ಬೆಂಗಳೂರು, ಡಿ.19- ಮೊಬೈಲ್ನಲ್ಲಿ ಮಾತನಾಡುತ್ತಾ ಮನೆಯಿಂದ ಹೊರಗೆ ಬಂದ ವ್ಯಕ್ತಿ ಆಕಸ್ಮಿಕವಾಗಿ ಮೆಟ್ಟಿಲಿನ ಮೇಲೆ ಕಾಲಿಟ್ಟು ಜಾರಿಕೊಂಡು ಕೆಳಗೆ ಬಿದ್ದು ಮೃತಪಟ್ಟಿರುವ ಘಟನೆ ಅಶೋಕನಗರ ಪೆÇಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ಪಶ್ಚಿಮ ಬಂಗಾಳ ಮೂಲದ ವಿಷ್ಣು (35) ಮೃತಪಟ್ಟ ವ್ಯಕ್ತಿ.
ಖಾಸಗಿ ಕಂಪೆನಿಯೊಂದರ ನೌಕರನಾಗಿದ್ದ ವಿಷ್ಣು ಆನೆಪಾಳ್ಯದ 7ನೇ ಕ್ರಾಸ್ನ ಮನೆಯೊಂದರ ಎರಡನೇ ಮಹಡಿಯಲ್ಲಿ ವಾಸವಾಗಿದ್ದರು.ರಾತ್ರಿ 9.30ರಲ್ಲಿ ಮನೆಯಲ್ಲಿದ್ದ ವಿಷ್ಣು ಮೊಬೈಲ್ಗೆ ಕರೆ ಬಂದಿದೆ. ರೂಂನಿಂದ ಮಾತನಾಡುತ್ತಾ ಮನೆಯ ಹೊರಗೆ ಬಂದಾಗ ಆಕಸ್ಮಿಕವಾಗಿ ಮೆಟ್ಟಿಲಿನ ಬಳಿ ಕಾಲು ಜಾರಿ ಉರುಳಿ ಬಿದಿದ್ದಾರೆ.
ಪರಿಣಾಮವಾಗಿ ತಲೆಗೆ ತೀವ್ರಪೆಟ್ಟಾಗಿದೆ. ತಕ್ಷಣಇವರನ್ನು ಆಸ್ಪತ್ರೆಗೆ ಕರೆದೊಯ್ಯುತ್ತಿದ್ದಾಗ ಮಾರ್ಗಮಧ್ಯೆ ಮೃತಪಟ್ಟಿದ್ದಾರೆ. ಈ ಬಗ್ಗೆ ಅಶೋಕನಗರ ಠಾಣೆಯಲ್ಲಿ ಪ್ರಕರಣದಾಖಲಾಗಿದೆ.






