
ಬೆಂಗಳೂರು,ಡಿ.17-ಜನಪ್ರಿಯ ನಾಯಕ ನಟ ಶ್ರೀಮುರಳಿ ಇಂದು ತಮ್ಮ 37ನೆ ಜನ್ಮದಿನ ಆಚರಿಸಿಕೊಂಡರು.
ನಡುರಾತ್ರಿ ಅವರು ತಮ್ಮ ತಂದೆ, ತಾಯಿ, ಪತ್ನಿ,ಮಗು ಹಾಗೂ ಇವರ ಆತ್ಮೀಯರೊಂದಿಗೆ ಸೇರಿ ಕೇಕ್ ಕತ್ತರಿಸಿದರು. ಆನಂತರ ಜಯನಗರದ ಶಾಲಿನಿ ಆಟ ಮೈದಾನದಲ್ಲಿ ಅಭಿಮಾನಿಗಳು ಆಯೋಜಿಸಿದ್ದ ಸಮಾರಂಭಕ್ಕೆ ಶ್ರೀಮುರಳಿ ತೆರಳಿದರು.
ಆಟದ ಮೈದಾನದಲ್ಲಿ 37 ಕಿಲೋ ತೂಕದ ಕೇಕ್ ಸಿದ್ಧಪಡಿಸಿ ಇಟ್ಟಿದ್ದರು. ಅದನ್ನು ಕಟ್ ಮಾಡಿ ವಿಕಲಾಂಗರಿಗೆ ಧನ ಸಹಾಯ ಮಾಡಿದರಲ್ಲದೆ, 37 ಮಂದಿ ಮಂಗಳಮುಖಿಯರಿಗೆ ಸೀರೆ ನೀಡಿದರು. 37 ಸಾವಿರ ರೂ.ಬೆಲೆಬಾಳುವ ಪಟಾಕಿ ತರಿಸಿ ಸಿಡಿಸಿದರು.
ಶ್ರೀಮುರಳಿ ಅಭಿನಯದ ಮದಗಜ ಎಂಬ ಚಿತ್ರದ ಟೀಸರ್ ಮತ್ತು ಫಸ್ಟ್‍ಲುಕ್ ಅನ್ನು ಅರ್ದನ್ ಅವರು ಬಿಡುಗಡೆ ಮಾಡಿದರು.