ಮತ್ತು ಸಣ್ಣ ಉದ್ದಿಮೆಗಳು ಉದ್ಯೋಗ ಮತ್ತು ಬೆಳವಣಿಗೆ ದೃಷ್ಟಿಯಿಂದಕರ್ನಾಟಕದಲ್ಲಿ ಬಹು ಮುಖ್ಯ ವಲಯವಾಗಿದೆ. ಆದರೆ ಇವು ಕಾರ್ಯನಿರ್ವಹಿಸುವ ದುರ್ಬಲ ಪರಿಸರ ವ್ಯವಸ್ಥೆಯಿಂದಾಗಿ ಬಹು ದೊಡ್ಡ ಸವಾಲನ್ನುಎದುರಿಸುವಂತಾಗಿದೆಎಂದರು.
ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಉದ್ದಿಮೆಗಳ ಅಭಿವೃದ್ದಿಕಾಯ್ದೆ, 2006ರನ್ವಯ ಸೂಕ್ಷ್ಮ ಮತ್ತು ಸಣ್ಣ ಉದ್ದಿಮೆಗಳು ಸರಬರಾಜು ಮಾಡಿದ ವಸ್ತು/ಸೇವೆಗಳಿಗೆ ಸಂಬಂಧಿಸಿದಂತೆ ಖರೀದಿದಾರರು ಹಣವನ್ನು ಪಾವತಿ ಮಾಡಲು ವಿಳಂಬವಾದ ಪ್ರಕರಣಗಳನ್ನು ಇತ್ಯರ್ಥಗೊಳಿಸಲು ಸೂಕ್ಷ್ಮ ಮತ್ತು ಸಣ್ಣ ಉದ್ದಿಮೆಗಳ ಸಹಾಯ ಸೌಲಭ್ಯ ಪರಿಷತ್ತನ್ನುರಚಿಸಲಾಗಿದೆಎಂದರು.
ಸುಪ್ರೀಂಕೋರ್ಟ್ ನ್ಯಾಯಮೂರ್ತಿ ಸುರೇಶ್ಧೋಲೆ ಮಾತನಾಡಿ, ಸೂಕ್ಷ್ಮ ಮತ್ತು ಸಣ್ಣಉದ್ದಿಮೆದಾರರು ಸರಬರಾಜು ಮಾಡಿದ ವಸ್ತುಗಳ/ಒದಗಿಸಿದ ಸೇವೆಗಳ ಬಗ್ಗೆ ಪಾವತಿಯು ವಿಳಂಬವಾಗಿದ್ದಲ್ಲಿಎಂಎಸ್ಎಂಇ ಸಮಾಧಾನ್ ಪೆÇೀರ್ಟಲ್ನಲ್ಲಿಅರ್ಜಿ ಸಲ್ಲಿಸಬೇಕು.15 ದಿನಗಳ ನಂತರಆಯಾ ವಿಭಾಗದ ಸದಸ್ಯ ಕಾರ್ಯದರ್ಶಿಗಳಿಗೆ ಎಂಎಸ್ಇಎಫ್ಸಿ ಅರ್ಜಿ, ಸ್ಟೇಟ್ಮೆಂಟ್ಅಫ್ ಬಿಲ್ಸ್, ಬಿಲ್, ಖರೀದಿ ಆದೇಶ, ವ್ಯವಹಾರದ ಪತ್ರಗಳು, ಯಂತ್ರೋಪಕರಣಗಳ ಮೇಲಿನ ಬಂಡವಾಳದ ಬಗ್ಗೆ ಸಿಎ ಸರ್ಟಿಫಿಕೇಟ್ ಮತ್ತು ನೋಟರಿ ಮಾಡಿದಅಫಿಡವಿಟ್ ದಾಖಲೆಗಳನ್ನು ಸಲ್ಲಿಸಬೇಕುಎಂದು ತಿಳಿಸಿದರು.
ಕಾಸಿಯಾ ಈ ಕಾಯ್ದೆ ಬಗ್ಗೆ ಜಾಗೃತಿ ಮೂಡಿಸಲು ಕಾಸಿಯಾ ಹೆಲ್ಪ್ಡೆಕ್ಸ್ ಸ್ಥಾಪಿಸಿ ಸಣ್ಣ ಕೈಗಾರಿಕೋದ್ಯಮಿಗಳಿಗೆ ಅನುಕೂಲ ಕಲ್ಪಿಸಿಕೊಡಬೇಕೆಂದು ತಿಳಿಸಿದ ಅವರು, ಈ ಕಾಯ್ದೆಯ ಸದುಪಯೋಗವನ್ನು ಪಡೆದುಕೊಳ್ಳಬೇಕೆಂದು ಆಶಿಸಿದರು.
ಕಾರ್ಯಕ್ರಮದಲ್ಲಿ ಕಾಸಿಯಾದ ಪ್ರಧಾನ ಕಾರ್ಯದರ್ಶಿ ರವಿಕಿರಣ್ಕುಲಕರ್ಣಿ, ಉಪಾಧ್ಯಕ್ಷಆರ್.ರಾಜು, ಜಂಟಿ ಕಾರ್ಯದರ್ಶಿಗಳಾದ ಸುರೇಶ್ಎನ್.ಸಾಗರ್, ಎಸ್.ವಿಶ್ವೇಶ್ವರಯ್ಯ, ಖಜಾಂಚಿ ಶ್ರೀನಾಥ್ ಭಂಡಾರಿಉದ್ಯಾವರ್, ಎಂಎಸ್ಎಂಇ ಸಮಿತಿಅಧ್ಯಕ್ಷರಾಜಗೋಪಾಲ್ ಸೇರಿದಂತೆ ಸುಪ್ರೀಂ ಹಾಗೂ ಮುಂಬೈ ಹೈಕೋರ್ಟ್ ವಕೀಲರು ಪಾಲ್ಗೊಂಡಿದ್ದರು.