ಕ್ರಿಸ್ಮಸ್ ಹಾಗೂ ಹೊಸವರುಷದ ಆಚರಣೆ ಸಂಬಂಧ ಚಿತ್ರಕಲಾ ಪರಿಷತ್ನಲ್ಲಿ ಕಲಾಕೃತಿಗಳ ಪ್ರದರ್ಶನ

ಬೆಂಗಳೂರು, ಡಿ.17-ಕಿಸ್ಮಸ್ ಹಾಗೂ ಹೊಸವರುಷದ ಆಚರಣೆಯ ನಡುವೆ ಉದ್ಯಾನನಗರಿಯು ಕಲಾರಸಿಕರ ಮನತಣಿಸುವುದಕ್ಕಾಗಿ ಸುಂದರವಾದ ಕಲಾಕೃತಿಗಳ ಪ್ರದರ್ಶನಕ್ಕೆ ಸಜ್ಜುಗೊಳ್ಳುತ್ತಿದೆ.

ಕಲಾವಿದರಾದ ಶೋಭಾನ ಉದಯ್‍ಶಂಕರ್ ಅವರ ಟ್ರೆಡಿಷನಲ ಮೈಸೂರು ಕಲಾಕೃತಿಗಳು ಮೊದಲ ಬಾರಿಗೆ ಬೆಂಗಳೂರಿನ ಚಿತ್ರಕಲಾ ಪರಿಷತ್‍ನಲ್ಲಿ ಇದೇ ಡಿ.21ರಿಂದ 26ರವರೆಗೆ ಸುಂದರವಾದ ಕಲಾಕೃತಿಗಳ ಪ್ರದರ್ಶನ ಹಮ್ಮಿಕೊಂಡಿದೆ.

ಡಿ.21 ರಂದು ಕಲಾಪ್ರದರ್ಶನದ ಉದ್ಘಾಟನಾ ಕಾರ್ಯಕ್ರಮ ನಡೆಯಲಿದೆ. ಹಾಗೇ ಕಲಾಪ್ರೇಮಿಗಳು ಈ ಸುಂದರ ಕಲಾಕೃತಿಗಳ ಸೊಬಗನ್ನು ಕಣ್ತುಂಬಿಸಿಕೊಳ್ಳಬಹುದು.

ಈ ಕುರಿತು ಮಾತನಾಡಿದ ಶೋಭಾನ ಉದಯ್‍ಶಂಕರ್, ಕಲೆ ಎನ್ನುವುದು ಭಾವೋದ್ರೇಕಕ್ಕಿಂತಲೂ ಹೆಚ್ಚಾದದ್ದು.ಇದು ನನ್ನ ಬದುಕಿಗೊಂದು ಹೊಸ ಅರ್ಥ ನೀಡಿದೆ.ಹೀಗಾಗಿ ಈ ಮೈಸೂರು ಕಲೆ ಎನ್ನುವುದು ನನ್ನ ಪಾಲಿಗೆ ಮಹತ್ವದ್ದಾಗಿದೆ.ಪ್ರಮುಖವಾದವುಗಳನ್ನು ಬದಿಗೆ ಸರಿಸಿದೆ ಮರುಶೋಧಿಸುವುದಾಗಿದೆ. ಹಾಗೇ 20 ವರ್ಷದ ನನ್ನ ಭಾವಾನಾತ್ಮಕ ಪಯಣವನ್ನು ಈ ಕಲೆಯ ಮೂಲಕ ಹಂಚಿಕೊಳ್ಳುವುದಾಗಿದೆ. ಈ ಕಲಾ ರೂಪದ ಸಂಕೀರ್ಣತೆಯು ದೈಹಿಕ ಹಾಗೂ ಮಾನಸಿಕ ನಿರೂಪಕವಾಗಿದೆ.ಆಳವಾಗಿ ನೋಡಿದರೆ ಆಧ್ಯಾತ್ಮಿಕ ಅರ್ಥವನ್ನು ಈ ಕಲೆಯ ಶ್ರಮ ತಿಳಿಸುತ್ತದೆ ಎಂದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ