ಸಂಪುಟ ವಿಸ್ತರಣೆಯಲ್ಲಿ ಒಂದೆರಡು ಸ್ಥಾನಗಳು ಬದಲಾಗಬಹುದು : ದಿನೇಶ್ ಗುಂಡೂರಾವ್

 ಬೆಂಗಳೂರು, ಡಿ.19. ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್  ಸಂಪುಟ ವಿಸ್ತರಣೆಯಲ್ಲಿ ಒಂದೆರಡು ಸ್ಥಾನಗಳು ಬದಲಾಗಬಹುದು ಕೆಲವರನ್ನು ಕೈಬಿಟ್ಟು ಹೊಸಬರನ್ನು ಸೇರ್ಪಡಿಸಿಕೊಳ್ಳಲಾಗುವುದು ಎಂಬ ಹೇಳಿಕೆಗೆ ಅವರನ್ನೇ ಕೇಳಿ ನನ್ನನ್ನು ಯಾಕೆ ಕೇಳುತ್ತಿದ್ದೀರಿ ನಾನು ಗುಂಡೂರಾವ್ ನಾಲಿಗೆನಾ? ಎಂದು ಮಾಜಿ ಸಿಎಮ್ ಸಿದ್ದರಾಮಯ್ಯ ಗರಂ ಆಗಿದ್ದರು. ಬಾಗಲಕೋಟೆ ಜಿಲ್ಲೆ ಬಾದಾಮಿ ಪ್ರವಾಸದ ವೇಳೆ ಸಂಪುಟ ವಿಸ್ತರಣೆ ಬಗ್ಗೆ ಕೇಳಿದಾಗ ಸಮರ್ಪಕವಾಗಿ ಉತ್ತರಿಸದೆ,ಈ ಪ್ರಶ್ನೆ ನನ್ನನ್ಯಾಕೆ ಕೇಳ್ತೀರಿ, ಅವ್ರನ್ನೇ ಕೇಳಿ ಎಂದು ಗರಂ ಆದ್ರು.
ಉತ್ತರ ಕರ್ನಾಕಟಕ್ಕೆ ಅನ್ಯಾವಾಗಲು‌ ನಾನು ಬಿಡೋದಿಲ್ಲ, ಉತ್ತರ ಕರ್ನಾಟಕಕ್ಕೂ ನ್ಯಾಯ ಸಿಗಬೇಕು, ದಕ್ಷಿಣ ಕರ್ನಾಟಕ ಹಾಗೂ ಕೋಸ್ಟಲ್ ಏರಿಯಾಗೂ ನ್ಯಾಯ ಸಿಗಬೇಕು ಎಂದ್ರು.  ಅಲ್ಲದೇ ಸಭಾಪತಿ ಆಯ್ಕೆ ವಿಚಾರದ ಬಗ್ಗೆ ನಿಮಗೆ ಸಮಾಧಾನ ತಂದಿದಿಯಾ ಎಂಬ ಪ್ರಶ್ನೆಗೆ ಪ್ರತಿಕ್ರಿಯಸಿ, ರಾಜಕೀಯದಲ್ಲಿ ಸಮಾಧಾನ ಅಸಮಾಧಾನ ಎಂಬ ವಿಚಾರ ಇರೋದಿಲ್ಲ, ಸಭಾಪತಿ ಆಯ್ಕೆ ವಿಚಾರದಲ್ಲಿ ನಾನು ಎಸ್ ಆರ್ ಪಾಟೀಲ್ ಹೆಸರು ಸೂಚಿಸಿದ್ದು ನಿಜ ಆದರೆ ಆಯ್ಕೆ ಮಾಡಿದ್ದು ಹೈಕಮಾಂಡ್ ಎಂದು ಬೇಸರ ವ್ಯಕ್ತಪಡಿಸಿದ್ರು.
ಇನ್ನು ರಫೇಲ್ ಯುದ್ಧ ವಿಮಾನ ಖರೀದಿ ಪ್ರಕರಣಲ್ಲಿ, ಬಿಜೆಪಿ ಭ್ರಷ್ಟಾಚಾರವನ್ನೇ ಮಾಡಿಲ್ಲ ಎಂದು ಸುಪ್ರೀಂ ಕೋರ್ಟ್ ತೀರ್ಪು ನೀಡಿಲ್ಲ, ಬಿಜೆಪಿಯವ್ರು ಸತ್ಯ ಹರಿಶ್ಚಂದ್ರ ಆಗಿದ್ರೆ ಜಂಟಿ ಸದನ ಸಮಿತಿಗೆ ಪ್ರಕರಣ ಕೊಡ್ಲಿ ನೋಡೋಣ ಎಂದು ಸವಾಲ್ ಎಸೆದರು. ಕಳ್ಳತನ ಮಾಡಿ ಸಿಕ್ಕಾಕೊಳ್ಳತೀವಿ ಅಂತಾ ಬಿಜೆಪಿಯವರು ಜಂಟಿ ಸದನ ಸಮಿತಿಗೆ ಕೊಡುತ್ತಿಲ್ಲ, ಹಿಂದೆ ರಾಜೀವ್ ಗಾಂಧಿ ಅವರ ಕಾಲದ ಬೊಪೊರ್ಸ್ ಹಗರಣವನ್ನು  ಜಂಟಿ ಸದನ ಸಮಿತಿಗೆ ಕೊಡಲಾಗಿತ್ತು. ಆದ್ರೆ ಈಗ ಬಿಜೆಪಿಯವ್ರು ರಫೇಲ್ ಡೀಲ್ ಹಗರಣವನ್ನು ಏಕೆ ಕೊಡ್ತಿಲ್ಲ,ಸುಮ್ಮನೆ ಸತ್ಯ ಹರಿಶ್ಚಂದ್ರ ರಂತೆ ಪ್ರತಿಭಟನೆ ಅದು ಇದು ಅಂತ ನಾಟಕ ಮಾಡುತ್ತಿದ್ದಾರೆ ಎಂದರು.ಇನ್ನು ಸಚಿವ ಸಂಪುಟ ವಿಸ್ತರಣೆಯಾದ್ರೂ, ಆಗದಿದ್ರೂ ಸರ್ಕಾರ ಬೀಳುತ್ತೆ ಎಂದ ಜಗದೀಶ್ ಶೆಟ್ಟರ್ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯಿಸಿ, ಅವ್ರು ಸರ್ಕಾರ ಬೀಳ್ಳುತ್ತೆ, ಬೀಳುತ್ತೆ ಅಂತಾ ಕಾಯ್ತಾ ಕೂಡಲಿ, ಸರ್ಕಾರನೂ ಬೀಳಲ್ಲ, ಏನೂ ಆಗಲ್ಲ ಎಂದು ವ್ಯಂಗ್ಯವಾಡಿದ್ರು…  ಸಂಪುಟ ವಿಸ್ತರಣೆ ಬಗ್ಗೆ ಮಾತನಾಡುತ್ತಾ ನಾನು ಸಿಎಮ್ ಆದಾಗ ಇಂತಹ ಸಮಸ್ಯೆ ಆಗದೆ ಇರೋ ಹಾಗೆ ನೋಡಿಕೊಂಡಿದ್ದೆ.ಆದರೆ ಈಗ ಸಮ್ಮಿಶ್ರ ಸರಕಾರ ಎಲ್ಲವನ್ನು ಸರಿಯಾಗಿ ನೋಡಿಕೊಂಡು ಹೋಗಬೇಕಾಗುತ್ತೆ ಎಂದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ