ದೊಡ್ಡ ಬಳ್ಳಾಪುರ: ಶುಲ್ಕದ ವಿಚಾರವಾಗಿ ರೈತನ ಮೇಲೆ ಟೋಲ್ ಸಿಬ್ಬಂದಿ ಹಲ್ಲೆ ನಡೆಸಿ ಗೂಂಡಾಗಿರಿ ನಡೆಸಿದ್ದಾರೆ ಅಂತ ರೈತರು ಆರೋಪಿಸಿ ರೈತರು ರಾತ್ರೋರಾತ್ರಿ ಪ್ರತಿಭಟನೆಗೆ ಇಳಿದಿದ್ದಾರೆ.
ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ-ಯಲಹಂಕ ಮಾರ್ಗದ ನಡುವೆ ಇರುವ ಕಡತನಮಲೆ ಸುಂಕ ವಸೂಲಾತಿ ಸಿಬ್ಬಂದಿ ವಿರುದ್ಧ ರೈತರು ಪ್ರತಿಭಟನೆ ನಡೆಸಿದ್ದಾರೆ.
ಮಂಗಳವಾರ ನಸುಕಿನ ವೇಳೆ ಸುಮಾರು 2 ಗಂಟೆಗೆ ದೊಡ್ಡಬಳ್ಳಾಪುರ ತಾಲೂಕಿನ ತುರುವನಹಳ್ಳಿ ಗ್ರಾಮದ ರೈತ ಹಾಗೂ ಚಾಲಕ ವಿಜಯ್ ಕುಮಾರ್ ತನ್ನ ಬೊಲೆರೋ ವಾಹನದಲ್ಲಿ ಹೂ ಸೇರಿದಂತೆ ತರಕಾರಿಗಳನ್ನ ಬೆಂಗಳೂರಿನ ಮಾರುಕಟ್ಟೆಗೆ ತೆಗೆದುಕೊಂಡು ಹೋಗುತ್ತಿದ್ದರು. ಈ ವೇಳೆ ಟೋಲ್ ಶುಲ್ಕ ಪಾವತಿಸುವಂತೆ ಟೋಲ್ ಸಿಬ್ಬಂದಿ ತಾಕೀತು ಮಾಡಿದ್ದಾರೆ. ವಾರಕ್ಕೆ ಎರಡು ಮೂರಿ ಬಾರಿ ಇದೇ ಟೋಲ್ ಮುಖಾಂತರ ಬೆಂಗಳೂರಿಗೆ ಸಂಚರಿಸುತ್ತಿದ್ದ ವಿಜಯ್ ಕುಮಾರ್ ಗೆ ಈ ಹಿಂದೆ ಸ್ಥಳೀಯರು ಅನ್ನೋ ಕಾರಣಕ್ಕೆ ಟೋಲ್ ಶುಲ್ಕ ಕೇಳುತ್ತಿರಲಿಲ್ಲವಂತೆ. ಹೀಗಾಗಿ ಹಿಂದೆ ಕೇಳುತ್ತಿರಲಿಲ್ಲ ಈಗ ಯ್ಯಾಕೆ ಕೊಡಬೇಕು ಅಂತ ಪ್ರಶ್ನೆ ಮಾಡಿದ್ದಾರೆ.

ಈ ವೇಳೆ ಮಾತಿನ ಚಕಮಕಿ ನಡೆದು ಪರಿಸ್ಥಿತಿ ವಿಕೋಪಕ್ಕೆ ಹೋಗಿದೆ. ಆಗ 10 ಮಂದಿ ಗೂಂಡಾಗಳನ್ನ ಕರೆಸಿದ ಟೋಲ್ ಸಿಬ್ಬಂದಿ ನನ್ನ ಮೇಲೆ ಹಲ್ಲೆ ನಡೆಸಿ ಗೂಂಡಾಗಿರಿ ನಡೆಸಿದ್ದಾರೆ ಅಂತ ರೈತ ವಿಜಯ್ ಕುಮಾರ್ ದೂರಿದ್ದಾರೆ. ಮತ್ತೊಂದೆಡೆ ಮಧ್ಯರಾತ್ರಿಯೇ ಬೊಲೆರೋ ವಾಹನವನ್ನ ಸುಂಕ ವಸೂಲಾತಿ ಕೇಂದ್ರದಲ್ಲಿ ಅಡ್ಡ ಹಾಕಿ ಹೂ ತರಕಾರಿ ಇಟ್ಟು ರೈತರು ಪ್ರತಿಭಟನೆ ನಡೆಸಿದ್ದಾರೆ.
ಬೆಳಿಗ್ಗೆಯೂ ಪ್ರತಿಭಟನೆ ಮುಂದುವರಿಸಿರುವ ರೈತ ವಿಜಯ್ ಕುಮಾರ್ ವಾಹನ ಸವಾರರು, ಬಸ್ ಗಳಲ್ಲಿ ಸಂಚರಿಸುವ ಪ್ರಯಾಣಿಕರಿಗೆ ತನ್ನ ಮೇಲಾದ ಹಲ್ಲೆ ವಿಷಯ ತಿಳಿಸುತ್ತಾ ವಿನೂತನ ಪ್ರತಿಭಟನೆಗೆ ಮುಂದಾಗಿದ್ದಾರೆ. ರೈತನ ಮೇಲೆ ಹಲ್ಲೆ ಗಲಾಟೆ ಆದ ಸಂದರ್ಭದಲ್ಲಿ ವಿಡಿಯೋ ಮಾಡಿದ್ದೆ, ಆದರೆ ಮೊಬೈಲ್ ಕಿತ್ತುಕೊಂಡ ಟೋಲ್ ಗೂಂಡಾಗಳು ಅದನ್ನು ಡಿಲೀಟ್ ಮಾಡಿ ಕೊಟ್ಟಿದ್ದಾರೆ. ಕೊನೆಗ ಕಾಲಿಗೆ ಬಿದ್ದು ಕ್ಷಮೆ ಕೇಳಿದ ನಂತರ ಮೊಬೈಲ್ ವಾಪಸ್ ಕೊಟ್ಟಿದ್ದಾರೆ ಎಂದು ವಿಜಯ್ ಕುಮಾರ್ ಅಳಲು ತೋಡಿಕೊಂಡಿದ್ದಾರೆ.
ಈ ಸಂಬಂಧ ರಾಜಾನುಕುಂಟೆ ಪೊಲೀಸರಿಗೆ ರೈತ ವಿಜಯ್ ಕುಮಾರ್ ದೂರು ನೀಡಲು ಮುಂದಾಗಿದ್ದಾರೆ.