ಬೆಳಗಾವಿ, ಡಿ.18- ಪ್ರಶ್ನೆ ಕೇಳಿ ಪ್ರಶ್ನೋತ್ತರ ವೇಳೆಯಲ್ಲಿ ಶಾಸಕರು ಹಾಜರಿರದಿದ್ದರೆ ಅವರ ಪ್ರಶ್ನೆಯನ್ನೇ ಮುದ್ರಿಸದಿರಲು ಸೂಚಿಸಬೇಕಾಗುತ್ತೆ ಎಂದು ಸಭಾಧ್ಯಕ್ಷ ರಮೇಶ್ಕುಮಾರ್ ಎಚ್ಚರಿಸಿದರು.
ಆಡಳಿತ ಪಕ್ಷ ಮುಖ್ಯ ಸಚೇತಕ ಗಣೇಶ್ ಹುಕ್ಕೇರಿ ಅವರ್ನು ಉದ್ದೇಶಿಸಿ ಎಲ್ಲಿ ನಿಮ್ಮ ಶಾಸಕರು ಬಂದಿಲ್ಲ. ಪ್ರಶ್ನೆ ಕೇಳಿ ಸದನಕ್ಕೆ ಬಾರದಿದ್ದರೆ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದರು.
ಬಂಟ್ವಾಳ ಶಾಸಕ ರಾಜೇಶ್ ನಾಯಕ್ ಅವರು ಪ್ರಶ್ನೋತ್ತರ ವೇಳೆಯಲ್ಲಿ ಸಭಾಧ್ಯಕ್ಷರು ಕರೆದಾಗ ಹಾಜರಿರಲಿಲ್ಲ. ಆ ಸಂದರ್ಭದಲ್ಲಿ ಸಭಾಧ್ಯಕ್ಷರು ಮೇಲಿನಂತೆ ಉತ್ತರಿಸಿದರು.