ಬೆಂಗಳೂರಿನಲ್ಲಿ ಇನ್ನು ಮುಂದೆ ಪಾರ್ಕಿಂಗ್ ಮಾಫಿಯಾಕ್ಕೆ ಕಡಿವಾಣ ಹಾಕಲಿರುವ ಸರ್ಕಾರ

ಬೆಂಗಳೂರು,ಡಿ.19:ಬೃಹತ್ ವಾಣಿಜ್ಯ ಕಟ್ಟಡಗಳು, ಮಾಲ್‍ಗಳು, ಚಲನಚಿತ್ರ ಮಂದಿರಗಳು, ಹಲವು ಪ್ರಮುಖರಸ್ತೆ ಬದಿಗಳ ಮುಂದೆ ಮನಬಂದಂತೆ ಪಾರ್ಕಿಂಗ್ ಶುಲ್ಕ ವಸೂಲಿ ಮಾಡಿ, ಬಿಬಿಎಂಪಿಗೆ ವಂಚಿಸುತ್ತಿದ್ದವರನ್ನು ಮಟ್ಟ ಹಾಕಲು ಸರ್ಕಾರ ಮುಂದಾಗಿದೆ.

ವಾಣಿಜ್ಯ ಕಟ್ಟಡಗಳಲ್ಲಿ ಪಾರ್ಕಿಂಗ್ ಶುಲ್ಕ ರದ್ದುಗೊಳಿಸುವಂತೆ ಕೋರಿ ಮಾಹಿತಿ ಹಕ್ಕು ಅಧ್ಯಯನ ಕೇಂದ್ರದ ವ್ಯವಸ್ಥಾಪಕ ಟ್ರಸ್ಟಿ ಎಸ್.ಅಮರೇಶ್‍ ಅವರು ದಾಖಲಾತಿ ಒಳಗೊಂಡ ದೂರನ್ನು ಮುಖ್ಯಮಂತ್ರಿಎಚ್.ಡಿ.ಕುಮಾರಸ್ವಾಮಿಯವರಿಗೆ ಸಲ್ಲಿಸಿದ್ದು, ಇದರ ಮೇಲೆ ಸೂಕ್ತ ಕ್ರಮ ಕೈಗೊಳ್ಳುವಂತೆ ಬಿಬಿಎಂಪಿಗೆ ಸೂಚನೆ ನೀಡಿದ ಹಿನ್ನೆಲೆಯಲ್ಲಿ ಪಾರ್ಕಿಂಗ್ ಶುಲ್ಕ ರದ್ದಾಗುವ ಸಾಧ್ಯತೆಯಿದೆ.

ಮೈಸೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ವಾಣಿಜ್ಯಚಟುವಟಿಕೆ ನಡೆಸುವ ಕಟ್ಟಡದಲ್ಲಿ ಪಾರ್ಕಿಂಗ್ ಶುಲ್ಕ ವಸೂಲು ಮಾಡದಂತೆ ಪಾಲಿಕೆ ನಿರ್ಣಯಕೈಗೊಂಡಿದೆ.ಅದೇರೀತಿ ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿಇರುವ ಎಲ್ಲಾ ವಾಣಿಜ್ಯ ಕಟ್ಟಡಗಳಲ್ಲಿ ಉಚಿತ ಪಾರ್ಕಿಂಗ್ ವ್ಯವಸ್ಥೆಒದಗಿಸುವ ನಿರ್ಣಯವನ್ನು ಬಿಬಿಎಂಪಿ ಸಭೆಯಲ್ಲೂ ಕೈಗೊಳ್ಳುವ ಸಾಧ್ಯತೆಯಿದೆ.

ಕಟ್ಟಡದ ಮಾಲೀಕರುಕಟ್ಟಡ ನಕ್ಷೆ ಮಂಜೂರಾತಿ ಸಂದರ್ಭದಲ್ಲಿ ಪಾರ್ಕಿಂಗ್‍ಗಾಗಿಜಾಗವನ್ನು ಮೀಸಲಿಟ್ಟ ನಂತರ ನಕ್ಷೆಯನ್ನು ಮಂಜೂರು ಮಾಡಿಕೊಡಲಾಗುತ್ತದೆ.ಉಚಿತ ಪಾರ್ಕಿಂಗ್‍ ಒದಗಿಸುವುದು ಅವರ ಕರ್ತವ್ಯವಾಗಿರುತ್ತದೆ.ವಾಣಿಜ್ಯ ಕಟ್ಟಡಗಳಲ್ಲಿ ಮಾತ್ರವಲ್ಲದೇ ಚಿತ್ರಮಂದಿರಗಳಲ್ಲಿ, ಶಾಲಾ ಕಾಲೇಜುಗಳಲ್ಲಿ ಕೂಡ ಪಾರ್ಕಿಂಗ್ ವಸೂಲಿ ದಂಧೆ ನಡೆಯುತ್ತಿದೆ.ಪಾರ್ಕಿಂಗ್ ಶುಲ್ಕದಿಂದ ಕಟ್ಟಡ ಮಾಲೀಕರಿಗೆ ಕೋಟ್ಯಂತರರೂ. ವರಮಾನವಿದ್ದರೂ ಯಾವುದೇ ತೆರಿಗೆಕಟ್ಟುವುದಿಲ್ಲ. ಪಾರ್ಕಿಂಗ್‍ಗೆ ಮೀಸಲಿಟ್ಟಜಾಗವನ್ನು ಬೇರೆ ಉದ್ದೇಶಕ್ಕೆ ಬಳಸಿ ನಿಯಮಗಳನ್ನು ಉಲ್ಲಂಘಟನೆ ಮಾಡಿರುವ ಹಲವು ಪ್ರಕರಣಗಳನ್ನು ಉಲ್ಲೇಖಿಸಿ ನೀಡಿರುವದೂರಿನ ಹಿನ್ನೆಲೆಯಲ್ಲಿ ಸೂಕ್ತ ಕ್ರಮ ಕೈಗೊಳ್ಳುವಂತೆ ಮುಖ್ಯಮಂತ್ರಿಗಳು ಸೂಚಿಸಿರುವ ಹಿನ್ನೆಲೆಯಲ್ಲಿ ಪಾರ್ಕಿಂಗ್ ಶುಲ್ಕ ರದ್ದುಪಡಿಸುವ ಸಾಧ್ಯತೆಇದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ